Bengaluru 2nd Airport: ಈ ಕಾರಣಕ್ಕೇನೆ ರಾಜ್ಯ ಸರ್ಕಾರ ಜಾಗ ಫೈನಲ್ ಪ್ರಕ್ರಿಯೆಗೆ ವೇಗ ನೀಡಿದೆ!
ಬೆಂಗಳೂರು, ಜನವರಿ 09: ಬೆಂಗಳೂರಿಗೆ ಅಗತ್ಯತೆ ನೋಡಿಕೊಂಡು ಕರ್ನಾಟಕ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚು ವೇಗ ನೀಡುತ್ತಿದೆ. ಕಾರಣ ತಮಿಳುನಾಡು. ತಮಿಳುನಾಡಿನ ಹೋರಾಟದ ಮನಸ್ಥಿತಿ ಅರಿತಿರುವ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಎಲ್ಲಿ ನಿರ್ಮಿಸಬೇಕು ಎಂಬುದನ್ನು ತ್ವರಿತವಾಗಿ ಅಂತಿಮಗೊಳಿಸಲು ಸಜ್ಜಾಗಿದೆ.
ಕೇಂದ್ರ ಸರ್ಕಾರದ ಮುಂದೆ ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪನೆ ಇಡಲಾಗಿದೆ. ನಾಲ್ಕಾರು ಜಾಗಗಳನ್ನು ಗುರುತಿಸಲಾಗಿದೆ. ಇತ್ತ ತಮಿಳುನಾಡಿನ ಹೊಸೂರಿನಲ್ಲೂ ನೆರೆಯ ರಾಜ್ಯ ಸರ್ಕಾದ ಹೊಸ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದೆ. ಹೊಸೂರಿನಲ್ಲಿ ಕೈಗಾರಿಕೆ, ಕಾರ್ಖಾನೆಗಳು ಇದ್ದು, ಅದು ಬೆಂಗಳೂರಿಗೂ ಸಮಿಫವಿದೆ. ತನ್ನವರ ಜೊತೆಗೆ ಬೆಂಗಳೂರಿನವರನ್ನು ಸೆಳೆಯಲು ಮುಂದಾಗಿದೆ.

ಇದು ಗೊತ್ತಾಗುತ್ತಿದ್ದಮತೆ ಎರಡನೇ ವಾಣಿಜ್ಯ ವಿಮಾನ ನಿಲ್ದಾಣದ ಸ್ಥಳ ಅಂತಿಮಗೊಳಿಸಲು ಸಿದ್ದರಾಮಯ್ಯ ಸರ್ಕಾರ ಆತುರಪಡುತ್ತಿದೆ. ಕೊಂಚ ವಿಳಂಬವಾದರೂ ತಮಿಳುನಾಡು ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ತಮಿಳುನಾಡಿಗೆ ಮೊದಲು ಬೆಂಗಳೂರಿಗೆ ಇನ್ನೊಂದು ವಿಮಾನ ನಿಲ್ದಾಣದ ಅಗತ್ಯತೆ, ಸಮೃದ್ಧ ಭೂಮಿ, ನಿರ್ಮಣ ಪ್ರಯೋಜನ ತಿಳಿಸುವ ಜೊತೆಗೆ ಜಾಗ ಫೈನಲ್ ಮಾಡಿದರೆ ಬೇಗ ಒಪ್ಪಿಗೆ ಸಿಕ್ಕು, ಕೆಲಸ ಆರಂಭಿಸಬಹುದು. ಈ ಕಾರಣದಿಂದ ತ್ವರಿತ ತೀರ್ಮಾನಕ್ಕೆ ಬರಲು ಕರ್ನಾಟಕ ಮುಂದಾಗಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ, ಮೂಲಗಳಗಳ ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯ ಬಳಿ ಅಥವಾ ಬೆಂಗಳೂರು ಉತ್ತರದ ನೆಲಮಂಗಲ ಬಳಿ ನಿರ್ಮಿಸಬೇಕೆಂಬ ಪ್ರಸ್ತಾವನೆ ಇದೆ. ಇತ್ತ ತುಮಕೂರು ಬಳಿ ನಿರ್ಮಿಸುವಂತೆಯೂ ಸಾಕಷ್ಟು ಬೇಡಿಕೆ ಇದಕ್ಕೆ. ಈ ಬಗ್ಗೆ ಗೃಹ ಸಚಿವರು ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರವು ಎರಡು ಸ್ಥಳ ಗುರುತಿಸಿದೆ. ನಿರ್ಮಾಣಕ್ಕೆ ಬೇಕಾದ ಸುಮಾರು 4,000 ಎಕರೆ ಭೂಮಿ ಲಭ್ಯವಿದೆ. ಆದರೆ ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎಂಬುದು ಇನ್ನೇನು ತೀರ್ಮಾನವಾಗಲಿದೆ. ಸರ್ಕಾರ ಬೆಂಗಳೂರು ದಕ್ಷಿಣದಲ್ಲಿ ನಿರ್ಮಿಸಲು ಹೆಚ್ಚು ಒಳವು ಹೊಂದಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬೆಂಗಳೂರಿನ ದಕ್ಷಿಣದಿಂದ ಸುಮಾರು 40 ಕಿ.