'ಎಂ-ಆಡಳಿತ' ಜಾರಿಗೆ ಸಿದ್ದರಾಮಯ್ಯ ಸರ್ಕಾರ ಸಜ್ಜು

ಬೆಂಗಳೂರು, ನ. 20: ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದೀರಿ, ಏನಾಗಿದೆಯೋ ಗೊತ್ತಿಲ್ಲ, ವಿದ್ಯುತ್ ಬಿಲ್ ತುಂಬಲು ಸಮಯವಿಲ್ಲ, ಹೃದ್ರೋಗಿಯೋರ್ವನಿಗೆ ಪ್ರತಿ ಬಾರಿ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಲು ಹಣವಿಲ್ಲ... [ಆಧಾರ್ ನೋಂದಣಿ ಮತ್ತಷ್ಟು ಸುಲಭ]

ಇಷ್ಟೇ ಅಲ್ಲದೆ, ದೈನಂದಿನ ಅನೇಕ ಅಗತ್ಯ ಕಾರ್ಯಗಳಿಗಾಗಿ ವಿವಿಧ ಸೇವಾ ಕೇಂದ್ರಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಲ್ಲುವುದು ಇಂದಿನ ವೇಗದ ಜಗತ್ತಿನಲ್ಲಿ ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿದ್ದರೂ ಇಂದಿನ ದಿನದ ವೇಗಕ್ಕೆ ಹೊಂದಿಕೊಳ್ಳುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ನಿವಾರಿಸಲು ಕರ್ನಾಟಕ ಸರ್ಕಾರ ಮೊಬೈಲ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. [ಆಧಾರ್ ಮಾಹಿತಿ ಬದಲಾವಣೆ ಹೇಗೆ]

siddu

ರಾಜ್ಯ ಸರ್ಕಾರ ಮೊಬೈಲ್ಒನ್ (ಎಂ-ಒನ್) ಎಂಬ ಆಪ್ ಅಭಿವೃದ್ಧಿಪಡಿಸಿದೆ. ಈ ಆಪ್‌ನಲ್ಲಿ 4,281 ಸೇವೆಗಳು ಲಭ್ಯವಿರುತ್ತವೆ..! ಇದೇ ವರ್ಷ ಡಿಸೆಂಬರ್ 8ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿನಲ್ಲಿ ಜನಸೇವೆಗೆ ಅರ್ಪಿಸಲಿದ್ದಾರೆ. ಈ ಮೂಲಕ ಎಂ-ಆಡಳಿತ ಜಾರಿಗೊಳಿಸಿದ ದೇಶದ ಪ್ರಥಮ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ. [ಸಕಾಲಕ್ಕೆ ರಾಷ್ಟ್ರೀಯ ಪ್ರಶಸ್ತಿ]

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಕಾಂಗ್ರೆಸ್ ಸರ್ಕಾರ ಆಮೆ ವೇಗದಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸಾವಿರಾರು ಸರ್ಕಾರಿ ಸೇವೆಗಳು ಜನರ ಮೊಬೈಲ್ ಪರದೆಯಲ್ಲಿಯೇ ಸಿಗಲಿದೆ. ಇದಕ್ಕಾಗಿ ಜನರು ಒಂದು ಸ್ಮಾರ್ಟ್‌ಫೋನ್ ಖರೀದಿಸಿ, ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಷ್ಟೇ. [ಸಕಾಲ ಸೇವೆ ಆನ್ ಲೈನ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+