ತ್ರಿವಳಿ ತಲಾಖ್ ತೀರ್ಪು: ರಾಜ್ಯ ಬಿಜೆಪಿಯಿಂದ ಸಂಭ್ರಮಾಚರಣೆ
ಬೆಂಗಳೂರು, ಆಗಸ್ಟ್ 22 : ಸುಪ್ರೀಂ ಕೋರ್ಟ್ ಇಂದು ತ್ರಿವಳಿ ತಲಾಖ್ ನ್ನು ರದ್ದುಪಡಿಸಿ ನೀಡಿರುವ ಐತಿಹಾಸಿಕ ತೀರ್ಪನ್ನು ಕರ್ನಾಟಕ ಬಿಜೆಪಿ ಸ್ವಾಗತಿಸಿ ವಿಜಯೋತ್ಸವ ಆಚರಿಸಿತು.
ಬಿಜೆಪಿ ಅಲ್ಪಸಂಖ್ಯಾತ ಯುವ ಮೋರ್ಚಾ ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಘೋಷಣೆಗಳನ್ನು ಕೂಗಿ ಸಂಭ್ರಮಸಿದರು.

ಸಂಭ್ರಮಾಚರಣೆಯಲ್ಲಿ ಬಿಜೆಪಿ ನಾಯಕಿ ತೇಜಸ್ವಿನಿ, ಶ್ರುತಿ, ಬಿಜೆಪಿ ಅಲ್ಪಸಂಖ್ಯಾತ ಅಧ್ಯಕ್ಷ ಅಬ್ದುಲ್ ಅಜೀಂ, ರೈತ ಮೋರ್ಚಾ ರಾಜ್ಯಾದ್ಯಕ್ಷ ವಿಜಯಶಂಕರ್ ಸೇರಿದಂತೆ ಬಿಜೆಪಿಯ ಹಲವು ಕಾರ್ಯಕರ್ತರು ತ್ರಿವಳಿ ತಲಾಖ್ ಪದ್ಧತಿಗೆ ಇತಿಶ್ರೀ ಹಾಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿದರು.

ಇಂದು (ಆಗಸ್ಟ್ 22) ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಹೇಳಿದ್ದು, ತಲಾಖ್ ಪದ್ಧತಿಗೆ ಕಾನೂನಿನ ಚೌಕಟ್ಟು ನೀಡುವಂತೆ ಕೇಮದ್ರ ಸರ್ಕಾರಕ್ಕೆ ಆದೇಶಿಸಿತ್ತು..
ಕಾನೂನು ಜಾರಿಗೆ ಆರು ತಿಂಗಳ ಸಮಯಾವಕಾಶ ನೀಡಲಾಗಿದ್ದು, ಆರು ತಿಂಗಳೊಳಗೆ ಕಾನೂನು ಜಾರಿಗೆ ಬರುವವರೆಗೆ ತಲಾಖ್ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಜೆ ನೀಡಿ ಆದೇಶ ಹೊರಡಿಸಿದೆ.












Click it and Unblock the Notifications