ಗೋವಿಂದರಾಜನಗರದಲ್ಲಿ ಸೋಮಣ್ಣಗೆ ಮುನ್ನಡೆ, ಪ್ರಿಯಾ ಕೃಷ್ಣ ಹಿನ್ನಡೆ!
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮೇ 12 ರಂದು ಚುನಾವಣೆ ನಡೆದಿತ್ತು.
ಈ ಕ್ಷಣದ ಮುನ್ನಡೆ ಹಾಗೂ ಟ್ರೆಂಡ್ ಪ್ರಕಾರ, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ರವರಿಗೆ ಹಿನ್ನಡೆ ಆಗಿದೆ. ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹಾಗ್ನೋಡಿದ್ರೆ, ಪ್ರಿಯಾ ಕೃಷ್ಣ ಅವರು ಹಾಲಿ ಶಾಸಕ. ಕಾಂಗ್ರೆಸ್ಸಿನಿಂದ ಇದೇ ಕ್ಷೇತ್ರದಿಂದ ಆಯ್ಕೆ ಆಗಿದ್ದ ವಿ.ಸೋಮಣ್ಣ, ಬಿಜೆಪಿಗೆ ಸೇರ್ಪಡೆಯಾದ್ಮೇಲೆ, ಉಪಚುನಾವಣೆಯಲ್ಲಿ ಪ್ರಿಯಾ ಕೃಷ್ಣ ಗೆಲುವಿನ ನಗೆ ಬೀರಿದ್ದರು.

ಅಂದು ಉಪ ಚುನಾವಣೆಯಲ್ಲಿ ಸೋತಿದ್ದ ವಿ.ಸೋಮಣ್ಣ ಇದೀಗ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೋವಿಂದರಾಜನಗರ ಕ್ಷೇತ್ರದ ಬಗ್ಗೆ ಫಲಿತಾಂಶದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಕೊಡ್ತಾ ಇರ್ತೀವಿ, ಒನ್ ಇಂಡಿಯಾ ಕನ್ನಡ ಪುಟ ಓದುತ್ತಿರಿ...












Click it and Unblock the Notifications