ಇನ್ಮುಂದೆ ಟ್ರೂಕಾಲರ್‌ನಲ್ಲೂ ಕನ್ನಡಿಗರದ್ದೇ ಹವಾ!
ಟ್ರೂಕಾಲರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮೊಬೈಲ್ ಪೋನ್‌ಗೆ ಯಾವುದೇ ಹೊಸ ನಂಬರ್‌ನಿಂದ ಕಾಲ್‌ಬಂದರೂ, ಇಲ್ಲ ಯಾವುದಾದರೂ ನಂಬರ್ ಬಗ್ಗೆ ಅನುಮಾನ ಬಂದರೆ ನಾವು ಮಾಡುವ ಮೊದಲ ಕೆಲಸ ಆ ನಂಬರ್ ಅನ್ನು ಟ್ರೂಕಾಲರ್‌ನಲ್ಲಿ ಚೆಕ್ ಮಾಡುವುದು. ವಂಚಕರು ಹಾಗೂ ಮೋಸ ಹೋಗುವುದನ್ನು ತಪ್ಪಿಸುವುದಕ್ಕೆ ಟ್ರೂಕಾಲರ್ ತುಂಬಾನೇ ಹೆಲ್ಪ್ ಆಗಿದೆ. ಇದೀಗ ಈ ಸಂಸ್ಥೆಯಲ್ಲೂ ಕನ್ನಡಿಗರದ್ದೇ ಹವಾ ಶುರುವಾಗಿದೆ. ಅದೇನು ಎನ್ನುವ ಮಾಹಿತಿ ಇಲ್ಲಿದೆ.
ಟ್ರೂಕಾಲರ್ ಈಗೆಲ್ಲ ನಮ್ಮ ನಿತ್ಯ ಬಳಕೆಯ ಆ್ಯಪ್ ಗಳಲ್ಲಿ ಒಂದು ಎನ್ನುವಷ್ಟು ಫೇಮಸ್ ಆಗಿದೆ. ಈ ಆ್ಯಪ್‌ನ ಬಗ್ಗೆ ಬಂದ ದೂರುಗಳು ಹೊರತಾಗಿಯೂ ಭಾರತದಲ್ಲಿ ಈ ಆ್ಯಪ್ ಅನ್ನು ಕೋಟ್ಯಾಂತರ ಜನ ಬಳಸುತ್ತಿದ್ದಾರೆ. ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ ಈ ಸಂಸ್ಥೆಯಲ್ಲೂ ಕನ್ನಡಿಗರ ಹವಾ ಶುರುವಾಗಿದೆ. ಹೌದು ನೀವು ಓದಿದ್ದು ಸರಿಯಾಗಿಯೇ ಇದೆ. ಟ್ರೂಕಾಲರ್‌ನ ಸಿಇಒ ಆಗಿ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದು, ಇದೀಗ ಹೊಸ ದಾಖಲೆ ಸೃಷ್ಟಿಯಾಗಿದೆ.

ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಸಿಇಒ ಆಗಿ ಈಗಾಗಲೇ ಹಲವು ಭಾರತೀಯರು ನೇಮಕ ಆಗಿದ್ದಾರೆ. ಈ ಸಾಲಿಗೆ ಇದೀಗ ಟ್ರೂಕಾಲರ್ ಸೇರ್ಪಡೆಯಾಗಿದೆ. ಈಗಾಗಲೇ ಗೂಗಲ್‌ನ ಸಿಇಒ ಆಗಿ ಸುಂದರ್ ಪಿಚೈ ಅವರು ಇದ್ದಾರೆ. ಸುಂದರ್ ಪಿಚೈ ಅವರು ಗೂಗಲ್‌ನ ಸಿಇಒ ಆದ ಮೇಲೆ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿತ್ತು. ಅದರಲ್ಲೂ ಅವರು ತಮಿಳುನಾಡಿನ ಮೂಲವಾಗಿದ್ದರಿಂದ ಸಹಜವಾಗಿಯೇ ದಕ್ಷಿಣ ಭಾರತೀಯರು ಸಂಭ್ರಮಿಸಿದ್ದರು. ಇದೀಗ ನಮ್ಮದೇ ರಾಜ್ಯದವರೊಬ್ಬರು ಟ್ರೂಕಾಲರ್‌ನ ಸಿಇಒ ಆಗಿ ನೇಮಕವಾಗುವ ಸಮಯ ಸಮೀಪಿಸಿದೆ.
ಟ್ರೂಕಾಲರ್ ಎನ್ನುವುದು ಸ್ವೀಡನ್ ದೇಶದ ಸಂಸ್ಥೆಯಾಗಿದೆ. ಈ ಸಂಸ್ಥೆ ಈಗಾಗಲೇ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಕೊಡುತ್ತಿದೆ. ಟ್ರೂಕಾಲರ್ ಸೇವೆಯನ್ನು ಈಗಾಗಲೇ ಕೋಟ್ಯಾಂತರ ಜನ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಂಸ್ಥೆಗೆ ಕನ್ನಡಿಗರೊಬ್ಬರು ಸಿಇಒ ಆಗುತ್ತಿರುವುದು ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದೆ. ಈಗ ಕನ್ನಡಿಗ ರಿಷಿತ್ ಜುಂಜುನವಾಲ ಅವರು ಟ್ರೂಕಾಲರ್ ಸಿಇಒ ಆಗಿ
ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಹಾಗೂ ಕನ್ನಡಿಗ ರಿಷಿತ್ ಜುಂಜುನವಾಲ ಅವರು ಇದೀಗ ಟ್ರೂಕಾಲರ್‌ನ ಸಿಇಒ ಆಗಿ ಆಯ್ಕೆಯಾಗಿದ್ದು, ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. ರಿಷಿತ್ ಅವರು 9 ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಆಗಿ ನೇಮಕವಾಗಿದ್ದು, ಇಷ್ಟರಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ಈಗ ಟ್ರೂಕಾಲರ್ ಸಂಸ್ಥೆಯಲ್ಲಿ ಅವರು ಚೀಫ್ ಪ್ರಾಡಕ್ಟ್ ಆಫೀಸರ್ ಆಗಿದ್ದಾರೆ ಎನ್ನಲಾಗಿದೆ.
ಬೆಂಗಳೂರಲ್ಲಿ ವಿದ್ಯಾಭ್ಯಾಸ
ಇನ್ನು ರಿಷಿತ್ ಜುಂಜುನವಾಲ ಅವರು ಕರ್ನಾಟಕದ ಬೆಂಗಳೂರಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಅವರ ಸಂಪೂರ್ಣ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಆಗಿದೆ. ಇಲ್ಲಿನ ಮಲ್ಯ ಅದಿತಿ ಶಾಲೆಯಲ್ಲಿ ಓದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಪೂರೈಸಿದ್ದಾರೆ. ಇದೀಗ ವಿಶ್ವ ಮಟ್ಟದಲ್ಲಿ ಫೇಮಸ್ ಆಗಿರುವ ಟ್ರೂಕಲರ್ ಸಿಇಒ ಆಗಿದ್ದಾರೆ.












Click it and Unblock the Notifications