ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾ ಒಬ್ಬ ಸನಾತನ ಹಿಂದು: ಸಿದ್ದು ಹೇಳಿಕೆ ಜಾವ್ಡೇಕರ್ ಉತ್ತರ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: 'ಅಮಿತ್ ಶಾ ಒಬ್ಬ ಸನಾತನ ಹಿಂದು' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಮತ್ತು ಕರ್ನಾಟಕ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಕುಮವಿಟ್ಟು ಸಿದ್ದರಾಮಯ್ಯ ಸಂವಾದ!ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಕುಮವಿಟ್ಟು ಸಿದ್ದರಾಮಯ್ಯ ಸಂವಾದ!

ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ನನ್ನನ್ನು ಅಹಿಂದು ಎನ್ನುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಾವೇ ಒಬ್ಬ ಹಿಂದುವಲ್ಲ ಎಂಬುದು ನೆನಪಿರಲಿ. ಅವರು ಒಬ್ಬ ಜೈನ್. ಅವರು ಹಿಂದು ಎನ್ನುವುದಕ್ಕೆ ದಾಖಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾವ್ಡೇಕರ್, "ಚುನಾವಣೆಯಲ್ಲಿ ಸೋಲುವ ಭಯದಿಂದ ಕೆಲವರು ಅಮಿತ್ ಶಾ ಅವರು ಹಿಂದುವೇ ಅಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ಸು ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸಿಕೊಡುತ್ತದೆ. ಅಮಿತ್ ಶಾ ಒಬ್ಬ ಸನಾತನ ಹಿಂದು" ಎಂದರು.

ಇದಕ್ಕೂ ಮುನ್ನ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರು ಅಮಿತ್ ಶಾ ಅವರು ಹಿಂದುವೇ ಅಲ್ಲ, ಅವರೊಬ್ಬ ಜೈನರು ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, "ಸಿದ್ದರಾಮಯ್ಯ ಅಹಿಂದ ನಾಯಕರಲ್ಲ, ಅವರೊಬ್ಬ ಅಹಿಂದು" ಎಂಬ ಹೇಳಿಕೆ ನೀಡಿದ್ದರು.

English summary
Karnataka assembly elections 2018: Prakash Javadekar, HRD minister and BJP incharge for Karnataka elections responded on Karnataka CM's statement 'Amit Shah isn't a Hindu, he's a Jain.' Because of their fear of complete rout in election they're leveling worst charges saying Amit Shah isn't Hindu. It's unthinkable. It's level at which Congress operates. Amit Shah is a 'Sanatan Hindu':
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X