ಉಡುಪಿ ಕಾಲೇಜು ಘಟನೆ: ಬಿಜೆಪಿ ಫೇಕ್ ಫ್ಯಾಕ್ಟರಿಯಲ್ಲಿ ಸುಳ್ಳು ಸೃಷ್ಟಿ: ಲೆಟರ್‌ಹೆಡ್ ರಾಜಕೀಯ

ಬೆಂಗಳೂರು, ಜುಲೈ 26: ಉಡುಪಿಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಂ ಯುವತಿಯರು ಹಿಂದು ಯುವತಿಯ ವಿಡಿಯೋ ಚಿತ್ರೀಕರಣ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರು ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ಫೇಕ್ ಫ್ಯಾಕ್ಟರಿ ಹೊಂದಿದ್ದು, ಆಫ್ಯಾಕ್ಟರಿಯಿಂದ ಸುಳ್ಳುಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತದೆ. ಉಡುಪಿಯ ಮೆಡಿಲ್ ಕಾಲೇಜು ಪ್ರಕರಣವು ಅದೇ ಸಾಲಿಗೆ ಸೇರಿದೆ. ಇನ್ನೂ ಶಾಸಕ ಬಿ ಆರ್ ಪಾಟೀಲ್ ಅವರ ಹಳೆಯ ವಿಳಾದ ಲೆಟರ್‌ ಹೆಡ್‌ನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಅನುದಾನ ಬಿಡುಗಡೆಗೆ ಹಣದ ಬೇಡಿಕೆ ಇಡಲಾಗಿದೆ ಎಂದು ಮುದ್ರಿಸಲಾಗಿದೆ. ಇದೆಲ್ಲ ಬಿಜೆಪಿಯ ಸುಳ್ಳು ಸೃಷ್ಟಿ ಎಂದು ಕಾಂಗ್ರೆಸ್ ದೂರಿದೆ.

Karnataka BJP Have Fake Factory For Creating Fake News, Congress Slams On Opposition parties

ಬಿಜೆಪಿ ಫೇಕ್ ಫ್ಯಾಕ್ಟರಿಯು 'ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ' ಎಂದು ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ. ಘಟನೆ ನಡೆದಿದೆ ಎನ್ನಲಾಗುತ್ತಿದ್ದರೂ ಸಹ ದೂರು ದಾಖಲಾಗಿದ್ದರೂ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವುದು ಕಂಡು ಬಂದಿಲ್ಲ ಎಂದು ಕಾಂಗ್ರೆಸ್ ವಿವರಿಸಿದೆ.

ಬಿಜೆಪಿಯ ಫೇಕ್ ಫ್ಯಾಕ್ಟರಿಯ ಸದಸ್ಯೆ ಸೃಷ್ಟಿಸಿದ ಸುಳ್ಳನ್ನೇ ಹಿಡಿದು ಜಗ್ಗಾಡುತ್ತಿರುವುದು ಇದು ಕರ್ನಾಟಕ ಬಿಜೆಪಿ ನಾಯಕರ ಹತಾಶೆಯು ಮಿತಿಮೀರಿ ಕಟ್ಟೆಯೊಡೆದಿರುವುದಕ್ಕೆ ಸಾಕ್ಷಿ ಆಗಿದೆ ಎಂದು ಕಾಲೆಳೆದಿದೆ.

ಉಡುಪಿಯಲ್ಲಿ ಆಗಿದ್ದೇನು?

ಜಿಲ್ಲೆಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಾಶ್ ರೂಂ ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಯುವತಿಯೊಬ್ಬಳ ವಿಡಿಯೋ ಚಿತ್ರೀಕರಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಮೂವರಿ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಆದೇಶಿಸಿದೆ.

ವಾಶ್ ರೂಂನಲ್ಲಿ ಸಹ ಪಾಟಿಯ ವಿಡಿಯೋವನ್ನು ಮುಸ್ಲಿ ವಿದ್ಯಾರ್ಥಿನಿಯರು ಸೆರೆಹಿಡಿದಿದ್ದರು. ಈ ಸಂಬಂಧ ಹಿಂದೂ ಯುವರಿ ಕಾಲೇಜು ಕಚೇರಿಗೆ ದೂರು ನೀಡಿದ್ದರು. ಬಳಿಕ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯರ ಮೊಬೈಲ್ ವಶಕ್ಕೆ ಪಡೆದು, ಮಲ್ಪೆ ಠಾಣೆಯ ಪೋಲೀಸರಿಗೆ ನೀಡಿದ್ದರು. ಈ ಪ್ರಕರಣವು ಬಿಜೆಪಿಯ ಸುಳ್ಳು ಸೃಷ್ಟಿ ಎಂದು ಕಾಂಗ್ರೆಸ್ ಹೇಳುತ್ತಿದೆ.

Karnataka BJP Have Fake Factory For Creating Fake News, Congress Slams On Opposition parties

ಲೆಟರ್ ಹೆಡ್ ಕಥೆ ಏನು?

ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ. ಐದು ಗ್ಯಾರಂಟಿ ಯೋಜನೆಗಳ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ವಿಪಕ್ಷಗಳು ನಕಲಿ ಸೃಷ್ಟಿಯ ಮೊರೆ ಹೋಗಿವೆ ಎಂದು ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.

ಕಲಬುರಗಿ ಶಾಸಕ ಬಿ.ಆರ್.ಪಾಟೀಲ್ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಿದ್ದೆ ತಮ್ಮ ಸಾಧನೆ ಎಂದುಕೊಂಡರೆ ಅದು ಬಿಜೆಪಿಯ ಮೂರ್ಖತನವಾಗುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಒಬ್ಬರಿಗೆ ಹಲ್ಲು ಇಲ್ಲ-ಮತ್ತೊಬ್ಬರಿಗೆ ಕಡಲೆ ಇಲ್ಲ

ಇಷ್ಟೇ ಅಲ್ಲದೇ ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ತೋರಿಸಿದ್ದರು. ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ತಾಕತ್ತು ಇಲ್ಲ ಎಂದು ತಿಳಿಸಿದ್ದಾರೆ.

ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎಂದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿ ಜೊತೆ ಜೆಡಿಎಸ್ ಗೂ ಕುಟುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+