ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?

ಬೆಂಗಳೂರು, ಮೇ 09: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆಯೇ? ಈ ಪ್ರಶ್ನೆಗೆ 'ಹೌದು' ಎಂದಿದ್ದಾರೆ ಸುಮಾರು 45% ಜನ.

ಪಬ್ಲಿಕ್ ಟಿವಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕೇಳಲಾದ ಈ ಪ್ರಶ್ನೆಗೆ ಹೆಚ್ಚಿನ ಜನ ಹೌದು ಎಂದು ಉತ್ತರಿಸಿರುವುದು, ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಹುದೇ ಎಂಬ ಅನುಮಾನ ಹುಟ್ಟಿಸಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 21,617 ಮಾದರಿಗಳನ್ನು ಪಡೆದುಕೊಳ್ಳಲಾಗಿದೆ.

ದರಲ್ಲಿ 60:40 ಅನುಪಾತದಲ್ಲಿ ಪುರುಷ ಮತ್ತು ಮಹಿಳೆಯರ ಮಾಹಿತಿ ಪಡೆಯಲಾಗಿದೆ. ಅಂತಿಮ ವರದಿಯ ಪ್ರಕಾರ ಬಹುಮತಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಡುವಲ್ಲಿ ಸಾಕಷ್ಟು ಪೈಪೋಟಿ ನಡೆದಿತ್ತಾದರೂ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ.

ಮ್ಯಾಜಿಕ್ ನಂಬರ್ ಗೆ ಪೈಪೋಟಿ

ಮ್ಯಾಜಿಕ್ ನಂಬರ್ ಗೆ ಪೈಪೋಟಿ

ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ 89-94, ಬಿಜೆಪಿ 86-91, ಜೆಡಿಎಸ್ 38-43 ಮತ್ತು ಇತರ ಅಭ್ಯರ್ಥಿಗಳು 0-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಯಾವುದೇ ಪಕ್ಷಕ್ಕೂ ಅಗತ್ಯವಿರುವ ಮ್ಯಾಜಿಕ್ ನಂಬರ್ 113 ಬರವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶೇ.45ರಷ್ಟು ಜನ ಹೇಳಿದ್ದರೆ, ಶೇ.40 ರಷ್ಟು ಜನ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಇನ್ನೂ 15 ಪ್ರತಿಶತ ಜನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂಬೈ ಕರ್ನಾಟಕ ಭಾಗ

ಮುಂಬೈ ಕರ್ನಾಟಕ ಭಾಗ

ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಸಮೀಕ್ಷೆಯ ಫಲಿತಾಂಶ ಇಂತಿದೆ:

ಮುಂಬೈ ಕರ್ನಾಟಕ
ಹೌದು - 44.00%
ಇಲ್ಲ - 45.10%
ಏನೂ ಹೇಳಲ್ಲ -10.90%

ಹೈದರಾಬಾದ್ ಕರ್ನಾಟಕ
ಹೌದು - 50.30%
ಇಲ್ಲ - 42.30%

ಏನೂ ಹೇಳಲ್ಲ -7.40%

ಮಧ್ಯ ಕರ್ನಾಟಕ- ಕರಾವಳಿ

ಮಧ್ಯ ಕರ್ನಾಟಕ- ಕರಾವಳಿ

ಮಧ್ಯ ಕರ್ನಾಟಕ
ಹೌದು - 62.80%
ಇಲ್ಲ - 26.90%
ಏನೂ ಹೇಳಲ್ಲ -10.30%

ಕರಾವಳಿ ಕರ್ನಾಟಕ
ಹೌದು - 47.90%
ಇಲ್ಲ - 31.00%
ಏನೂ ಹೇಳಲ್ಲ - 21.10%

ಹಳೆ ಮೈಸೂರು-ಬೆಂಗಳೂರು ನಗರ

ಹಳೆ ಮೈಸೂರು-ಬೆಂಗಳೂರು ನಗರ

ಹಳೆ ಮೈಸೂರು
ಹೌದು - 36.80%
ಇಲ್ಲ - 42.70
ಏನೂ ಹೇಳಲ್ಲ - 20.50

ಬೆಂಗಳೂರು ನಗರ
ಹೌದು - 40.00%
ಇಲ್ಲ - 40.20%
ಏನೂ ಹೇಳಲ್ಲ - 19.80%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+