Karnataka Elections 2023: ಇಬ್ರಾಹಿಂ ಕಾಲ್ಗುಣದಿಂದ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದ ಎಚ್.ಡಿ.ಕುಮಾರಸ್ವಾಮಿ

ಚುನಾವಣೆಯಲ್ಲಿ ಮತದಾರರನ್ನು ನಂಬಿಕೊಂಡಿರುವಂತೆ, ಜೆಡಿಎಸ್ ಪಕ್ಷ ಸಿಎಂ ಇಬ್ರಾಹಿಂ ಅವರ ಕಾಲ್ಗುಣವನ್ನು ನಂಬಿಕೊಂಡಿದೆ.. ಹೇಗೆ ಅಂತೀರಾ ಮುಂದೆ ಓದಿ.

ಬೆಂಗಳೂರು, ಫೆಬ್ರವರಿ. 13: ವಿಧಾನಸಭಾ ಚುನಾವಣೆ ಪ್ರಚಾರ ಭರದಿಮದ ಸಾಗುತ್ತಿದ್ದು, ಜಾತ್ಯಾತೀತ ಜನತಾದಳ ಕೂಡ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಗಳ ಮೂಲಕ ಜನರ ಬಳಿಗೆ ತೆರಳುತ್ತಿದೆ. ಈ ಬಾರಿ 123 ಸ್ಥಾನಗಳಲ್ಲಿಯೂ ಗೆಲುವು ದಾಖಲಿಸುತ್ತೇವೆ ಎಂಬ ವಿಶ್ವಾಸದಲ್ಲಿದೆ.

ಪಂಚರತ್ನ ರಥಯಾತ್ರೆಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪಕ್ಷದ ನೂತನ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಹಾಡಿ ಹೊಗಳಿರುವ ಘಟನೆ ವರದಿಯಾಗಿದೆ.

ಹಾಸನದಲ್ಲಿ ನಡೆ ಪಂಚರತ್ನ ರಥಯಾತ್ರೆ ವೇಳೆ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರ ಕಾಲ್ಗುಣದ ಬಗ್ಗೆ ಗುಣಗಾನ ಮಾಡಿದ್ದಾರೆ. ಯಾತ್ರೆ ಸಾಗುತ್ತಿರುವ ಗ್ರಾಮಗಳ ದೇವಸ್ಥಾನಗಳಲ್ಲಿ ಶುಭ ಶಕುನಗಳು ಜರುಗುತ್ತಿದ್ದು, ಇದೆಲ್ಲಾ ಮುಂದಿನ ಚುನಾವಣೆಯಲ್ಲಿ ಗೆಲುವು ಸೂಚಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Karnataka Assembly Elections 2023: HD Kumaraswamy Praises CM Ibrahim

"ನಾವು ಯಾತ್ರೆ ತೆಗೆದುಕೊಂಡು ಹೋಗುತ್ತಿರುವ ಊರುಗಳ ದೇವಸ್ಥಾನಗಳಲ್ಲಿ ಒಳ್ಳೆಯ ಶಕುನಗಳು ಬಂದಿವೆ. ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಎಲ್ಲಾ ದೇವರು ಒಳ್ಳೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು ಹೋಗಿ ಶಾಸ್ತ್ರ ಕೇಳಿದ್ದಾರೆ. ಇದೆಲ್ಲಾ ನಮ್ಮ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರ ಕಾಲ್ಗುಣದಿಂದ ಆಗುತ್ತಿದೆ. ಅವರ ಕಾಲ್ಗುಣ ತುಂಬಾ ಚೆನ್ನಾಗಿದೆ. ಕಳೆದ ಬಾರಿ ಅವರು ಪಾರ್ಟಿ ಅಧ್ಯಕ್ಷರಾದಾಗ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾದರು, ಈಗ ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಹಾಗಾಗಿ ನಾವು 123 ಸ್ಥಾನಗಳಲ್ಲಿ ಗೆಲುತ್ತೇವೆ. ನಾಡಿನ ಜನ 123 ಸ್ಥಾನಗಳನ್ನು ಜನತಾದಳಕ್ಕೆ ನೀಡುತ್ತಾರೆ. ನಾನು ಮಖ್ಯಮಂತ್ರಿಯಾಗುವುದು ಮುಖ್ಯವಲ್ಲ. ರಾಜ್ಯದ ಜನರ ಬಡತನ ನಿರ್ಮೂಲನೆಗಾಗಿ, ಹೆಣ್ಣು ಮಕ್ಕಳ ಸ್ವಾಭಿಮಾನದ ಬದುಕಿಗಾಗಿ" ಎಂದು ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ 2008ರಲ್ಲಿ ಮತ್ತೆ ಸೇರ್ಪಡೆಯಾಗುವುದಕ್ಕಿಂತ ಮೋದಲು ಸಿಎಂ ಇಬ್ರಾಹಿಂ 1996 ಮತ್ತು 1997 ರ ಅವಧಿಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದರು. ಈ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿ ಹುದ್ದೆ ಏರಿದ್ದರು. ಇದಾದ ಬಳಿಕ ಸಿಎಂ ಇಬ್ರಾಹಿಂ ಮತ್ತೆ ಕಾಮಗ್ರೆಸ್ ಸೇರಿದ್ದರು. ಈಗ ಮತ್ತೋಮ್ಮೆ ಜನತಾದಳದ ತೆನೆ ಹೊತ್ತು ಅಧ್ಯಕ್ಷರಾಗಿದ್ದಾರೆ.

ಈ ಹಿಂದೆ ಕಲಬುರಗಿಯಲ್ಲಿ ಮಾತನಾಡಿದ್ದ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರಲಿದೆ. ಎಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಒಂದು ವೇಳೆ ಅವರು ಸಿಎಂ ಆಗದಿದ್ದರೇ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+