Kannadigaru: ಬೆಂಗಳೂರಿನ ನಂತರ ಈ ನಗರಗಳಲ್ಲೂ ತೆಲುಗು, ಹಿಂದಿ, ಮಲಯಾಳಂ ವಲಸಿಗರ ಸಂಖ್ಯೆ ಹೆಚ್ಚಳ, ಸೋಶಿಯಲ್ ಮೀಡಿಯಾ ಚರ್ಚೆ

Kannadigaru: ಬೆಂಗಳೂರಿನಲ್ಲಿ ವಲಸೆ ಸಮಸ್ಯೆ ಮಿತಿ ಮೀರಿದೆ. ಬೆಂಗಳೂರಿನ ಜನಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ಬೆಂಗಳೂರಿನ ಜನಸಂಖ್ಯೆಯು 1.47 ಕೋಟಿಗೂ ಹೆಚ್ಚಾಗಿದೆ. ಆದರೆ ಬೆಂಗಳೂರಿನಿಂದಿಗೆ ಕರ್ನಾಟಕದ ವಿವಿಧ ಭಾಗಗಳಲ್ಲೂ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಸಂಕಷ್ಟ ಎದುರಾಗಲಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಬರಹಗಾರ ಸುನೀಲ್ ಜೆ ಅವರು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಈ ಪೋಸ್ಟ್‌ ವೈರಲ್ ಆಗಿದೆ.

"ಸುಮಾರು 10-12 ವರ್ಷಗಳ ಹಿಂದೆ, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳಲ್ಲಿ ಒಬ್ಬ ವಲಸಿಗನೂ ಕಾಣುತ್ತಿರಲಿಲ್ಲ. ಈಗಂತೂ ಬಸ್ಸಿನಲ್ಲಿ ಅರ್ಧಕ್ಕರ್ಧ ಜನ ಇತರೆ ಭಾಷೆಯವರೇ ತುಂಬಿರ್ತಾರೆ. ಶಿವಮೊಗ್ಗ ತಲುಪುವವರೆಗೂ ಭೋಜಪುರಿ, ತೆಲುಗು, ಹಿಂದಿ, ಮಲಯಾಳಂ ಮುಂತಾದ ಭಾಷೆಗಳು ಕೇಳ್ತಾನೆ ಇರುತ್ತವೆ.

Kannadigaru

ಕೇವಲ ವೆದರ್ ನೋಡಿ ಬೆಂಗಳೂರಿಗೆ ಬರ್ತೀವಿ ಅಂತಾರಲ್ಲ ಅದೆಲ್ಲ ಸುಳ್ಳು. ಬೆಂಗಳೂರಿಂದ 400-500 ಕಿಮೀ ದೂರದ ಚಿಕ್ಕಪುಟ್ಟ ಹಳ್ಳಿಪಟ್ಟಣಗಳಿಗೂ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ. ಊರಿನಲ್ಲಿ ಈ ಸಮಸ್ಯೆಯ ಬಗ್ಗೆ ಯಾರ ಹತ್ತಿರ ಮಾತಾಡಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ. ತಮ್ಮ ಮನೆಗಳ ಬಾಡಿಗೆ ದರ, ಸೈಟಿನ ಬೆಲೆ ಹೆಚ್ಚಾಗುತ್ತೆ ಅಂತ ಲೆಕ್ಕಹಾಕಿ ಖುಷಿಪಡೋರೇ ಹೆಚ್ಚು" ಎಂದು ಸುನೀಲ್ ಜೆ ಅವರು ಹೇಳಿದ್ದಾರೆ.

ಮುಂದುವರಿದು "ಆದರೆ ಮಿತಿಮೀರಿದ ಜನಸಂಖ್ಯೆಯೇ ಎಲ್ಲ ಸಮಸ್ಯೆಗಳ ಮೂಲ ಅನ್ನೋದು ನಮ್ಮ ಜನಕ್ಕೆ ಅರ್ಥ ಆಗ್ತಿಲ್ಲ. ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕದ ಉದ್ದಗಲಕ್ಕೂ ಜನಸಾಂದ್ರತೆ ಹೆಚ್ಚಾಗಿ ನೀರು, ನೆಲೆ, ಉದ್ಯೋಗಾವಕಾಶಗಳು, ಸಾರ್ವಜನಿಕ ಸೌಲಭ್ಯಗಳು ಹೀಗೆ ಪ್ರತಿಯೊಂದಕ್ಕೂ ವಲಸಿಗರ ಜೊತೆ ಪೈಪೋಟಿ ಮಾಡುವ ಸಂದರ್ಭ ಬರುತ್ತಲ್ಲ, ಆಗ ಜೀವನದ ಗುಣಮಟ್ಟ ಒಂದೇ ಸಲ ಕುಸಿಯುತ್ತೆ. ಆಗ ಬಿಮಾರು ರಾಜ್ಯಗಳ ಸ್ಥಿತಿ ನಮಗೂ ಎದುರಾಗುತ್ತೆ. ಕರ್ನಾಟಕ ಅಥವಾ ಕನ್ನಡದ ಮಹತ್ವ ಹೆಚ್ಚು ದಿನ ಇರುತ್ತೆ ಅನ್ನೋ ನಂಬಿಕೆ ಹೊರಟು ಹೋಗಿದೆ. ಎಷ್ಟು ದಿನ ಎಂಜಾಯ್ ಮಾಡಬಹುದೋ ಮಾಡಿ ಅಷ್ಟೇ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸುನೀಲ್ ಜೆ ಅವರ ಬಹರಕ್ಕೆ ಹಲವು ಕನ್ನಡಿಗರು ದನಿಗೂಡಿಸಿದ್ದಾರೆ. ಕನ್ನಡಿಗರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಅಂತ ಮುಂದೆ ನೋಡೋಣ.

