5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ

ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೊರ ರಾಜ್ಯಗಳಿಂದ ಬರುವ ಜನರಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ.

ವಿಶೇಷವಾಗಿ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಗುಜರಾತ್‌ನಿಂದ ಬರುವ ವಿಮಾನ, ರೈಲು ಹಾಗೂ ವಾಹನಗಳಿಗೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ''ಹೊರ ರಾಜ್ಯಗಳಿಂದ ಬಂದಿರುವವರ ಟೆಸ್ಟ್ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆ ಬೇರೆಯವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ. ಬ್ಯಾಚ್ ಬೈ ಬ್ಯಾಚ್ ಕರೆಸಿಕೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.

 Karnataka suspends arrivals of flights and trains from Maharashtra Gujarat Tamil Nadu

ಈ ನಿಟ್ಟಿನಲ್ಲಿ ನೆರೆ ರಾಜ್ಯಗಳಿಂದ ವಿಮಾನ, ರೈಲು ಹಾಗೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಳ್ಳ ದಾರಿಗಳ ಮೂಲಕ ಬರುವ ಜನರಿಗೆ ರಾಜ್ಯಕ್ಕೂ ಪ್ರವೇಶ ಇಲ್ಲ ಎಂದು ಗೃಹ ಸಚಿವ ತಿಳಿಸಿದ್ದಾರೆ.

''ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಬರುವವರಿಗೆ ಹೊಸ ಪಾಸ್ ಕೊಡಲು ನಿರ್ಬಂಧ ಇದೆ. ಮೇ 31 ರವರೆಗೂ ಹೊಸ ಪಾಸ್ ಕೊಡುವುದಿಲ್ಲ. ರಾಜ್ಯದಲ್ಲಿ ‌ಕ್ವಾರಂಟೈನ್ ಸಮಸ್ಯೆಗಳಿವೆ. ಆ ಸಮಸ್ಯೆ ಬಗೆಹರಿಯುವವರೆಗೂ ಹೊಸ ಪಾಸ್ ಗಳನ್ನು ಕೊಡುವುದಿಲ್ಲ. ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ನಿಗಾ ಇಡಲಾಗಿದೆ. ಕಳ್ಳ ಮಾರ್ಗಳನ್ನು ಮುಚ್ಚಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ' ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕಳೆದ ಹತ್ತು ದಿನಗಳಿಂದ ಕರ್ನಾಟಕದಲ್ಲಿ ಸತತವಾಗಿ ಸೋಂಕಿತರ ಸಂಖ್ಯೆ ಏರಿದೆ. ಹತ್ತು ದಿನದ ಒಟ್ಟು ಕೇಸ್‌ಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಗುಜರಾತ್‌ನಿಂದ ಬಂದವರೆ ಹೆಚ್ಚು. ಈ ಕಾರಣದಿಂದ ಈ ರಾಜ್ಯಗಳಿಂದ ಬರುವವರಿಗೆ ಸರ್ಕಾರ ನಿರ್ಬಂಧ ಹೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+