ಸಿಸಿಐ ತನಿಖೆ ಆದೇಶ ಪ್ರಶ್ನಿಸಿದ್ದ ಫ್ಲಿಪ್‌ಕಾರ್ಟ್, ಅಮೆಜಾನ್‌ ಮೇಲ್ಮನವಿ ವಜಾ

ಬೆಂಗಳೂರು, ಜು.23: ಅಮೆಜಾನ್.ಕಾಮ್ ಇಂಕ್ ಮತ್ತು ವಾಲ್ಮಾರ್ಟ್‌ನ ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಯು.ಎಸ್. ಸಂಸ್ಥೆಗಳು ಆಯ್ದ ಮಾರಾಟಗಾರರನ್ನು ತಮ್ಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತೇಜಿಸುತ್ತವೆ. ಸ್ಪರ್ಧೆಯನ್ನು ನಿಗ್ರಹಿಸಲು ಬೇಕಾಬಿಟ್ಟಿ ರಿಯಾಯಿತಿಗಳನ್ನು ನೀಡುತ್ತದೆ ಎಂಬ ಚಿಲ್ಲರೆ ವ್ಯಾಪಾರಿಗಳ ಆರೋಪದ ನಂತರ ಭಾರತ ಸ್ಪರ್ಧಾ ಆಯೋಗವು (ಸಿಸಿಐ) ಕಳೆದ ವರ್ಷ ತನಿಖೆಗೆ ಆದೇಶಿಸಿತು.

ತನ್ನ ವಿರುದ್ದದ ಆರೋಪಗಳನ್ನು ನಿರಾಕರಿಸಿ, ಕಂಪನಿಗಳು ಈ ತನಿಖೆಯನ್ನು ಪ್ರಶ್ನಿಸಿತ್ತು. ಸಿಸಿಐ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿತ್ತು. ಈ ಹಿನ್ನೆಲೆ ತನಿಖೆಯು ಹಲವು ತಿಂಗಳುಗಳ ಕಾಲ ಸ್ಥಗಿತಗೊಂಡಿತ್ತು. ಆದರೆ ನ್ಯಾಯಾಲಯವು ತನಿಖೆಯನ್ನು ಮುಂದುವರಿಸಲು ಜೂನ್‌ನಲ್ಲಿ ಅನುಮತಿ ನೀಡಿ, ಸಿಸಿಐ ತನಿಖೆ ಪ್ರಶ್ನಿಸಿದ್ದ ಫ್ಲಿಪ್‌ಕಾರ್ಟ್, ಅಮೆಜಾನ್‌ ಅರ್ಜಿ ವಜಾಗೊಳಿಸಿತ್ತು.

 Karnataka High Court Dismissed Amazon, Flipkart plea against CCI Probe

ಪ್ರಸ್ತುತ ಈ ಸಂಸ್ಥೆಗಳು ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಹೈಕೋರ್ಟ್ ಈ ಮೇನ್ಮನವಿ ಅರ್ಜಿಯನ್ನು ಕೂಡಾ ವಜಾ ಮಾಡಿದೆ. ಈ ಅರ್ಜಿಯು ಸಿಸಿಪಿ ತನಿಖೆಯು ಅಂತಿಮಗೊಳದಿರಲು ಮಾಡುವ ಪ್ರಯತ್ನವಾಗಿದೆ ಎಂದು ಇಬ್ಬರು ನ್ಯಾಯಾಧೀಶರ ಪೀಠ ತೀರ್ಪಿನ ಸಂದರ್ಭ ಹೇಳಿದ್ದಾರೆ.

ಈ ಮೇಲ್ಮನವಿಯು ಪುರಸ್ಕರಿಸಲು ಅರ್ಹವಾಗಿಲ್ಲ, ವಜಾಗೊಳಿಸಲು ಅರ್ಹವಾಗಿವೆ ಎಂದು ನ್ಯಾಯಾಲಯ ಹೇಳಿದೆ. "ಸಿಸಿಐ ತನಿಖೆ ತ್ವರಿತವಾಗಿ ಮುಂದುವರಿಯಬೇಕು ಎಂದು ಈ ಆದೇಶವು ಮತ್ತಷ್ಟು ಬಲವಾಗಿ ಹೇಳಿದೆ," ಎಂದು ವ್ಯಾಪಾರಿ ಗುಂಪಿನ ಪರವಾಗಿ ಫ್ಲಿಪ್‌ಕಾರ್ಟ್‌ನ ಅಮೆಜಾನ್ ವಿರುದ್ಧ ಆಂಟಿಟ್ರಸ್ಟ್ ಪ್ರಕರಣವನ್ನು ದಾಖಲಿಸಿದ ಸರ್ವಾಡಾ ಲೀಗಲ್‌ನ ಅಬೀರ್ ರಾಯ್ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+