ಸಿಎಂ ಮಹತ್ವಾಕಾಂಕ್ಷಿ ಯೋಜನೆಗೆ ಬಿಬಿಎಂಪಿ ಅಡ್ಡಿ- ಮಹಿಳೆಯರು ಓದಲೇಬೇಕಾದ ಸುದ್ದಿ
ಬೆಂಗಳೂರು, ಜುಲೈ 15: ಮನೆಯಲ್ಲಿ ಹೆಣ್ಣು ಮಕ್ಕಳ ಋತುಸ್ರಾವದ ಸಮಸ್ಯೆಯನ್ನು ಕಂಡಿರುವವರು ಯಾರು ಈ ಯೋಜನೆಗೆ ಅಡ್ಡಿಯನ್ನು ಪಡಿಸುವುದಿಲ್ಲ. ಮಹಿಳಾ ಪೌರ ಕಾರ್ಮಿಕರು, ಕಾಲೇಜು ಯುವತಿಯರು, ಮಹಿಳೆಯರಿಗಾಗಿ ಸ್ಯಾನಿಟರಿ ನ್ಯಾಪ್ಕಿನ್ ವೆಡ್ಡಿಂಗ್ ಇನ್ಸಿನೇಟರ್ ಕಾಂಬೋ ಮಿಷನ್ ಅಳವಡಿಕೆಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕಾರ್ಯದರ್ಶಿ ಬಿಬಿಎಂಪಿಗೆ ಪತ್ರ ಬರೆದಿದದ್ದರು. ಬಿಬಿಎಂಪಿ ದಿವ್ಯ ಅಸಡ್ಡೆಗೆ ಯೋಜನೆ ಟೆಂಡರ್ ನಡೆಯದೇ ನೆಲಕಚ್ಚಿದೆ. ಆ ಮೂಲಕ ಬಿಬಿಎಂಪಿ ಮಹಿಳೆಯರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅವಮಾನವನ್ನು ಮಾಡುತ್ತಿದೆ. ಈ ಕುರಿತು ಮಹತ್ವದ ದಾಖಲೆಯೊಂದಿಗೆ 'ಒನ್ ಇಂಡಿಯಾ ಕನ್ನಡ' ವರದಿಯನ್ನು ಮಾಡ್ತಿದೆ.
ಹೆಣ್ಣು ಮಕ್ಕಳು ಕೆಲವು ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಋತುಸ್ರಾವದ ಸಂಕಟವಂತೂ ವಿಪರೀತವಾದದ್ದು. ತಿಂಗಳ ಮೂರು ದಿನವೋ 5 ದಿನವೋ ಹೆಂಗಳೆಯರು ವಿಪರೀತ ಹೊಟ್ಟೆ ನೋವು ಸಂಕಟವನ್ನು ಅನುಭವಿಸುತ್ತಾರೆ. ಮನೆಯ ಹೊರಗೆ ಹೋಗಬೇಕಾದವರು ಕೆಲವೊಮ್ಮೆ ನರಕವನ್ನು ಅನುಭವಿಸುತ್ತಾರೆ.
ಹೆಣ್ಣಿನ ಹೆಣ್ತನಕ್ಕೆ ಋತುಸ್ರಾವ ಅನ್ನೋದು ಸಹಜ ಪ್ರಕ್ರಿಯೆ. ಆದರೆ ಈ ಸಮಯದಲ್ಲಿ ಆಕೆ ಅನುಭವಿಸುವ ವೇದನೆ ಅಂತಿದ್ದಲ್ಲ. ಕೆಲವು ಮನೆಯಲ್ಲಿನ ಕಟ್ಟುಪಾಡುಗಳು ಈಗಲೂ ಮುಂದುವರೆದಿದೆ. ಇನ್ನು ಕಚೇರಿಗೋ , ಶಾಲಾ ಕಾಲೇಜಿಗೋ ತೆರಳುವು ಯುವತಿಯರು, ಮಹಿಳೆಯರು ಋತುಸ್ರಾವವಾಗಿ ವಿಲವಿಲ ಒದ್ದಾಡಿ ಬಿಡುತ್ತಾರೆ. ಇಂಥಹ ಸಮಯದಲ್ಲಿ ಮಹಿಳೆಯರಿಗೆ ಉಂಟಾಗುವ ಮುಜುಗರವನ್ನು ತಪ್ಪಿಸಲು ಯೋಜನೆಯನ್ನು ಕ್ರಮವನ್ನು ಕೈಗೊಳ್ಳುವ ಜವಾಬ್ದಾರಿ ಸರಕಾರ ಮತ್ತು ಬಿಬಿಎಂಪಿಯದ್ದಾಗಿದೆ.

ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ
ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಗರ ಸ್ವಚ್ಛತೆ ಮತ್ತು ಮಹಿಳೆಯರು ವಿದ್ಯಾರ್ಥಿನಿ, ಪೌರ ಕಾರ್ಮಿಕರು ಆರೋಗ್ಯದ ದೃಷ್ಟಿಯಿಂದ ಶುಭ್ರ ಬೆಂಗಳೂರು ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಇನ್ಸಿನೇಟರ್ ಕಾಂಬೋ ಮಿಷಿನ್ ಅಳವಡಿಸಲು, ನಿರ್ವಹಣೆ ಮಾಡುವ ಯೋಜನೆ ಜಾರಿಗೆ ನಿಯಮಾನುಸಾರ ಟೆಂಡರ್ ಕರೆಯಲು ಮುಖ್ಯ ಆಯುಕ್ತರಿಗೆ ಸೂಚಿಸುವಂತೆ ಕೋರಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲು ಮುಖ್ಯಮಂತ್ರಿಗಳಿಂದ ನಿರ್ದೇಶಿತನಾಗಿದ್ದೇನೆ ಎಂದು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಕಳೆದ 2021ರ ಅಕ್ಟೋಬರ್‍ನಲ್ಲಿ ಪತ್ರವನ್ನು ಬರೆದರು ಕುಂಟು ನೆಪವನ್ನು ಹೇಳುತ್ತ ಟೆಂಡರ್ ಪ್ರಕ್ರಿಯನ್ನೇ ನಡೆಸದೇ ನಿರ್ಲಕ್ಷ್ಯವಹಿಸಲಾಗುತ್ತಿದೆ.

ಬಿಬಿಎಂಪಿಗೆ ಇದರ ಅಗತ್ಯವೇನು?
ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಭ್ರ ಬೆಂಗಳೂರು ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ವೆಡ್ಡಿಂಗ್ ಮತ್ತು ಇನ್ಸಿನೇಟರ್ ಕಾಂಬೋ ಮಿಷಿನ್ ಅಳವಡಿಸುವ ಯೋಜನೆ ಇದಾಗಿದೆ. ಸರಕಾರ ಮಹಿಳೆಯ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಯೋಜನೆ ಹಮ್ಮಿಕೊಳ್ಳಲು ಉದ್ದೇಶಿತವಾಗಿದೆ. ಇದಕ್ಕೆ ಸ್ಥಳೀಯ ಆಡಳಿತ ಸಂಸ್ಥೆ ಕೈಜೋಡಿಸಬೇಕಿದೆ. ಇದಕ್ಕಾಗಿಯೇ ಬಿಬಿಎಂಪಿ ಟೆಂಡರ್ ಕರೆಯುವಂತೆ ಸೂಚನೆಯನ್ನು ನೀಡಲಾಗಿರುವುದು. ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಹೆಣ್ಣು ಮಕ್ಕಳು ಋತುಸ್ರಾವದ ಸಮಯದಲ್ಲಿ ಬಳಸುತ್ತಾರೆ. ರಕ್ತಸ್ರಾವವನ್ನು ಹೀರಿಕೊಳ್ಳುವ ಸ್ಯಾನಿಟರಿ ನ್ಯಾಪ್ಕಿನ್ ಮಹಿಳೆಯರ ಆರೋಗ್ಯವನ್ನು ಕಾಪಾಡುವ ಮತ್ತು ಮುಜುಗರವನ್ನು ತಪ್ಪಿಸುವ ಸಲುವಾಗಿ ಬಳಕೆಯಾಗುತ್ತದೆ. ಇದನ್ನು ಸ್ಯಾನಿಟರಿ ನ್ಯಾಪ್ಕಿನ್ ಮಿಷನ್ ನಲ್ಲಿ ಅಳವಡಿಸಿ ಅಗತ್ಯವಿರುವ ಮಹಿಳೆಯರು, ಯುವತಿಯರು, ಮಹಿಳಾ ಸಿಬ್ಬಂದಿ ಬಳಸಬಹುದಾಗಿದೆ. ಇಷ್ಟೇ ಅಲ್ಲದೇ ಇನ್ಸಿನೇಟರ್ ಕಾಂಬೋ ಮಿಷನ್ ನಲ್ಲಿ ಬಳಸಿದ ನ್ಯಾಪ್ಕಿನ್ ಹಾಕುವುದರಿಂದ ನ್ಯಾಪ್ಕಿನ್ ಸುಟ್ಟು ಬೂದಿಯಾಗಿ ನೀರಿನೊಂದಿಗೆ ಶೌಚಾಲಕ್ಕೆ ಸೇರುತ್ತದೆ.

ಶೌಚಾಲಯದಲ್ಲಿ ಹಾಕಿದರೇ ಕಟ್ಟಿಕೊಳ್ಳುವ ಭೀತಿ
ಋತು ಸ್ರಾವದ ಸಮಯದಲ್ಲಿ ಬಳಸಲಾಗುವ ನ್ಯಾಪ್ಕಿನ್‌ನಲ್ಲಿ ಕೆಟ್ಟ ರಕ್ತ ಮಿಶ್ರಣದಿಂದ ಸೂಕ್ಷ್ಮಾಣು ಜೀವಿ ಉತ್ಪಾದನೆಯಾಗುತ್ತದೆ. ನ್ಯಾಪ್ಕನ್ ಅನ್ನು ರಸ್ತೆಯಲ್ಲಿ ಎಸೆಯುವುದರಿಂದ ರೋಗಗಳು ಹರಡುತ್ತದೆ. ಇದಕ್ಕಾಗಿಯೇ ನ್ಯಾಪ್ಕಿನ್ ಬಳಸುವ ಜೊತೆಗೆ ಅದನ್ನು ವಿಲೇವಾರಿಯನ್ನು ಎಚ್ಚರದಿಂದ ಮಾಡಬೇಕಿದೆ. ಇನ್ಸಿನೇಟರ್ ಆ ನ್ಯಾಪ್ಕಿನ್ ಸುಡುವುದರಿಂದ ಸೂಕ್ಷ್ಮ ಜೀವಿಗಳು ಸಾಯುವುದಲ್ಲದೇ ಅನವಶ್ಯಕ ಮುಜುಗರವು ತಪ್ಪುತ್ತದೆ. ಇನ್ನು ಕೆಲವು ಮಹಿಳೆಯರು ಬಳಸಿದ ನ್ಯಾಪ್ಕಿನ್ ಶೌಚಾಲಯದಲ್ಲಿ ಹಾಕುವುದರಿಂದ ಶೌಚಾಲಯವೇ ಕಟ್ಟಿಕೊಂಡು ಮತ್ತಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಪ್ರಧಾನಿ ಮೋದಿ ಯೋಜನೆಗೂ ಅಡ್ಡಿ
ಮಹಿಳೆಯರ ಕಷ್ಟವನ್ನು ಪುರುಷ ಅರ್ಥ ಮಾಡಿಕೊಳ್ಳಲಾರ ಎಂಬ ಮಾತನ್ನು ಬಿಬಿಎಂಪಿ ಅಧಿಕಾರಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಸತ್ಯ ಮಾಡುತ್ತಿದ್ದಾರೆ. ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಇನ್ಸಿನೇಟರ್ ಕಾಂಬೋ ಮಿಷಿನ್ ಅಳವಡಿಕೆ ಟೆಂಡರ್ ಕರೆಯಲು ನಿರ್ದೇಶನವಿದ್ದರೂ ಮೂರು ಸಲದಿಂದಲೂ ಪರಿಶೀಲನೆ ಹಂತದಲ್ಲಿಯೇ ಇದೆ. ಪ್ರದಾನಿ ಮೋದಿಯವರು ಸ್ಯಾನಿಟರಿ ನ್ಯಾಪ್ಕಿನ್ ವೆಡ್ಡಿಂಗ್ ಯಂತ್ರ ಮತ್ತು ಇನ್ಸಿನೇಟರ್ ಕಾಂಬೋವನ್ನು ಶಾಲಾ ಕಾಲೇಜು, ಆಸ್ಪತ್ರೆ, ಕಚೇರಿಗಳಲ್ಲಿ ಕೆಲವು ಪಬ್ಲಿಕ್ ಶೌಚಾಲಯಗಳಲ್ಲಿ ಅಳವಡಿಸುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯವರು ಮಹಿಳೆಯ ಸುರಕ್ಷತೆ ದೃಷ್ಟಿಯಿಂತ ಟೆಂಡರ್ ಕರೆಯುವಂತೆ ಹೇಳಿದ್ದರು. ಬಿಬಿಎಂಪಿಯ ವಿಶೇಷ ಆಯುಕ್ತರು ಮೀನಾ ಮೇಷ ಎಣಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಯಾಗಿದೆ.
ಸ್ಯಾನಿ ವೇಸ್ಟ್ ಸಂಗ್ರಹಣೆ, ಸಾಗಾಣಿಕೆ, ಸಂಸ್ಕರಣೆ, ವಿಲೇವಾರಿಗೆ ಬಿಬಿಎಂಪಿಯಲ್ಲಿ 1480 ಲಕ್ಷ ಮೀಸಲಿಟ್ಟಿದೆ. ಮಹಾರಾಷ್ಟ್ರ ಗುಜರಾತ್, ಜಮ್ಮು ಕಾಶ್ಮೀರ, ಕೇಪಳ , ಬಿಹಾರ,ಅಂಡಮಾನ್ ನಿಕೋಬಾರ್, ಮುಂತಾದ ರಾಜ್ಯಗಳಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸ್ಥಳಗಳಾದ ಸರಕಾರಿ ಶಾಲಾ ಕಾಲೇಜು, ಆಸ್ಪತ್ರೆ , ಬಸ್ ನಿಲ್ದಾಣಗಳಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮತ್ತು ಇನ್ಸಿನೇಟರ್ ಅಳವಡಿಕೆ ಮಾಡಲಾಗಿದ್ದರು ಬಿಬಿಎಂಪಿಯು ನಿರ್ಲಕ್ಷ್ಯವನ್ನು ತೋರುತ್ತಿದೆ.
Recommended Video
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?











Click it and Unblock the Notifications