Bengaluru Voting: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ಆಗಿದ್ದೆಷ್ಟು?
ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇಂದು (ಬುಧವಾರ, ಮೇ 10) ರಾಜ್ಯದೆಲ್ಲೆಡೆ ಮತದಾನ ನಡೆಯುತ್ತಿದ್ದು, ರಾಜ್ಯದ ಮತದಾರರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
31 ಜಿಲ್ಲೆಗಳ 224 ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.52.03ರಷ್ಟು ಮತದಾನವಾಗಿದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಮತದಾನಕ್ಕೆ ಮತದಾರರು ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ.41.43ರಷ್ಟು ಮತದಾನವಾಗಿದೆ.

ಚಾಮರಾಜಪೇಟೆ - ಶೇ.38.9, ಚಿಕ್ಕಪೇಟೆ - ಶೇ.42.4, ಗಾಂಧಿನಗರ - ಶೇ.40.76, ರಾಜಾಜಿನಗರ - ಶೇ.43.06, ರಾಜರಾಜೇಶ್ವರಿನಗರ - ಶೇ.41.01, ಶಾಂತಿನಗರ - ಶೇ.37.35, ಶಿವಾಜಿನಗರ - ಶೇ.41.78
ಸಿವಿ ರಾಮನ್ ನಗರ - ಶೇ.34.87, ಹೆಬ್ಬಾಳ - ಶೇ.42.87, ಕೆಆರ್ ಪುರ - 38.51, ಮಹಾಲಕ್ಷ್ಮಿ ಲೇಔಟ್ - ಶೇ.45.71, ಮಲ್ಲೇಶ್ವರ - ಶೇ.42.35, ಪುಲಕೇಶಿ ನಗರ - ಶೇ.39.72, ಸರ್ವಜ್ಞ ನಗರ - ಶೇ.38.21
ಬಿಟಿಎಂ ಲೇಔಟ್ - ಶೇ.39.67, ಬಸನವನಗುಡಿ - ಶೇ.43.88, ಬೊಮ್ಮನಹಳ್ಳಿ - ಶೇ.37.69, ಗೋವಿಂದರಾಜನಗರ - ಶೇ.40.47, ಜಯನಗರ - ಶೇ.45.42, ಪದ್ಮನಾಭನಗರ - ಶೇ.47.57, ವಿಜಯನಗರ - ಶೇ.37.84
ಆನೇಕಲ್ - ಶೇ.45.36, ಬೆಂಗಳೂರು ದಕ್ಷಿಣ - ಶೇ.40.31, ಬ್ಯಾಟರಾಯನಪುರ - ಶೇ.42.12, ದಾಸರಹಳ್ಳಿ - ಶೇ.40.08, ಮಹಾದೇವಪುರ - ಶೇ.40.02, ಯಲಹಂಕ - ಶೇ.45.08, ಯಶವಂತಪುರ - ಶೇ.47.75
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ಬೆಳಿಗ್ಗೆಯಿಂದಲೇ ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನ ವೇಳೆಗೆ ಶೇಕಡಾವಾರು ಮತದಾನದಲ್ಲಿ ಇಳಿಕೆ ಕಂಡುಬಂದಿತ್ತು. ಸಂಜೆ ವೇಳೆ ಮತದಾನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 224 ಕ್ಷೇತ್ರ, 2,615 ಅಭ್ಯರ್ಥಿಗಳ ಹಣೆಬರಹವನ್ನು ರಾಜ್ಯದ 5,31,33,054 ಮತದಾರರು ನಿರ್ಧರಿಸಲಿದ್ದಾರೆ. ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications