ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಸರ್ಕಾರದಿಂದ ಬಸ್ ಪ್ರಯಾಣ ದರ ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಜ.7: ಕೊನೆಗೆ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಪ್ರಯಾಣ ದರವನ್ನು ಇಳಿಕೆ ಮಾಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದರ ಇಳಿಕೆ ಬಗ್ಗೆ ಬುಧವಾರ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಅವರು ದರ ಇಳಿಕೆ ಬಗ್ಗೆ ಸುಳಿವು ನೀಡಿದ್ದರು. ಕನಿಷ್ಠ ಶೇ. 2 ರಷ್ಟು ದರ ಇಳಿಕೆಯಾಗುವ ನಿರೀಕ್ಷೆಯಿತ್ತು. ಅದರಂತೆ ದರ ಇಳಿಕೆ ಪ್ರಕಟಿಸಲಾಗಿದ್ದರೂ ಶೇಕಡಾವರು ಪ್ರಮಾಣದ ಇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಷ್ಟ ಚಿತ್ರಣ ನೀಡಿಲ್ಲ. ['KSRTC' ಇನ್ಮುಂದೆ ಕರ್ನಾಟಕದ್ದೇ ಸ್ವತ್ತು!]

Karnataka Government reduces KSRTC, BMTC bus fares

ಸುದ್ದಿಗೋಷ್ಠಿ ವಿವರ:
* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವಿವಿಧ ಹಂತಗಳಲ್ಲಿ 1 ರೂ ನಿಂದ 11 ರು ತನಕ ಇಳಿಕೆ
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಪ್ರತಿ ಹಂತಕ್ಕೆ 1 ರು ತನಕ ಇಳಿಕೆ.
* ಬಸ್ ಪಾಸ್ ಗಳಲ್ಲಿ ಯಾವುದೇ ಬದಲಾವಣೆ ಸದ್ಯಕ್ಕೆ ಇಲ್ಲ.
* ವಿದ್ಯಾರ್ಥಿ ಪಾಸ್, ಮಾಸಿಕ ಬಸ್ ದರದಲ್ಲೂ ಬದಲಾವಣೆ ಮಾಡಿಲ್ಲ.
* ವೋಲ್ವೋ ಬಸ್, ಎಸಿ ಬಸ್ ಗಳ ದರದಲ್ಲಿ ಇಳಿಕೆ ಇಲ್ಲ
* ಪರಿಷ್ಕೃತ ದರಗಳು ಜನವರಿ 10 ರಿಂದ ಜಾರಿಗೆ ಬರಲಿದೆ.
* ದರ ಇಳಿಕೆಯಿಂದ ಸಾರಿಗೆ ಇಲಾಖೆಗೆ ವಾರ್ಷಿಕವಾಗಿ 161.76 ಕೋಟಿ ನಷ್ಟವಾಗಲಿದೆ. ಕೆಎಸ್‍ಆರ್ಟಿಸಿಗೆ 68.62 ಕೋಟಿ, ಬಿಎಂಟಿಸಿಗೆ 48.06 ಕೋಟಿ ಈಶಾನ್ಯ ಸಾರಿಗೆಗೆ 6.51 ಕೋಟಿ. ವಾಯುವ್ಯ ಸಾರಿಗೆ 38.57 ಕೋಟಿ ನಷ್ಟವಾಗಲಿದೆ
* ಕೆಎಸ್ಸಾರ್ಟಿಸಿ ಸಾಮಾನ್ಯ ಸಾರಿಗೆಯಲ್ಲಿ ಎರಡನೇ ಹಂತದಲ್ಲಿ 2 ರುಪಾಯಿ ಇಳಿಕೆಯಾಗಿದ್ದರೆ, ಹಂತ 4, 6, 7, 8, 12, 13, 14 15, 16, 17ರಲ್ಲಿ ತಲಾ 1 ರು ಇಳಿಕೆಯಾಗಿದೆ.
* ವೇಗದೂತ ಸಾರಿಗೆಯಲ್ಲಿ ವಿವಿಧ ಹಂತಗಳಲ್ಲಿ 1 ರು.ನಿಂದ 11 ರುವರೆಗೆ ಇಳಿಕೆ ಆಗಿದೆ.
* ನಗರ ಸಾರಿಗೆ, ಉಪ ನಗರ ಸಾರಿಗೆಯ 1,2 ಹಾಗೂ 13 ಹಂತದಲ್ಲಿ 1 ರು ಇಳಿಕೆ ಹಾಗೂ 3ನೇ ಹಂತಕ್ಕೆ 2 ರು ಇಳಿಕೆಯಾಗಲಿದೆ.
* 715 ಹೊಸ ಬಸ್‌ಗಳ ಖರೀದಿಯಿಂದ 254.29 ಕೋಟಿ ಹೊರೆ ಇಲಾಖೆ ಮೇಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಪ್ರಮಾಣದ ದರ ಇಳಿಕೆಯಾಗಿಲ್ಲ

English summary
There is good news for KSRTC and BMTC bus commuters with the state government reduces the fares considerably following a cut in diesel rates recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X