• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶುದ್ಧ, ಸ್ಪಷ್ಟ ಕನ್ನಡ ಮಾತನಾಡುವುದು ಫ್ಯಾಷನ್ ಆಗ್ಲಿ: ತೇಜಸ್ವಿನಿ ಅನಂತಕುಮಾರ್‌

|

ಬೆಂಗಳೂರು, ಆಗಸ್ಟ್ 30: ಸಂಸ್ಕೃತದ ನಂತರ ಎಲ್ಲಾ ಭಾಷೆಗಳಿಗಿಂತಾ ಪುರಾತನವಾದದ್ದು ಹಾಗೂ ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ಭಾಷೆ ನಮ್ಮ ಕನ್ನಡ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂದು ಶಿಕ್ಷಕರಿಗೆ ತೇಜಸ್ವಿನಿ ಅನಂತಕುಮಾರ್‌ ಕರೆ ನೀಡಿದರು.

ನಗರದ ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿಂದು ಇ ಜ್ಞಾನ ಟ್ರಸ್ಟ್‌ ವತಿಯಿಂದ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಕನ್ನಡ ಕಲಿಕೆ ಮಾಲಿಕೆಯ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಬಿಜೆಪಿ ಉಪಾಧ್ಯಕ್ಷರಾಗಿ ತೇಜಸ್ವಿನಿ ಅನಂತ್ ಕುಮಾರ್ ನೇಮಕ

ಬೆಂಗಳೂರಿಗರಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಪರಿಪಾಠ ಕಡಿಮೆಯಾಗುತ್ತಿದೆ. ಎಲ್ಲಾ ವಾಕ್ಯಗಳಲ್ಲೂ ಕೂಡಾ ಇಂಗ್ಲೀಷ್‌ ಪದಗಳನ್ನು ಬಳಸುತ್ತಿದ್ದಾರೆ. ನಮ್ಮ ಭಾಷೆ ಸಂಸ್ಕೃತದ ನಂತರ ಹೆಚ್ಚು ಪುರಾತನವಾದ ಭಾಷೆ. ಬೆಂಗಳೂರಿಗರಲ್ಲಿ ಇದನ್ನ ಶುದ್ಧವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡುವುದು ಒಂದು ಫ್ಯಾಷನ್‌ ಆಗಬೇಕಾಗಿದೆ ಎಂದು ಹೇಳಿದರು.

ಶ್ರೀನಿವಾಸಪುರದ ವೈ ಹೊಸಕೋಟೆ ಸರಕಾರಿ ಶಾಲೆ; ಅಧಿಕಾರಿಗಳ ಗಿಳಿಪಾಠದ ಉತ್ತರ

"ಎಷ್ಟೋ ಕ್ಲಿಷ್ಟಕರ ಶಭ್ದಗಳ ಕನ್ನಡ ಅರ್ಥ ತಿಳಿಯುವುದು ಬಹಳಷ್ಟು ವಿದ್ಯಾರ್ಥಿಗಳಿಗೆ ಕಷ್ಟದಾಯಕವಾಗುತ್ತಿತ್ತು. ಈ ಪುಸ್ತಕಗಳ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬೇಕು. ಬೆಂಗಳೂರು ನಗರದಲ್ಲಿ ಜನರ ಭಾಷೆಯಲ್ಲಿ ಇಂಗ್ಲೀಷ್‌ ಹಾಸುಹೊಕ್ಕಾಗಿರುವ ಸಂಧರ್ಬದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ" ಎಂದು ಹೇಳಿದರು.

 ಇ ಜ್ಞಾನ ಟ್ರಸ್ಟ್‌ ನ ಅಧ್ಯಕ್ಷರಾದ ಟಿ ಎಸ್‌ ಗೋಪಾಲ್

ಇ ಜ್ಞಾನ ಟ್ರಸ್ಟ್‌ ನ ಅಧ್ಯಕ್ಷರಾದ ಟಿ ಎಸ್‌ ಗೋಪಾಲ್

ನವ ಕರ್ನಾಟಕ ಕನ್ನಡ ಕಲಿಕೆ ಪುಸ್ತಕಗಳ ಲೇಖಕರು ಹಾಗೂ ಇ ಜ್ಞಾನ ಟ್ರಸ್ಟ್‌ ನ ಅಧ್ಯಕ್ಷರಾದ ಟಿ ಎಸ್‌ ಗೋಪಾಲ್ ಅವರು ಮಾತನಾಡಿ, ``ಬೆಂಗಳೂರು ನಗರದ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನದ ಕಾರ್ಯ ಶ್ಲಾಘನೀಯವಾಗಿದ್ದು, ಅದರ ಹಿಂದಿನ ಪ್ರೇರಕ ಶಕ್ತಿ ತೇಜಸ್ವಿನಿಯವರಾಗಿದ್ದಾರೆ. ಇವರು ಇತರರಿಗೆ ಮಾರ್ಗದರ್ಶಿಯಾಗಿದ್ದಾರೆʼ ಎಂದು ಬಣ್ಣಿಸಿದರು.

