ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲು
ಹೈಕಮಾಂಡ್ ನಾಯಕರ ಆದೇಶ, ಕರ್ನಾಟಕ ಉಸ್ತುವಾರಿ ಮುರಳೀಧರರಾವ್ ಅವರ ಸಂಧಾನ, ಕಾರ್ಯಕಾರಿಣಿ ಸಭೆ ಎಲ್ಲವೂ ಫೇಲ್ ಆಗಿದೆ. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ
ಬೆಂಗಳೂರು, ಮೇ 11 : ಹೈಕಮಾಂಡ್ ನಾಯಕರ ಆದೇಶ, ಕರ್ನಾಟಕ ಉಸ್ತುವಾರಿ ಮುರಳೀಧರರಾವ್ ಅವರ ಸಂಧಾನ, ಕಾರ್ಯಕಾರಿಣಿ ಸಭೆ ಎಲ್ಲವೂ ಫೇಲ್ ಆಗಿದೆ. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಕರೆದಿದ್ದ ಸುದ್ದಿಗೋಷ್ಠಿಗೆ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಗೈರು ಹಾಜರಾಗಿದ್ದಾರೆ.
ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲಾಗಿದೆ. ಬಿಜೆಪಿ ಬಿಕ್ಕಟ್ಟು ಯಾವ ಮಟ್ಟದಲ್ಲಿದೆ ಎಂಬುದು ಎಲ್ಲರ ಮುಂದೆ ಬಹಿರಂಗವಾಗಿದೆ.


ಬಿಎಸ್ ಯಡಿಯೂರಪ್ಪ ಅವರ ಜತೆಗೆ ಬಿಜೆಪಿ ಮುಖಂಡರಾದ ಆರ್ ಅಶೋಕ್, ಅಶ್ವಥನಾರಾಯಣ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಕಂಡು ಬಂದರು.

ಬಿಜೆಪಿ ನಾಯಕರ ಸಂಧಾನ, ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ನಂತರವೂ ಬಿಜೆಪಿ ಈಗಲೂ ಮನೆಯೊಂದು ಮೂರು ಬಾಗಿಲಾಗಿದೆ.












Click it and Unblock the Notifications