Pawan Kalyan: ಪವನ್ ಕಲ್ಯಾಣ್ ಸಿನಿಮಾದ ಬ್ಯಾನರ್ ಹರಿದು ಬಿಸಾಕಿದ ಕನ್ನಡಿಗರು, ಹರಿಹರ ವೀರಮಲ್ಲು ಸಿನಿಮಾಗೆ ಸಂಕಷ್ಟ!
Pawan Kalyan: ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಚಿತ್ರ ಬಿಡುಗಡೆಗೆ ಬೆಂಗಳೂರಿನಲ್ಲಿ ಸಂಕಷ್ಟ ಎದುರಾಗಿದೆ. ಬೆಂಗಳೂರಿನಲ್ಲಿ ಪವನ್ ಕಲ್ಯಾಣ್ ಅವರು ನಟಿಸಿರುವ "ಹರಿಹರ ವೀರಮಲ್ಲು" ಎನ್ನುವ ತೆಲುಗು ಸಿನಿಮಾಗೆ ಇದೀಗ ಭಾರೀ ಸಂಕಷ್ಟ ಎದುರಾಗಿದ್ದು, ಕನ್ನಡಪರ ಸಂಘಟನೆಗಳು ಪವನ್ ಕಲ್ಯಾಣ್ ಅವರ ಸಿನಿಮಾದ ಪೋಸ್ಟರ್‌ಗಳನ್ನು ಹರಿದು ಬಿಸಾಕಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದು ಅವರನ್ನೂ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಏನಿದು ವಿವಾದ ಎನ್ನುವ ಸಂಪೂರ್ಣ ವಿವರ ನೋಡೋಣ.
ನಟ ಮತ್ತು ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಸಕ್ರಿಯ ರಾಜಕೀಯದಲ್ಲಿ ಇರುವುದರೊಂದಿಗೆ ಚಿತ್ರರಂಗದಲ್ಲೂ ಫೇಮಸ್. ಸಿನಿಮಾಗಳಲ್ಲಿ ಈಗಲೂ ನಟಿಸುತ್ತಿದ್ದಾರೆ. ಹರಿಹರ ವೀರಮಲ್ಲು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಅಂದರೆ ತೆಲುಗು ಮತ್ತು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ತೆಲುಗು ಚಿತ್ರರಂಗದ ಪ್ರಮುಖ ನಟರಾದ ಪವನ್ ಕಲ್ಯಾಣ್ ಹಾಗೂ ಬಾಲಯ್ಯ ಅವರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಸಿನಿಮಾದ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಇಲ್ಲದೆ ಇರುವುದಕ್ಕೆ ಹಾಗೂ ಅವರು ಇತ್ತೀಚಿಗೆ ಹಿಂದಿ ಭಾಷೆಗೆ ಬೆಂಬಲ ನೀಡಿದ್ದಕ್ಕೆ ಬೆಂಗಳೂರಿನ ಸಂಧ್ಯಾ ಚಿತ್ರಮಂದಿರದಲ್ಲಿ ಹರಿಹರ ವೀರಮಲ್ಲು ಬ್ಯಾನರ್ ಹರಿದು ಬಿಸಾಕಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರು ಹರಿಹರ ವೀರಮಲ್ಲು ಸಿನಿಮಾ ಹಾಗೂ ಪವನ್ ಕಲ್ಯಾಣ್ ಅವರ ಫೋಟೋ ಇರುವ ಬ್ಯಾನರ್ ಅನ್ನು ಹರಿದು ಬಿಸಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಮೊದಲು ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಬ್ಯಾನರ್ ಹರಿದು ಬಿಸಾಕಿದ ಕನ್ನಡಿಗರು..#PawanKalyan #Kannada #KannadaProtest #HariharaVeeramallu #BannerIssue #KannadaAbhimanigalu #CinemaControversy #OIKannada #ViralWatch pic.twitter.com/EnYO3vZ2if
— oneindiakannada (@OneindiaKannada) July 23, 2025
ನಟ ಪವನ್ ಕಲ್ಯಾಣ್ ಅವರ ಸಿನಿಮಾ ಬಹಳ ದಿನಗಳ ನಂತರ ಬಿಡುಗಡೆಯಾಗಿದೆ. ಅವರು ಸಕ್ರಿಯ ರಾಜಕೀಯದಲ್ಲಿ ಗುರುತಿಸಿಕೊಂಡಿರುವುದರಿಂದ ಸಿನಿಮಾಗಳಲ್ಲಿ ಹೊಸದಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಅವರ ಹಿಂದಿ ಪ್ರೇಮವನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈಚೆಗೆ ಹಿಂದಿ ತೆಲುಗು ಭಾಷೆಯ ಅಜ್ಜಿ ಎಂದು ಅವರು ಹೇಳಿದ್ದರು. ತೆಲುಗು ಸಹ ದ್ರಾವಿಡ ಭಾಷೆಯಾಗಿದೆ. ದ್ರಾವಿಡ ಭಾಷೆಗಿಂತಲೂ ಹಿಂದಿ ಶ್ರೇಷ್ಠ ಎಂದು ಅವರು ಹೇಳಿರುವುದು ಆಂಧ್ರಪ್ರದೇಶದಲ್ಲೇ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅವರ ಸಿನಿಮಾಗೆ ಭಾಷಾ ವಿವಾದ ಮುಟ್ಟಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications