ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆಜಾನ್ ಗೋಡನ್ ಕಳ್ಳತನ ಕೇಸ್ ಟ್ರೇಸ್ ಮಾಡಿದ ಡಿಟೆಕ್ಟಿವ್ ಲಕ್ಷ್ಮೀ !

|
Google Oneindia Kannada News

ಬೆಂಗಳೂರು, ಜು. 24: ಅಮೆಜಾನ್ ಗೋಡನ್‌ ಕನ್ನ ಹಾಕಿದ್ದ ಕಳ್ಳರು ಅಲ್ಲಿಂದ ನಗದು ಹಣವಿದ್ದ ಲಾಕರ್ ಕದ್ದು ಪರಾರಿಯಾಗಿದ್ದರು. ಆದ್ರೆ ಲಾಕರ್ ಓಪನ್ ಮಾಡಲಾಗದೇ ಅದನ್ನು ದೂರದಲ್ಲಿ ಬಿಸಾಡಿ ಹೋಗಿದ್ದರು. ಈ ಕುರಿತು ಕೇಸು ದಾಖಲಿಸಿಕೊಂಡ ಪೊಲೀಸರು ಎಷ್ಟೇ ಹುಡುಕಿದರೂ ಪತ್ತೆಯಾಗಲಿಲ್ಲ. ಇನ್ನೇನು ಅಷ್ಟೇ ಎನ್ನುವಷ್ಟರಲ್ಲಿ ಕಳ್ಳರ ಹೆಜ್ಜೆ ಜಾಡು ಹಿಡಿಯಲು ಬಂದಿದ್ದು "ಲಕ್ಷ್ಮೀ'. ಕೇವಲ ಅರ್ಧತಾಸಿನಲ್ಲಿ ಹತ್ತು ಲಕ್ಷ ರೂಪಾಯಿ ನಗದು ಹಣವಿದ್ದ ಲಾಕರ್ ನ್ನು ಪತ್ತೆ ಮಾಡಿಯೇ ಬಿಟ್ಟಳು ! ಲಕ್ಷ್ಮೀ ಇಂಟೆಲೆಜನ್ಸಿ ಗುಣವನ್ನು ಇದೀಗ ಪೊಲೀಸರೇ ಕೊಂಡಾಡುತ್ತಿದ್ದಾರೆ.

ಲಕ್ಷ್ಮೀ ಎಂಬ ಇಂಟಲಿಜೆಂಟ್

ಲಕ್ಷ್ಮೀ ಎಂಬ ಇಂಟಲಿಜೆಂಟ್

ಇದೇನಿದು ಲಕ್ಷ್ಮೀ ಎಂದು ಅಚ್ಚರಿಯಾಗಬೇಡಿ. ಲಕ್ಷ್ಮೀ ಪೊಲೀಸ್ ಇಲಾಖೆಯ ಅಧಿಕಾರಿಯಲ್ಲ. ಬದಲಿಗೆ ಪೊಲೀಸ್ ಶ್ವಾನ. ಬೆಂಗಳೂರಿಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಪತ್ತೆ ಮಾಡಲು ಪೊಲೀಸರು ನಂಬಿರೋದೇ ಲಕ್ಷ್ಮೀ ಎಂಬ ಶ್ವಾನವನ್ನು. ಬೇರೆ ಶ್ವಾನಗಳಿಗಿಂತಲೂ ಲಕ್ಷ್ಮೀ ಭಿನ್ನ. ಪೊಲೀಸ್ ಇಲಾಖೆಯಲ್ಲಿ ಇದೀಗ ಎಲ್ಲೆಲ್ಲೂ ಲಕ್ಷ್ಮೀಯದ್ದೇ ಚರ್ಚೆ. ಕಳ್ಳತನ, ದರೋಡೆ, ಕೊಲೆ ಸೆರಿದಂತೆ ಕ್ಲೂ ಇಲ್ಲದ ಪ್ರಕರಣಗಳ ಪತ್ತೆ ಸ್ಪಾಟ್ ಗೆ ಮೊದಲು ಹೋಗುವುದೇ ಲಕ್ಷ್ಮೀ .