ನೆಟ್ಟಿಗರು ಹೇಳಿದ್ದೇನು

ವಿಕಾಸ್ ಹೆಗ್ಡೆ ಎನ್ನುವವರು ಇಡೀ ಕರ್ನಾಟಕ ವಲಸಿಗರಿಂದ ತುಂಬಿಹೋಗುತ್ತಿದೆ. ಬಿಸಿನೆಸ್ ಲಾಬಿಗಳಿಂದ ಮೇಲ್ಮಟ್ಟದಿಂದ ವಲಸಿಗರ ಪ್ರಭಾವ, ಹಿಡಿತ ಹೆಚ್ಚಾಗುತ್ತಿದೆ. ಈ ಜನರೇಶನ್‌ಅಲ್ಲಿ ಕೆಲಸಕ್ಕೆ ಅಂತ ಬಂದವರು ಮುಂದಿನ ಜನರೇಶನ್‌ನೊಳಗೆ ಆಗಿರುತ್ತಾರೆ. ಹಲವೆಡೆ ಆಂಧ್ರ, ತಮಿಳುನಾಡು, ರಾಜಸ್ಥಾನದಿಂದ ಬಂದು ಬೆಳೆದು ನಿಂತವರನ್ನು ನೋಡಬಹುದು. ಇತ್ತೀಚೆಗಿನ ಹೊಸ ವ್ಯಾಪಾರಗಳು, ಶಾಲಾ ಕಾಲೇಜು ಯಾವುದಾದರೂ ನೋಡಿ, ಅದರ ಪ್ರಕಾರ ಪರಭಾಷಿಕರು. ಭೂಮಿಯಂತೂ ಪೂರಾ ರಿಯಲ್ ಎಸ್ಟೇಟ್ ಮೂಲಕ ಪರರಾಜ್ಯದವರ ಪಾಲಾಗುತ್ತಿದೆ. ರಾಜಕಾರಣಿಗಳಲ್ಲಿ, ಎಮ್ಮೆಲ್ಲೆ ಎಂಪಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಪರಭಾಷಿಕರಿದ್ದಾರೆ. ಅವರ ಮೂಲ ರಾಜ್ಯಗಳ ಲಾಭಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಕನ್ನಡಿಗರು ಯಾವುದೇ ಲಾಬಿ ಮಾಡದೇ, ಒಗ್ಗಟ್ಟಿಲ್ಲದೇ ಹೊರಗಿನವರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

Kannada:
Kannada: "ಕನ್ನಡ ತುಂಬಾ ಕೆಟ್ಟದಾಗಿ ಕೇಳಿಸುವ ಭಾಷೆ" ಎಂದ ಆಂಧ್ರವಾಲ, ತೆಲುಗು ಲಿಪಿಯೇ ನಮ್ಮದು ಎಂದ ಕನ್ನಡಿಗರು, ವೈರಲ್ ಪೋಸ್ಟ್‌

ವಿನಯ್ ಎನ್ನುವವರು, ಇವತ್ತು ಕರ್ನಾಟಕದ ಸಣ್ಣ ಸಣ್ಣ ಪಟ್ಟಣಗಳಲ್ಲೂ ವಲಸಿಗರೆ ಇದ್ದಾರೆ ಕಬ್ಬಿನ ಹಾಲು, ಪಾನಿ ಪುರಿ, ಐಸ್ ಕ್ರೀಮ್ ಎಲ್ಲಾ ವ್ಯಾಪಾರದಲ್ಲೂ ಹಿಂದಿಯವರೆ ಇದ್ದಾರೆ ಎಂದಿದ್ದಾರೆ. ಮಹೇಶ ಮಠಪತಿ ಎನ್ನುವವರು ಕರ್ನಾಟಕದ ಎಲ್ಲಾ ಜಿಲ್ಲೆಗಳು ತೆಲುಗು ಹಾಗೂ ನಾರ್ತಿಗಳು ಸಿಕ್ತಾರೆ, ಅಷ್ಟು ಹೆಚ್ಚು ವಲಸೆ ಆಗಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+