ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು

Recommended Video

      ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು | Oneindia Kannada

      ಬೆಂಗಳೂರು, ನವೆಂಬರ್ 03: ಕರ್ನಾಟಕದ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3ರ ಶುಕ್ರವಾರದಂದು ಒಂದು ದಿನದ ಮುಷ್ಕರ ಆರಂಭಿಸಿದ್ದಾರೆ. ಮುಂಜಾನೆ 7 ಗಂಟೆ ಹೊತ್ತಿಗೆ ಬಹುತೇಕ ಆಸ್ಪತ್ರೆಗಳು ಬಾಗಿಲು ಹಾಕಿರುವ ದೃಶ್ಯ ಬೆಂಗಳೂರಿನಲ್ಲಿ ಕಂಡು ಬಂದಿದೆ.

      In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

      • ಗರ್ಭಿಣಿಗೆ ಚಿಕಿತ್ಸೆ ನೀಡದ ಖಾಸಗಿ ವೈದರ ವಿರುದ್ಧ ಕುಟುಂಬಸ್ಥರ ಆಕ್ರೋಶ
      • ಬಾಗಲಕೋಟೆ ಹುನುಗುಂದದಲ್ಲಿ ಹೆರಿಗೆಗೆ ಬಂದ ಗರ್ಭಿಣಿಯನ್ನ ವಿಚಾರಿಸದ ಡಾಕ್ಟರ್ಸ್ಸ್
      • ಸಂಶೋಧನಾ ವಿದ್ಯಾರ್ಥಿಗಳು, ನರ್ಸ್ ಗಳಿಂದ ಹೆರಿಗೆ, ಚೈತ್ರಾಗೆ ಗಂಡು ಮಗು
      • ಬಾಗಲಕೋಟೆ ಹುನುಗುಂದದ ಇಳಕಲ್ ನ ಕುಮಾರೇಶ್ವರ ಆಸ್ಪತ್ರೆಯಲ್ಲಿ ಘಟನೆ
      • ಬೆಳಗಾವಿಯಲ್ಲಿ 2495 ಖಾಸಗಿ ಆಸ್ಪತ್ರೆಗಳು ಬಂದ್
      • ಬೆಳಗಾವಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ವೈದ್ಯರಿಂದ ಪ್ರತಿಭಟನೆ
      Karnataka pvt doctors’ strike today: Govt hospitals on high alert

      • ಬಾಗಲಕೋಟೆ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ
      • ಶಿವಮೊಗ್ಗದಲ್ಲಿ ನಂಜಪ್ಪ, ಮ್ಯಾಕ್ಸ್, ನಾರಾಯಣ ಆಸ್ಪತ್ರೆಗಳು ಬಂದ್
      • ಮಂಗಳೂರಿನಲ್ಲಿ ರೋಗಿಗಳನ್ನು ನೋಡಿಕೊಳ್ಳುತ್ತಿರುವ ನರ್ಸ್ ಗಳು
      • ಬಾಗಲಕೋಟೆಯಲ್ಲಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ ರೋಗಿಗಳು
      • ವಿಜಯಪುರದಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ, ಎಂದಿನಂತೆ ಆಸ್ಪತ್ರೆ ಓಪನ್
      • ಯಾದಗಿರಿ ಜಿಲ್ಲೆಯ 50ಕ್ಕೂ ಅಧಿಕ ಆಸ್ಪತ್ರೆಗಳು ಸಂಪೂರ್ಣ ಬಂದ್
      • ಜಯನಗರದಲ್ಲಿ ಕ್ಲೌಡ್ ನೈನ್, ಅಪೋಲೋ, ರಾಮಕೃಷ್ಣ, ಪಾಲಿ ಕ್ಲಿನಿಕ್ ಗಳು, ಲ್ಯಾಬ್ ಗಳು ಬಾಗಿಲು ಬಂದ್ ಮಾಡಿವೆ.
      • ಬನಶಂಕರಿಯಲ್ಲಿ ಬೆಳಗ್ಗೆ 7 ಗಂಟೆಗೆ ವಿನಾಯಕ ಆಸ್ಪತ್ರೆ, ಉದ್ಭವ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಮುಷ್ಕರಕ್ಕೆ ಕೈಜೋಡಿಸುವುದಾಗಿ ಹೇಳಿದರು.
      Karnataka pvt doctors’ strike today: Govt hospitals on high alert

      • ಮುಷ್ಕರಕ್ಕೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಿಂದಲೂ ಬೆಂಬಲ
      • ಬೆಳಗ್ಗೆ 8 ರಿಂದ ರಾತ್ರಿ 8ರತನಕ ಆಸ್ಪತ್ರೆಗಳ ಒಪಿಡಿ ಬಂದ್
      • ಒಳರೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ
      • ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಕಾಯ್ದೆಗೆ ವಿರೋಧ
      • ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಣಗುಡುತ್ತಿರುವ ಖಾಸಗಿ ಆಸ್ಪತ್ರೆಗಳು

      ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ. ಮುಖ್ಯವಾಗಿ ಹೊರರೋಗಿಗಳ ಸೇವೆ ಇರುವುದಿಲ್ಲ. ಕರ್ನಾಟಕದಲ್ಲಿ ಶೇ 70ರಷ್ಟು ಹೊರರೋಗಿಗಳ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳು ನಿರ್ವಹಿಸುತ್ತಿವೆ.

      Karnataka pvt doctors’ strike today: Govt hospitals on high alert

      ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ಶುಕ್ರವಾರ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+