ಕನ್ನಡಿಗರಿಗೆ ಟ್ಯಾಲೆಂಟ್ ಇಲ್ಲದೆ ನಮ್ಮನ್ನ ಕರೆಸ್ತಿದ್ದಾರೆ ಎಂದ ತೆಲುಗು ಯುವತಿ!

ಕೀಳು ಮಟ್ಟದ ವಿಡಿಯೋಗಳನ್ನು ಮಾಡುವುದು. ಆ ವಿಡಿಯೋಗಳಲ್ಲಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಹೀಯಾಳಿಸುವುದರಿಂದಲೇ ಫೇಮಸ್‌ ಆಗುವ ಸಣ್ಣ ಬುದ್ಧಿಯನ್ನು ಕೆಲವರು ತೋರಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ನೆರೆಯ ರಾಜ್ಯದಿಂದ ಬಂದ ಯುವತಿ ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ತೀರ ಕೀಳಾಗಿ ಮಾತನಾಡಿರುವುದು.

ನೆರೆಯ ರಾಜ್ಯದ ಯುವತಿ ಕನ್ನಡಿಗರ ಬಗ್ಗೆ ಹಾಗೂ ಇಲ್ಲಿನ ಭಾಷೆಯ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ್ದು, ಈ ವಿಡಿಯೋಗೆ ಭಾರೀ ಹಾಗೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆ ಯುವತಿ ಮಾಡಿರುವ ವಿಡಿಯೋಗೆ ಕನ್ನಡ ಅಭಿಮಾನಿಗಳು ಸಹ ರಿಯಾಕ್ಷನ್‌ ವಿಡಿಯೋ ಮಾಡಿದ್ದಾರೆ.

ಆಕೆಯ ಸೋಷಿಯಲ್‌ ಮೀಡಿಯಾದ ತುಂಬಾ ಕನ್ನಡಿಗರು, ಕನ್ನಡ ನೆಲ - ಜನ ಹಾಗೂ ಭಾಷೆಯ ಬಗ್ಗೆ ಕೀಳಾಗಿ ಮಾತನಾಡಿರುವ ಹಾಗೂ ಕಾಮೆಂಟ್‌ ಮಾಡಿರುವುದೇ ಇದೆ. ಕರ್ನಾಟಕದ ರಾಜಕಾರಣಿಗಳು, ವ್ಯಕ್ತಿಗಳು, ನೀರು ಹಾಗೂ ಪೊಲೀಸರು ಸೇರಿದಂತೆ ಯಾರ ಬಗ್ಗೆಯೂ, ಇಲ್ಲ ಯಾವ ವಿಷಯದ ಬಗ್ಗೆಯೂ ಆಕೆಗೆ ಗೌರವ ಇಲ್ಲ ಎಂದು ಡಿಜಿಟಲ್‌ ಕ್ರಿಯೇಟರ್‌ ಆಗಿರುವ ಕಿರಿಕ್‌ ರವಿ ಅವರು ರಿಯಾಕ್ಷನ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಆಕೆ ಕನ್ನಡದ ಬಗ್ಗೆ ಮಾಡಿರುವ ಕೆಟ್ಟ ಕೆಟ್ಟ ಕಮೆಂಟ್‌ ಹಾಗೂ ವಿಡಿಯೋಗಳನ್ನು ಕನ್ನಡಿಗರಿಗೆ ತೋರಿಸಿದ್ದಾರೆ.

ಯುವತಿ ಮಾಡಿರುವ ಕಾಮೆಂಟ್ ಏನು ?

ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಆಕೆ ಹಲವು ಕೆಟ್ಟ ಪೋಸ್ಟ್‌ಗಳನ್ನು ಮಾಡಿದ್ದಾಳೆ. ಅದರಲ್ಲಿ ಕೆಲವು ಈ ರೀತಿ ಇದೆ.

ಡಿಯರ್‌ ಬಿಸಿಬೇಳೆಬಾತ್‌ ಜನರೇ (ಕನ್ನಡಿಗರ ಪ್ರಸಿದ್ಧ ಆಹಾರವನ್ನು ಉಲ್ಲೇಖಿಸಿ) ಜನರಿಗೆ ಪೊಳ್ಳು ಮಾತನ್ನು ಹೇಳುವ ಮುಂಚೆ ನೀವು ಅದನ್ನು ಫಾಲೋ ಮಾಡಿ ಅಂತ ಕಾಮೆಂಟ್‌ ವೊಂದನ್ನು ಮಾಡಿದ್ದು, ಈ ಕಾಮೆಂಟ್‌ ಅನ್ನು ಇನ್ಸಟಾಗ್ರಾಮ್‌ (Instagram)ನಲ್ಲಿ ಪಿನ್‌ ಮಾಡಿದ್ದಾಳೆ.

