ನಮ್ಮ ಮೆಟ್ರೋಗೆ ಭದ್ರತಾ ಬೆಟಾಲಿಯನ್ ನೇಮಕಕ್ಕೆ ಸರ್ಕಾರ ಸಮ್ಮತಿ

ಬೆಂಗಳೂರು, ಮೇ 17: ನಮ್ಮ ಮೆಟ್ರೋ ಪ್ರಯಾಣಿಕರ ಹಿತದೃಷ್ಟಿಯಿಂದ ನಮ್ಮ ಮೆಟ್ರೋ ಸಂಸ್ಥೆಗೆ ಕೆಎಸ್‌ಐಎಸ್‌ಎಫ್ ಮಂದಿಯುಳ್ಳ ಬಟಾಲಿಯನ್‌ನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್ ನಲ್ಲಿ 1350 ಮಂದಿ ಸಿಬ್ಬಂದಿ ಇರಲಿದ್ದು, ಮೆಟ್ರೋ ಸಂಸ್ಥೆಯೇ ಈ ಸಿಬ್ಬಂದಿಗೆ ವೇತನ, ಭತ್ಯೆ ಭರಿಸಲಿದೆ.

ಕಮಾಂಟೆಂಡ್ 1, ಡೆಪ್ಯೂಟಿ ಕಮಾಂಡೆಂಟ್ 2, ಅಸಿಸ್ಟೆಂಟ್ ಕಮಾಂಡೆಂಟ್ 5, ಪೊಲೀಸ್ ಇನ್‌ಸ್ಪೆಕ್ಟರ್ 10, ಪಿಎಸ್‌ಐ 93, ಎಎಸ್‌ಐ 51, ಹೆಡ್‌ಕಾನ್‌ಸ್ಟೇಬಲ್ 65, ಕಾನ್‌ಸ್ಟೇಬಲ್ 1018, ಅನುಯಾಯಿಗಳು 105 ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

Karnataka will get special industrial security force

ಕರ್ನಾಟಕ ಪೊಲೀಸ್ ಅಕಾಡೆಮಿ ತರಬೇತಿ ಸಂಸ್ಥೆ ಹಾಗೂ ಧಾರವಾಡ ಹೈಕೋರ್ಟ್ ಪೀಠ, ಮೈಸೂರು ಅರಮನೆ, ಖಾಸಗಿ ಸಂಸ್ಥೆಗಳಾದ ಮಂಗಳೂರಿನ ಇನ್ಫೋಸಿಸ್, ಬೆಂಗಳೂರಿನ ಟರ್ಫ್ ಕ್ಲಬ್ ಹಾಗೂ ಆರ್‌ಬಿಐನ ಮಾರ್ಗಸೂಚಿಯಂತೆ ರಾಜ್ಯದಲ್ಲಿನ ವಿವಿಧ ಬ್ಯಾಂಕ್‌ಗಳಿಗೆ ಒಂದು ಭದ್ರತಾ ಪಡೆಯ ಅವಶ್ಯಕತೆ ಇದೆ.

ಪ್ರಸ್ತುತ ಕೆಎಸ್‌ಆರ್‌ಪಿ, ಸಿಆರ್, ಡಿಆರ್ ಮತ್ತು ಐಆರ್‌ಬಿ ಘಟಕಗಳನ್ನು ಬಂದೋಬಸ್ತ್ ವಿವಿಐಪಿ ಭದ್ರತೆ, ಗನ್ ಮ್ಯಾನ್ ಮತ್ತು ಇತರೆ ಕರ್ತವ್ಯಗಳಲ್ಲದೆ ವಿಶೇಷ ಘಟಕಗಳಿಗೂ ಕೂಡ ನಿಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+