Industry: ಭಾರತದ ಮಷಿನ್ ಟೂಲ್ ಉತ್ಪಾದನೆಯಲ್ಲಿ ಕರ್ನಾಟಕದ್ದೆ ಸಿಂಹಪಾಲು

ಬೆಂಗಳೂರು, ಜನವರಿ 23: ದೇಶದ ಮಶೀನ್ ಟೂಲ್ ಉತ್ಪಾದನೆಯಲ್ಲಿ ಕರ್ನಾಟಕವು ಶೇಕಡ 52 ರಷ್ಟು ಪಾಲು ಹೊಂದಿದ್ದು, ಇದು ತಯಾರಿಕೆ ವಲಯದಲ್ಲಿ ಕರ್ನಾಟಕವು ನಾವೀನ್ಯತೆ ಮತ್ತು ಉತ್ಕೃಷ್ಟತೆಗಳಿಗೆ ಮತ್ತೊಂದು ಹೆಸರು ತಂದು ಕೊಟ್ಟಿದೆ. ಕರ್ಣಾಟಕ ಸರ್ಕಾರ ಈ ವಲಯದ ಬಲವರ್ಧನೆಗೆ ನಿರ್ದಿಷ್ಟ ವಿಷನ್ ಗ್ರೂಪ್ ರಚಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಾಡಾಗಿರುವ ಮಶೀನ್ ಟೂಲ್ ಮತ್ತು ಮ್ಯಾನುಫ್ಯಾಕ್ಚರಿಂಗ್ ವಾಣಿಜ್ಯ ಪ್ರದರ್ಶನದ ಮೇಳ ಇಮ್ಟೆಕ್ಸ್ 2025ರ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.

Karnataka Produces the Highest 52 Percent of India s Machine Tool Industry MB Patil

ದೇಶದಲ್ಲಿ ಇವೆರಡೂ ವಲಯಗಳ ವಾರ್ಷಿಕ ವಹಿವಾಟು 2030ರ ಹೊತ್ತಿಗೆ 3,800 ಮಿಲಿಯನ್ ಡಾಲರ್ ಮುಟ್ಟಲಿದೆ. ಮಶೀನ್ ಟೂಲ್ ವಲಯದಲ್ಲಿ ಮಶೀನ್ ಕಟಿಂಗ್ ಶಾಖೆಯ ಪಾಲು ಶೇ.88ಕ್ಕಿಂತ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಶೀನ್ ಟೂಲ್ ವಲಯದ ಸಾಧನೆ ಹೀಗೆ ಮುಂದುವರಿಯುವ ಲಕ್ಷಣಗಳು ಇವೆ.

ತುಮಕೂರಿನಲ್ಲಿ ಇಡೀ ಭಾರತದ ದೇಶದ ಮಶೀನ್ ಟೂಲ್ ವಲಯಕ್ಕೆಂದೇ ಸ್ಥಾಪಿಸಿರುವ ಮಶೀನ್ ಟೂಲ್ ಪಾರ್ಕ್ ಸ್ಥಾಪಿಸಲಾಘಿದೆ. ಒಟ್ಟು ಬರೋಬ್ಬರಿ ಇದು 530 ಎಕರೆ ವಿಸ್ತಾರವಾಗಿದೆ. ಇಲ್ಲಿ ರಾಜ್ಯ ಸರ್ಕಾರ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಿದೆ., ದೇಶ-ವಿದೇಶಗಳ ಹೂಡಿಕೆದಾರರನ್ನು ಇದು ಆಕರ್ಷಿಸುತ್ತಿದೆ ಎಂದು ಅವರು ತಿಳಿಸಿದರು.

Karnataka Produces the Highest 52 Percent of India s Machine Tool Industry MB Patil

ಈ ವಲಯಗಳಲ್ಲಿ ಭಾರತವು ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲೂ, ಬಳಕೆಯಲ್ಲಿ 7ನೇ ಸ್ಥಾನದಲ್ಲೂ ಇದೆ. ಇಲ್ಲಿ ಸುಸ್ಥಿರತೆ, ಪರಿಸರಸ್ನೇಹಿ ವಿಧಾನ ಮತ್ತು ಇಂಗಾಲದ ಉತ್ಪಾದನೆ ತಗ್ಗಿಸುವ ವಿಧಾನಗಳಿಗೆ ಆದ್ಯತೆ ಕೊಡಬೇಕು. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಆಶಯಗಳಲ್ಲೂ ಸೇರಿಕೊಂಡಿದೆ. ಇಲ್ಲದೆ ಹೋದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಹಿಂದೆ ಬೀಳುತ್ತೇವೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ವೀಕ್ಷಿಸಿದ ಸಚಿವರು ಜೊತೆಗೆ ಭಾರತೀಯ ಮಶೀನ್ ಟೂಲ್ ತಯಾರಕರ ಒಕ್ಕೂಟ, ಮಷಿನ್ ಟೂಲ್ ಉತ್ಪಾದಕರು ಜೊತೆಗೆ ಕೆಲ ಕಾಲ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಜೊತೆಗೆ ಸ್ಯಾಫ್ರಾನ್ ಕಂಪನಿ ಅಧ್ಯಕ್ಷ ರಾಸ್ ಭೇಟಿ

ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡಿರುವ ಜಾಗತಿಕ ಶ್ರೇಣಿಯ ಸ್ಯಾಫ್ರಾನ್ ಸಮೂಹದ ಅಧ್ಯಕ್ಷ ರಾಸ್ ಮ್ಯಾಕಲ್ನೆಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರ ಸಮ್ಮುಖದಲ್ಲಿ ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದರು.

ಕರ್ನಾಟಕದಲ್ಲಿರುವ ಕೈಗಾರಿಕಾಸ್ನೇಹಿ ನೀತಿ, ಹೂಡಿಕೆ ಕಾರ್ಯಪರಿಸರ, ವಿಷನ್ ಗ್ರೂಪ್ ಚಟುವಟಿಕೆಗಳು, ಹೂಡಿಕೆಗೆ ಬೇಕಾದ ಪೂಕರ ವಾತಾವರಣ ಕುರಿತು ಕಂಪನಿಗೆ ತಿಳಿಸಲಾಯಿತು. ಕಂಪನಿಯು ಬೆಂಗಳೂರಿನಲ್ಲಿ ಹೊಂದಿರುವ ಸ್ಯಾಫ್ರಾನ್ ಡೇಟಾ ಸಿಸ್ಟಮ್ಸ್ ಮತ್ತು ಸ್ಯಾಫ್ರಾನ್ ಹೆಲಿಕಾಪ್ಟರ್ ಎಂಜಿನ್ಸ್ ಕಚೇರಿಗಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ರಾಸ್ ಅವರು ಸರ್ಕಾರಕ್ಕೆ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+