ಚಾಮರಾಜಪೇಟೇಲಿ ಜಮೀರ್ ವಿರುದ್ಧ ನಿಲ್ಲಲಿರುವ ಜೆಡಿಎಸ್ ಅಭ್ಯರ್ಥಿ ಇವರೇ!
Recommended Video

ಬೆಂಗಳೂರು, ಸೆಪ್ಟೆಂಬರ್ 22: ''ಮುಂದಿನ ವಿಧಾನಸಭೆ ಎಲೆಕ್ಷನ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ನನ್ನ ತಲೆ ಕಡಿದು ದೇವೇಗೌಡರ ಪಾದದ ಮೇಲೆ ಇಡುತ್ತೇನೆ'' ಎಂದು ಸಡ್ಡು ಹೊಡೆದಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರ ಸವಾಲನ್ನು ಸ್ವೀಕರಿಸಿರುವ ಜೆಡಿಎಸ್ ಧುರೀಣ ದೇವೇಗೌಡರು, ಈಗ ಆ ಕ್ಷೇತ್ರದಲ್ಲಿ ಸೂಕ್ತವಾದ ಅಭ್ಯರ್ಥಿಯೊಬ್ಬರನ್ನು ಹುಡುಕಿದ್ದಾರೆ.
ಚಾಮರಾಜಪೇಟೆಯ ಕಾರ್ಪೊರೇಟರ್ ಇಮ್ರಾನ್ ಪಾಷ ಅವರೇ ದೇವೇಗೌಡರು ಹುಡುಕಿರುವ ಆ ಅಭ್ಯರ್ಥಿ. ಮಹಾಲಯ ಅಮಾವಾಸ್ಯೆ ಪೂಜೆ ಹಿನ್ನೆಲೆಯಲ್ಲಿ ಇಮ್ರಾನ್ ಪಾಷ ಅವರನ್ನು ಮನೆಗೆ ಕರೆಯಿಸಿಕೊಂಡು ಈ ಬಗ್ಗೆ ಚರ್ಚಿಸಿರುವ ಗೌಡರು, ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಸೂಚಿಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ದೇವೇಗೌಡರು ಹೀಗೆ ಮನೆಗೆ ಕರೆಯಿಸಿಕೊಂಡು ಮಾತನಾಡುವುದಕ್ಕೂ ಮೊದಲೇ ಪಾಷಾ ಅವರೇ ಜಮೀರ್ ವಿರುದ್ಧ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆಂಬ ವಿಚಾರ ಚಾಮರಾಜಪೇಟೆಯ ಗಲ್ಲಿಗಲ್ಲಿಗಳಲ್ಲಿ ಕೇಳಿಬಂದಿತ್ತು.
ಈ ವದಂತಿಗಳಿಗೆ ಇಂಬು ನೀಡುವಂತೆ ಇಮ್ರಾನ್ ಕೂಡಾ ಇತ್ತೀಚೆಗೆ ನಡೆದ ಗಣೇಶ ಉತ್ಸವ ಸೇರಿದಂತೆ ಹಲವಾರು ಸಭೆ, ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಿಸತೊಡಗಿದ್ದರು. ಚಾಮರಾಜ ಪೇಟೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.












Click it and Unblock the Notifications