ಮೀ ದೂರದಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲು ತಮಿಳುನಾಡು ಪ್ರಸ್ತಾವನೆ ಸಲ್ಲಿಸಿದೆ. ಭಾರತದ ಐಟಿ ರಾಜಧಾನಿ ಎನ್ನಲಾಗುವ ಬೆಂಗಳೂರಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮೊಬಿಲಿಟಿ ಪ್ರೊವೈಡರ್ ಓಲಾ ಹೊಸೂರಿನಲ್ಲಿ ಹೂಡಿಕೆಗೆ ಮುಂದಾಗಿದೆ. ಮಾಡಲು ಕಾರಣವಾಗಿದೆ. ಹೊಸೂರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಸಮೀಪವಿದೆ. ಮೂಲಸೌಕರ್ಯ ವೇಗದ ಪ್ರಯಾಣ, ವಸತಿ ಯೋಜನೆಗಳಿಗೂ ತಮಿಳುನಾಡಿನ ಯೋಜನೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಅಲ್ಲದೇ 150 ಕಿಲೋ ಮೀಟರ್ ಹತ್ತಿರದಲ್ಲಿ ಎರಡು ವಿಮಾನ ನಿಲ್ದಾಣ ನಿರ್ಮಿಸಲು ಅನುಮತಿ ಇಲ್ಲ. ಒಂದು ಕಡೆ ನಿರ್ಮಾಣಕ್ಕೆ ಅವಕಾಶ ಕೊಡಬಹುದು. ಈ ಕಾರಣದಿಂದಲೇ ಕರ್ನಾಟಕ ಆ ಒಂದು ಅವಕಾಶ ತನ್ನದಾಗಿಸಿಕೊಳ್ಳಲು ಸಕಲ ಯತ್ನ ನಡೆಸಿದೆ. ಎಲ್ಲವು ಅಂದುಕೊಂಡತೆ ಬೆಂಗಳೂರಿನ ಒಂದು ಕಡೆ ಹೊಸ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಇದು ಬೆಂಗಳೂರು ಹಾಗೂ ಕರ್ನಾಟಕದ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ.
2ನೇ ಏರ್‌ಪೋರ್ಟ್ ಅಗತ್ಯತೆ ಎಷ್ಟಿದೆ?
ಈ ಮೇಲಿನ ಕಾರಣಗಳಿಂದ ವಿಮಾನ ನಿಲ್ದಾಣ ವಿಚಾರ ಎರಡು ರಾಜ್ಯಗಳ ಮಧ್ಯ ತೀವ್ರ ಪೈಪೋಟಿ ಉಂಟಾಗಲು ಕಾರಣವಾಗಿದೆ. ಹಾಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಪ್ರಕಾರ, ಇಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು 2023 ರಲ್ಲಿ 37.2 ಮಿಲಿಯನ್ ಇದ್ದದ್ದು,ಕಳೆದ ವರ್ಷ 2024 ಕ್ಕೆ ಹೋಲಿಸಿದರೆ ಒಂದೇ ವರ್ಷಕ್ಕೆ ಶೇಕಡಾ 9 ಹೆಚ್ಚಾಗಿದೆ. ಅಂದರೆ 2024ರಲ್ಲಿ 40.73 ಮಿಲಿಯನ್‌ಗೆ ತಲುಪಿದೆ. ಹೀಗಾಗಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಅತ್ಯವಶ್ಯಕವಾಗಿದೆ.
ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್ ಮೇಲೆ ಜನದಟ್ಟಣೆ ಹೆಚ್ಚಾಗುತ್ತಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ವಿಮಾನಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರುತ್ತಿವೆ. ಈ ಕಾರಣದಿಂದ ಮೂಲ ಸೌಕರ್ಯಾಭೀವೃದ್ಧಿ ಇಲಾಖೆ ಸಚಿವ ಎಂಬಿ ಪಾಟೀಲ್ ಅವರು ನಿರಂತರ ಸಭೆಗಳ ಮೂಲಕ ಡಿಪಿಆರ್ ಸಿದ್ಧಪಡಿಸಲು ಹೇಳಿದ್ದಾರೆ.












Click it and Unblock the Notifications