Rockline Venkatesh: 'ಕಾಟೇರ' ನಿರ್ಮಾಪಕರಿಗೆ ಹೈಕೋರ್ಟ್‌ನಲ್ಲಿ ಗೆಲುವು

ಬೆಂಗಳೂರು, ಫೆಬ್ರವರಿ 19: ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ರಾಕ್ ಲೈನ್ ಮಾಲ್​ಗೆ ಹಾಕಲಾಗಿದ್ದ ಬೀಗ ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ರಾಕ್ ಲೈನ್ ಮಾಲ್​ಗೆ ಬೀಗ ಹಾಕಿರುವುನ್ನು ಪ್ರಶ್ನಿಸಿ ರಾಕ್‌ ಲೈನ್‌ ವೆಂಕಟೇಶ್‌ ಹೈಕೋರ್ಟ್‌ ಮೇಟ್ಟಿಲೇರಿದ್ದರು.

ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಮಾಲೀಕತ್ವದ ರಾಕ್ ಲೈನ್ ಮಾಲ್​ಗೆ ಬೀಗ ಹಾಕಿತ್ತು. ದಾಸರಹಳ್ಳಿ ವಲಯದ ಬಿಬಿಎಂಪಿ ಕಂದಾಯ ಅಧಿಕಾರಿಗಳು ರಾಕ್ ಲೈನ್ ಮಾಲ್​ಗೆ ಬೀಗ ಹಾಕಿದ್ದರು.

Karnataka High Court Grants Big Relief To Rockline Venkatesh

ರಾಕ್​ಲೈನ್ ಮಾಲ್​ 2011 ರಿಂದ 2022-23 ರವರೆಗೆ ಒಟ್ಟು 11.51 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿತ್ತು. ಹಲವು ವರ್ಷದಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಅಧಿಕಾರಿಗಳು ಅನೇಕ ಬಾರಿ ನೋಟಿಸ್‌ ನೀಡಿದ್ದರು. ಆದರೆ ನೋಟಿಸ್ ನೀಡಿದರೂ ತೆರಿಗೆ ಹಣ ಪಾವತಿಸದ ಕಾರಣ ಬಿಬಿಎಂಪಿ ಕಂದಾಯ ಅಧಿಕಾರಿಗಳು ರಾಕ್ ಲೈನ್ ಮಾಲ್ ಸೀಜ್‌ ಮಾಡಿದ್ದರು.

ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಈ ಕ್ರಮ ಪ್ರಶ್ನಿಸಿ ರಾಕ್‌ ಲೈನ್‌ ವೆಂಕಟೇಶ್‌ ಹೈಕೋರ್ಟ್‌ ಮೇಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆದಿದ್ದು, ರಾಕ್‌ ಲೈನ್‌ ಮಾಲ್‌ನಲ್ಲಿ ವ್ಯಾಪಾರಕ್ಕೆ ತೊಂದರೆ ಮಾಡಬಾರದು ಹಾಗೂ ಆಸ್ತಿ ತೆರಿಗೆ ಪಾವತಿಸದೆ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಹೈ ಕೋರ್ಟ್‌ ಬಿಬಿಎಂಪಿ ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+