ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.5ರಂದು ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ಬೃಹತ್ ಟೆಂಡರ್ ಕರೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ, ಡಿಸೆಂಬರ್ 5ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಮಾತನಾಡಿದರು. ಅಂದು ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್‌ ಟೆಂಡರ್‌ ಕರೆಯುವ ಆದೇಶ ಹಿಂಪಡೆಯಬೇಕು. ಈ ರೀತಿ ಟೆಂಡರ್‌ನಿಂದ ಸಮಸ್ಯೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಅದಾನಿ, ಟಾಟಾ, ಎಸ್ಸಾರ್ ಗ್ರೂಪ್‌ನಿಂದ ಬೃಹತ್ ಹೂಡಿಕೆ ಅದಾನಿ, ಟಾಟಾ, ಎಸ್ಸಾರ್ ಗ್ರೂಪ್‌ನಿಂದ ಬೃಹತ್ ಹೂಡಿಕೆ

ಒಂದು ಲಕ್ಷ ರೂ.ಮೌಲ್ಯದಿಂದ ಹಿಡಿದು 5 ಲಕ್ಷ ರೂ.ಒಳಗಿನ ಮೊತ್ತದ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೇ ನೀಡಬೇಕು. ಬೆಳಕು ಯೋಜನೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನೀಡುತ್ತಿರುವ ದರವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಲ್ಲಿ ಜಾರಿಗೆ ತರಬೇಕು. ಈ ಯೋಜನೆಯ ಕಾಮಗಾರಿ ನಿರ್ವಹಿಸಿರುವ ಬಿಲ್‌ಗಳಿಗೆ ಬಜೆಟ್‌ ಬಿಡುಗಡೆ ಮಾಡಬೇಕು ಎಂದು ರಾಜ್ಯಾಧ್ಯಕ್ಷರು ಸೇರಿದಂತೆ ಸಂಘದ ಸದಸ್ಯರು ಮನವಿ ಮಾಡಿದರು.

Karnataka State Electrical Contractors Protest from Dec.5 for urge several demands fulfilled.

ಕೃಷಿಕರಿಗೂ ಅನನುಕೂಲ, ಏಕರೂಪ ನಿಯಮ ಜಾರಿ

ಇದಲ್ಲದೇ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತತ್ಕಾಲ್‌ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಲಾಗಿದೆ. ಈ ನೀತಿಯಿಂದಾಗಿ ರಾಜ್ಯದ ಲಕ್ಷಾಂತರ ಕೃಷಿಕರಿಗೆ ಅನನುಕೂಲವಾಗಿದೆ. ಎಲ್ಲಾ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಿಗೂ ಏಕರೂಪದ ಕೆಇಆರ್‌ಸಿ ನಿಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ, ನೀರಾವರಿ ನಿಗಮ, ಮಹಾನಗರ ಪಾಲಿಕೆ, ಪಂಚಾಯತ್‌ ರಾಜ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿವಿಲ್‌ ಕಾಮಗಾರಿಗಳ ಜೊತೆಜೊತೆಗೆ ವಿದ್ಯುತ್‌ ಕಾಮಗಾರಿಗಳನ್ನು ಒಟ್ಟಗೂಡಿ ಟೆಂಡರ್ ಕರೆಯುತ್ತಿರುವ ಪ್ರಕ್ರಿಯೆಯನ್ನು ಕೊನೆ ಹಾಡಬೇಕು. ಎರಡಕ್ಕೂ ಪ್ರತ್ಯೇಕ ಟೆಂಡರ್ ಆಹ್ವಾನಿಸಬೇಕು. ಸರ್ವರ್‌ ಹಾಗೂ ಮಾಪಕಗಳ (ಮೀಟರ್‌) ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಸರ್ಕಾರ ಆದಷ್ಟು ಶೀಘ್ರವೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಎನ್. ಉಮೇಶ್‌, ಎಚ್‌. ಎ. ಚಂದ್ರಬಾಬು, ಅನ್ವರ್‌ ಮಿಯಾ, ಶಿವಾನಂದ ಬಿ. ಹಾಲಪ್ಪನವರ್‌, ಕೆ ಚಂದ್ರಬಾಬು, ಶಿವರಾಜು ಐ. ಬಿ. ಮತ್ತಿತರರು ಉಪಸ್ಥಿತರಿದ್ದರು.

English summary
Karnataka State Electrical Contractors Protest from Dec.5 for urge several demands fulfilled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X