ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಸೇರ್ಪಡೆ ಅಕ್ಷಮ್ಯ ಅಪರಾಧ: ಧರ್ಮ ಒಡೆಯಲು ಮುಂದಾಗಿದ್ದ ಕಾಂಗ್ರೆಸ್‌ಗೆ ತಕ್ಕ ಶಾಸ್ತಿ

ಬೆಂಗಳೂರು, ಏಪ್ರಿಲ್ 16: ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಗುರುತಿಸಲು ಕಾರಣವೇ ಬಿಜೆಪಿ ಪಕ್ಷ. ಹೀಗೆಂದು ಕರ್ನಾಟಕ ರಾಜ್ಯ ಬಿಜೆಪಿಯು ವಾಗ್ದಾಳಿ ನಡೆಸಿದೆ.

ಬಿಜೆಪಿ ಪಕ್ಷದಲ್ಲಿದ್ದುಕೊಂಡು ಸತತವಾಗಿ ಹುಬ್ಬಳ್ಳಿ ಧಾರವಾಡ ಕೇಂದ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ ಬಂದಿದ್ದ ಜಗದೀಶ್ ಶೆಟ್ಟರ್ ಅವರಿಗೆ 2023ರ ವಿಧಾನಸಭಾ ಚುನಾವಣೆಯ ಟಿಕೆಟ್ ಸಿಗದ ಕಾರಣ ಅವರು ಪಕ್ಷಾಂತರ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ವರಿಷ್ಠರು ಎಷ್ಟೇ ಮನವಿ ಮಾಡಿಕೊಂಡರು ಶೆಟ್ಟರ್ ಹಠ ಬಿಟ್ಟಿಲ್ಲ ಎಂದು ಕರ್ನಾಟಕ ಬಿಜೆಪಿಯು ಭಾನುವಾರ ಸರಣಿ ಟ್ವಿಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

Karnataka BJP Angry On Jagadish Shettar Resign Decision and Congress party

ಬಿಜೆಪಿಯು ಟ್ವೀಟ್‌ನಲ್ಲಿ ಜಗದೀಶ್ ಶೆಟ್ಟರ್ ಮಾತ್ರವಲ್ಲದೇ ಕಾಂಗ್ರೆಸ್‌ ಪಕ್ಷದವರ ವಿರುದ್ಧಲೂ ಹರಿಹಾಯ್ದಿದೆ. ಜಗದೀಶ್‌ ಶೆಟ್ಟರ್‌ ಅವರನ್ನು ಜನರು ಗುರುತಿಸಲು ಕಾರಣ ಬಿಜೆಪಿ. ಕೇಂದ್ರದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ರಾಜ್ಯ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಅವರು ಹಾಗೂ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದರು. ಈ ಸಂಬಂಧ ಶೆಟ್ಟರ್ ಜೊತೆಗಿನ ಸಭೆಯಲ್ಲಿ ತಿಳಿಸಿದ್ದರು.

ಪಕ್ಷದ ಆಶ್ವಾಸನೆ ತಿರಸ್ಕರಿಸಿದ ಶೆಟ್ಟರ್

ಹೀಗಿದ್ದರೂ ಪಕ್ಷದ ವರಿಷ್ಠ ಆಶ್ವಾಸನೆಯನ್ನು ತರಿಸ್ಕರಿದ ಶೆಟ್ಟರ್ ಅವರು ಹಠ ಮಾಡಿ ಕರ್ನಾಟಕ ಕಾಂಗ್ರೆಸ್‌ ಪಕ್ಷ ಜೊತೆ ಕೈಜೋಡಿಸಿದ್ದಾರೆ. ಅವರ ಈ ನಡೆ ಅಕ್ಷಮ್ಯ ಅಪರಾಧ. ಇದನ್ನು ನಾಡಿನ ಜನ ಕ್ಷಮಿಸಲು ಸಾಧ್ಯವಿಲ್ಲ ಎಂದು ಟೀಕಿಸಿದೆ.

ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಪಕ್ಷ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಜಗದೀಶ್ ಅವರನ್ನು ರಾಜ್ಯ ಮತ್ತು ರಾಷ್ಟ್ರ ನಾಯಕರು ಸಂಪರ್ಕಿಸಿದ್ದರು. ದೆಹಲಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿ ಮಾತುಕತೆ ನಡೆಸಿತ್ತು. ಹೊಸಬರನ್ನು ತಾವು ಬೆಂಬಲಿಸಿ, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಈ ಹಿಂದೆಯೆ ಬಿಜೆಪಿ ತಿಳಿಸಿತ್ತು ಎನ್ನಲಾಗಿದೆ.

Karnataka BJP Angry On Jagadish Shettar Resign Decision and Congress party

ಆದರೆ ಪಟ್ಟಿ ಬಿಡುಗಡೆಯಾಗುತ್ತಿದಂತೆ ಶೆಟ್ಟರ್ ಅವರಲ್ಲಿ ಅಸಮಾಧಾನದ ಕಿಡಿ ಹೊತ್ತಿಕೊಂಡಿತು. ಅಲ್ಲಿಂದ ನೆನ್ನೆ ಶನಿವಾರದವರೆಗೆ (ಏಪ್ರಿಲ್ 15) ಬಿಜೆಪಿ ಹಲವು ನಾಯಕರು ಅವರೊಂದಿಗೆ ನಿರಂತರವಾಗಿ ಮಾತನಾಡಿದ್ದಾರೆ. ಹಲವು ಸಭೆ ನಡೆಸಿದ್ದರು ಸಂಧಾನ ವಿಫಲವಾಗಿಲ್ಲ.

ಶಾಸಕ ರಘುಪತಿ ಭಟ್ ಹಾಗೂ ಮಾಜಿ ಸಚಿವ ಎಸ್. ಅಂಗಾರ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿಯವರೇ ಆಗಿದ್ದು, ಟಿಕೆಟ್ ವಿಚಾರದಲ್ಲಿ ಪಕ್ಷ ತೆಗೆದುಕೊಂಡ ನೀರ್ಧಾರಕ್ಕೆ ಬದ್ಧವಾಗಿದ್ದಾರೆ. ಅವರು ಪಕ್ಷದ ತೀರ್ಮಾನವನ್ನು ಗೌರವಯುತವಾಗಿ ಸ್ವಾಗಿಸಿದ್ದಾರೆ. ಅವರನ್ನು ಬಿಜೆಪಿ ಗೌರವಿಸುತ್ತದೆ ಎಂದು ಬಿಜೆಪಿ ತಿಳಿಸಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಕಳೆದ ಬಾರಿಯ (2018) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿದ್ದರು ಎಂದು ಬಿಜೆಪಿ ಆರೋಪಿಸಿದೆ. ಧರ್ಮ ಒಡೆಯಲು ಮುಂದಾದವರನ್ನು ಕರ್ನಾಟಕದ ರಾಜ್ಯದ ಜನ ಒಕ್ಕೊರಲಿನಿಂದ ತಿರಸ್ಕಾರ ಮಾಡಿ ತಕ್ಕ ಶಾಸ್ತಿ ಮಾಡಿದ್ದರು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಮೂಲಕ ಬಿಜೆಪಿಯ ಪ್ರಬಲ ನಾಯಕ ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ನಾಯಕ ಜಗದೀಶ್ ಶೆಟ್ಟರ್‌ ಅವರಿಗೆ ಗಾಳ ಹಾಕಿದ್ದಕ್ಕೆ ಬಿಜೆಪಿ ಕೈ ನಾಯಕರ ವಿರುದ್ಧ ಕೆಂಡಾಮಂಡಲವಾಗಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+