ಚಿಕ್ಕ ಮಕ್ಕಳಿಗೆ ಕನ್ನಡ ಕಲಿಯಲು ಅನುಕೂಲ

ಚಿಕ್ಕ ಮಕ್ಕಳಿಗೆ ಕನ್ನಡ ಕಲಿಯಲು ಅನುಕೂಲ

"ನಾನು ಬರೆದಿರುವ ಈ ಕನ್ನಡ ಕಲಿಕೆ ಸರಣಿಯ ಪುಸ್ತಕಗಳು ಚಿಕ್ಕ ಮಕ್ಕಳಿಗೆ ಕನ್ನಡ ಕಲಿಯಲು, ಅರ್ಥೈಸಿಕೊಳ್ಳಲು ನೆರವಾಗುತ್ತವೆ. ಅತ್ಯಂತ ಸರಳವಾದ ಭಾಷೆ ಮತ್ತು ಶಬ್ಧಗಳಿಂದ ಪುಸ್ತಕವನ್ನು ರಚಿಸಲಾಗಿದ್ದು, ಮಕ್ಕಳು ಸುಲಭವಾಗಿ ಕನ್ನಡ ಭಾಷೆ, ವ್ಯಾಕರಣವನ್ನು ಕಲಿಯಬಹುದಾಗಿದೆ" ಎಂದು ತಿಳಿಸಿದರು.

ಮಕ್ಕಳಿಗೆ ಪುಷ್ಪವೃಷ್ಟಿ, ಸಿಹಿ ಹಂಚಿ ಸ್ವಾಗತಿಸಿದ ಮೈಸೂರು ಮೇಯರ್

ಒಂದು ಸೆಟ್ ಬೆಲೆ 1000 ರೂಪಾಯಿಯಾಗಿದೆ

ಒಂದು ಸೆಟ್ ಬೆಲೆ 1000 ರೂಪಾಯಿಯಾಗಿದೆ

ಕೊಡುಗೆಯಾಗಿ ನೀಡಿದ ಪುಸ್ತಕಗಳ ತಲಾ ಒಂದು ಸೆಟ್ ಬೆಲೆ 1000 ರೂಪಾಯಿಯಾಗಿದೆ. ಕಾರ್ಯಕ್ರಮದಲ್ಲಿ ಡಾ. ಹೆಚ್‌ ಆರ್‌ ಅಪ್ಪಣ್ಣಯ್ಯ, ವೈ ಬಿ ರಾಮಕೃಷ್ಣ, ಎ ರಮೇಶ ಉಡುಪ, ಟಿ.ಜಿ ಶ್ರೀನಿಧಿ ಅವರು ಸೇರಿದಂತೆ ಹಲವರು ಭಾಗವಹಿಸಿದ್ದರು. ಇದೇ ವೇಳೆ 60 ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. ಈ ಶಿಕ್ಷಕರುಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

40 ಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕ ಬರೆದಿರುವ ಗೋಪಾಲ್

40 ಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕ ಬರೆದಿರುವ ಗೋಪಾಲ್

ಗೋಪಾಲ್ ಅವರು ಇದುವರೆಗೆ 40 ಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಕಲಿಕೆ ಪುಸ್ತಕಗಳು, ವ್ಯಾಕರಣ, ಭಾಷೆ, ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ. ಈ ಮೂಲಕ ಅವರು ನಾಡಿನ ಅತ್ಯುತ್ತಮ ಭಾಷಾ ತಜ್ಞರು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿಗಳಿಗೆ ವಿತರಿಸಲಾದ ಪುಸ್ತಕಗಳು

ವಿದ್ಯಾರ್ಥಿಗಳಿಗೆ ವಿತರಿಸಲಾದ ಪುಸ್ತಕಗಳು

ಕನ್ನಡ ಪದ ಸಂಪತ್ತು. ಹಳಗನ್ನಡವನ್ನು ಓದಿ, ತಿಳಿಯುವ ಬಗೆ ಹೇಗೆ?.,ಕನ್ನಡ ಛಂದಸ್ಸು.,ಭಾರತೀಯ ಕಾವ್ಯ ಮೀಮಾಂಸೆ., ಹಳಗನ್ನಡದ ಸುಭಾಷಿತಗಳು., ನಾಮಪದ., ಕನ್ನಡ ಒಗಟುಗಳು., ಹೊಸಗನ್ನಡ ಕವಿಸೂಕ್ತಿಗಳು. ಪ್ರಬಂಧ ಬರೆಯುವುದು ಹೇಗೆ?., ಪತ್ರ ಲೇಖನ., ಲೇಖನ ಚಿಹ್ನೆಗಳು., ಕ್ರಿಯಾಪದ., ತತ್ಸಮ-ತದ್ಬವ ಪದಕೋಶ., ಕನ್ನಡ ನುಡಿಗಟ್ಟುಗಳು., ಸಂಧಿ-ಸಮಾಸ., ವಿರುದ್ಧಾರ್ಥಕ ಪದಕೋಶ., ನಾನಾರ್ಥ ಪದಕೋಶ., ಕನ್ನಡ ವ್ಯಾಕರಣ ಪದಕೋಶ., ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು., ಕನ್ನಡ ಕವಿ ಪರಿಚಯ ಕೋಶ., ಗಾದೆಮಾತು ಅರ್ಥ-ವಿಸ್ತರಣೆ., ಸಮಾನಾರ್ಥ ಪದಕೋಶ.,

English summary
Kannada Speaking should become Fashion and Passion said Dr Tejaswini Ananthkumar during the Adamya Chetana trust and E Jnana trust organised event in which free books distributed to Government and aided schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X