ಇಂದು ಕರ್ನಾಟಕ SSLC ಫಲಿತಾಂಶ ಪ್ರಕಟ: ರಿಸಲ್ಟ್ಸ್ ನೋಡೋದು ಹೇಗೆ?
2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಮಂಗಳವಾರ(ಏಪ್ರಿಲ್ 30)ದಂದು ಪ್ರಕಟವಾಗಲಿದೆ.
ಬೆಳಿಗ್ಗೆ 11:30 ರ ವೇಳೆಗೆ ಸುದ್ದಿಗೋಷ್ಠಿ ನಡೆಸಲಿರುವ ಪ್ರೌಢ ಶಿಕ್ಷಣ ಮಂಡಳಿ ಫಲಿತಾಂಶವನ್ನು ಪ್ರಕಟಿಸಲಿದೆ.

ಪ್ರೌಢ ಶಿಕ್ಷಣ ಮಂಡಳಿಯ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 1 ಗಂಟೆಯ ಬಳಿಕವಷ್ಟೇ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ ಒಟ್ಟು 2,847 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಫಲಿತಾಂಶ ನೋಡೋದು ಹೇಗೆ?
ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ ನಡೆದ 10 ನೇ ತರಗತಿ ಫಲಿತಾಂಶವನ್ನು ಪ್ರೌಢ ಶಿಕ್ಷಣ ಮಂಡಳಿ 11:30 ಕ್ಕೆ ಘೋಷಿಸಲಿದ್ದರೆ, ನಂತರ ಸುಮಾರು 1:30 ರ ಸುಮಾರಿಗೆ ಪ್ರೌಡ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in, kaceb.kar.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ, ನಂತರ ತಮ್ಮ ರಿಜಿಸ್ಟ್ರೇಶನ್ ಸಂಖ್ಯೆಯನ್ನು ನೀಡಿದರೆ ಫಲಿತಾಂಶವನ್ನು ತಿಳಿಯಬಹುದಾಗಿದೆ.











Click it and Unblock the Notifications