ಕರ್ನಾಟಕಕ್ಕೆ ಯಾಕೆ ಬಂದಿದ್ದೀಯಾ ನಿಮ್ಮ ರಾಜ್ಯಕ್ಕೇ ಹೋಗು ಎಂದು ಕನ್ನಡಿಗರು ಆಕೆಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಯುವತಿ ನಮ್ಮ ರಾಜ್ಯಕ್ಕೆ ಬಾ ಸ್ವಲ್ಪ ನೀರು ಕೊಡ್ತೀವಿ ಅಂತ ಕನ್ನಡಿಗರನ್ನು ಕೆಣಕಿದ್ದಾಳೆ.

Kannadigas don t have talent young woman said Kannadigas angered

ಕನ್ನಡಿಗರಿಗೆ ಟ್ಯಾಲೆಂಟ್‌ ಇಲ್ಲ, ಗತಿ ಇಲ್ಲ!

ಕನ್ನಡಿಗರೊಬ್ಬರು ತೆಲುಗು ಭಾಷೆಯಲ್ಲೇ ಆಕೆಗೆ ಕ್ಲಾಸ್‌ ತೆಗೆದುಕೊಂಡಿರುವುದು ಸಹ ಇದೆ. ನಿನಗೆ ನಾಚಿಕೆಯಾಗಬೇಕು ಈ ರೀತಿ ಮಾತನಾಡುವುದಕ್ಕೆ. ನಾಚಿಕೆ ಮಾನ, ಮರ್ಯಾದೆ ಇರುವವರು ಯಾರು ಸಹ ಈ ರೀತಿ ಮಾತನಾಡಲ್ಲ. ನಮ್ಮ ರಾಜ್ಯದಲ್ಲಿ ಭಿಕ್ಷೆ ಬೇಡುವುದಕ್ಕೆ ನೀನು ಬಂದಿದ್ದೀಯಾ ಎಂದಿದ್ದಾರೆ.

ಇದಕ್ಕೆ ರಿಪ್ಲೈ ಮಾಡಿರುವ ಯುವತಿ, "ಮ್ಯಾಟರ್‌ ಏನೆಂದರೆ ಕನ್ನಡಿಗರಿಗೆ ಗತಿ ಇಲ್ಲ, ಟ್ಯಾಲೆಂಟ್‌ ಇಲ್ಲ. ಹೀಗಾಗಿ, ಬೇರೆ ರಾಜ್ಯದಿಂದ ಜನರನ್ನು ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಅಲ್ಲಿ ಮೊದಲು ಕಣ್ಣೀರಾಕಿ" ಎಂದು ವ್ಯಂಗ್ಯವಾಡಿದ್ದಾಳೆ. ಆಕೆಯ ಮಾತು ಹಾಗೂ ಕಾಮೆಂಟ್‌ಗಳು ಕನ್ನಡಿಗರನ್ನು ಇನ್ನಿಲ್ಲದಂತೆ ಕೆಣಕಿವೆ.

ಮುಂದುವರಿದು, ಕನ್ನಡಿಗರೊಬ್ಬರು ಈ ಕಾಮೆಂಟ್‌ಗಳು ಸರ್ಕಾರದ ಕಣ್ಣಿಗೆ ಬಿದ್ದರೆ ನಿಮ್ಮ ಮೇಲೆ ಎಫ್‌ಐಆರ್‌ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಯುವತಿ, ಇಲ್ಲಿನ (ಕರ್ನಾಟಕ ಸರ್ಕಾರ) ಪ್ರತಿಭಟನೆ ಮಾಡುವುದರಲ್ಲಿ, ರಾಜಕೀಯ ಹಾಗೂ ಜಾತಿ ಗಲಾಟೆಯಲ್ಲಿ ತೊಡಗಿದ್ದಾರೆ ಅಂತಲೂ ವ್ಯಂಗ್ಯ ಮಾಡಿದ್ದಾರೆ. ಇವಳ ವಿಡಿಯೋ ಹಾಗೂ ಕಾಮೆಂಟ್‌ಗಳನ್ನು ಕೆಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅದಕ್ಕೂ ಆಕೆ ವ್ಯಂಗ್ಯವಾಡಿದ್ದಾಳೆ.

ನಿಮ್ಮ ಪೊಲೀಸರಿಗೆ ಕನ್ನಡಲ್ಲಿ ಟ್ಯಾಗ್‌ ಮಾಡಿ ಇಲ್ಲ ಅಂದ್ರೆ ಅವರಿಗೆ ಅರ್ಥ ಆಗಲ್ಲ ಎಂದಿದ್ದಾಳೆ. Savageakka (Savage-akkayya) ಎನ್ನುವ ಇನ್ಸ್‌ಟಾ ಖಾತೆಯಿಂದ ಈ ರೀತಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅವಹೇಳನ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+