ಅಮೆಜಾನ್ ಕಳ್ಳತನ ಪ್ರಕರಣ ಟ್ರೇಸ್

ಅಮೆಜಾನ್ ಕಳ್ಳತನ ಪ್ರಕರಣ ಟ್ರೇಸ್

ಬೆಂಗಳೂರಿನ ಸಂಪಿಗೆ ಹಳ್ಳಿಯ ಬಳಿ ಅಮೆಜಾನ್ ಕಂಪನಿ ಗೋಡನ್ ಇದೆ. ಜು. 17 ರಂದು ಕನ್ನ ಹಾಕಿದ್ದ ಕಳ್ಳರು ಹತ್ತು ಲಕ್ಷ ರೂ. ನಗದು ಹಣವಿದ್ದ ಲಾಕರ್ ನ್ನ ಕದ್ದೊಯ್ದಿದ್ದರು. ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದ ಕಳ್ಳರು ಅದನ್ನು ಪೊದೆಯೊಂದರಲ್ಲಿ ಬಿಸಾಡಿ ಪರಾರಿಯಾಗಿದ್ದರು. ಮರುದಿನ ಬೆಳಗ್ಗೆ ಅಮೆಜಾನ್ ಗೋಡನ್ ಸಿಬ್ಬಂದಿ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.

ಎಂಟ್ರೀ ಕೊಟ್ಟ ಲಕ್ಷ್ಮೀ

ಎಂಟ್ರೀ ಕೊಟ್ಟ ಲಕ್ಷ್ಮೀ

ಕಳ್ಳತನ ಪ್ರಕರಣದಲ್ಲಿ ಖಾಲಿ ಲಾಕರ್‌ನ್ನು ಇಲ್ಲೇ ಬಿಸಾಡಿರಬಹುದು ಎಂಬ ನಂಬಿಕೆಯಿಂದ ಸಂಪಿಗೆಹಳ್ಳಿ ಪೊಲೀಸರು ಶ್ವಾನದಳದ ನೆರವು ಪಡೆಯಲು ತೀರ್ಮಾನಿಸಿದರು.

ಶ್ವಾನದಳದಲ್ಲಿ ಡಿಟೆಕ್ಟರ್ ಲಕ್ಷ್ಮೀ ಎಂದೇ ಖ್ಯಾತಿ ಪಡೆದಿರುವ ಶ್ವಾನ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು. ಕಂಪನಿಯಿಂದ ಸುಮಾರು 7 ಮೀಟರ್ ದೂರದಲ್ಲಿ ಬಿದ್ದಿದ್ದ ಲಾಕರ್ ನ್ನು ಲಕ್ಷ್ಮೀ ಪತ್ತೆ ಮಾಡಿದೆ. ಅದನ್ನು ತೆಗೆದು ನೋಡಿದರೆ ಪೊಲೀಸರಿಗೆ ಶಾಕ್. ಕಳ್ಳತನವಾಗಿದ್ದ ಅಷ್ಟೂ ಹಣ ಲಾಕರ್ ನಲ್ಲೇ ಇತ್ತು. ಕಳ್ಳತನ ಪ್ರಕರಣವನ್ನು ಬೇಧಿಸುವ ಮೂಲಕ ಲಕ್ಷ್ಮೀ ಇದೀಗ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

Recommended Video

ಜೋಗ ಜಲಪಾತವನ್ನು ಈ ಸಮಯದಲ್ಲಿ ನೋಡಲು ಎರಡು ಕಣ್ಣು ಸಾಲದು | Oneindia Kannada
ಪಾಪಣ್ಣನಿಗೆ ಅಭಿನಂದನೆ

ಪಾಪಣ್ಣನಿಗೆ ಅಭಿನಂದನೆ

ಲಕ್ಷ್ಮೀಗೆ ತರಬೇತಿ ನೀಡಿರುವುದು ಡಾಗ್ ಸ್ಕ್ವಾಡ್ ಪಾಪಣ್ಣ. ಲಕ್ಷ್ಮೀಯಲ್ಲಿರುವ ಪತ್ತೆಗಾರಿಕೆ ಗುಣವನ್ನು ಗುರುತಿಸಿ ಅದಕ್ಕೆ ವಿಶೇಷ ತರಬೇತಿ ನೀಡಿದ್ದರು. ಇದೀಗ ಲಕ್ಷ್ಮೀ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದಾಗಲೆಲ್ಲಾ ಪಾಪಣ್ಣನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಂದಹಾಗೆ ಹತ್ತು ಲಕ್ಷ ರೂ. ಕಳ್ಳತನ ಪ್ರಕರಣ ಪತ್ತೆ ಮಾಡಿದ ಲಕ್ಷ್ಮೀ ಈ ಹಿಂದೆ ಕೂಡ ಅನೇಕ ಅಪರಾಧ ಪ್ರಕರಣ ಪತ್ತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Karnataka Police Detective Dog Lakshmi Solves Theft Case at Amazon Warehouse. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X