ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ನಿಲ್ದಾಣದಲ್ಲೂ ಕನ್ನಡ: ಆನ್ ಲೈನ್ ಅಭಿಯಾನಕ್ಕೆ ನೀವೂ ಸಹಿ ಮಾಡಿ

|
Google Oneindia Kannada News

ಬೆಂಗಳೂರು, ಜುಲೈ 31: ಇಂಗ್ಲಿಷ್ ಅಥವಾ ಹಿಂದಿ ಭಾಷೆ ಗೊತ್ತಿಲ್ಲದ ಯಾರಾದರೂ ಭಾರತದ ಯಾವುದೇ ವಿಮಾನ ನಿಲ್ದಾಣಕ್ಕೆ ಹೋದರೂ ಒಮ್ಮೆ ದಿಕ್ಕೆ ತೋಚದಂತಾಗಬಹುದು. ಯಾಕಂದ್ರೆ
ಅಲ್ಲಿ ಹಿಂದಿ, ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯ ಸುಳಿವೂ ಇರುವುದಿಲ್ಲ. ಭಾರತ 22 ಅಧಿಕೃತ ಭಾಷಿಕ ಸಮುದಾಯವನ್ನು ಹೊಂದಿರುವ ದೇಶವಾಗಿದ್ದರೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪ್ರಾಬಲ್ಯದ ಮುಂದೆ ಬೇರೆಲ್ಲ ಭಾಷೆಗಳೂ ಸದ್ದಿಲ್ಲದೆ ಕೂತಿವೆ.

ಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭ

ಅದಕ್ಕೆಂದೇ ಆಯಾ ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಆ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಬಳಸಬೇಕೆಂಬ ಕುರಿತು ಹೋರಾಟ ಆರಂಭವಾಗುತ್ತಿದೆ. ಅದಕ್ಕೆಂದೇ change.org ಮೂಲಕ ಆನ್ ಲೈನ್ ಸಹಿ ಅಭಿಯಾನವನ್ನು ಕನ್ನಡ ಗ್ರಾಹಕ ವೇದಿಕೆ ಆರಂಭಿಸಿದ್ದು, 2000 ಕ್ಕೂ ಹೆಚ್ಚು ಜನ ಈಗಾಗಲೇ ತಮ್ಮ ಬೆಂಬಲ ಸೂಚಿಸಿದ್ದಾರೆ.

Kannada Language should be used in Bengaluru airport: An online campaign demands

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಆಗಮನ-ನಿರ್ಗಮದ ವಿವರಗಳು ಇತ್ತೀಚೆಗೆ ಕನ್ನಡದಲ್ಲೂ ಪ್ರಕಟಣೆಗೊಳ್ಳುತ್ತಿವೆಯಾದರೂ ಇದಿಷ್ಟೇ ಸಾಲದು. ಜರ್ಮನಿ ಮೂಲದ ಲುಫ್ತಾನ್ಸಾ ಏರ್ ಲೈನ್ಸ್ ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲ ಸೇವೆಯನ್ನೂ ನೀಡುತ್ತಿದೆ ಎಂಬುದು ಹಲವರಿಗೆ ಗೊತ್ತಿಲ್ಲದ ವಿಷಯವಾಗಿರಬಹುದು. ಹೃದಯಪೂರ್ವಕ 'ನಮಸ್ತೆ'ಯೊಂದಿಗೆ ಒಂದು ಪರ್ಫೆಕ್ಟ್ ಪ್ರಯಾಣ ಪ್ರಾರಂಭವಾಗುತ್ತೆ..." ಕನ್ನಡ ಸಾಲಿನೊಂದಿಗೇ ಕನ್ನಡಿಗರಿಗೆ ಲುಫ್ತಾನ್ಸಾ ಸ್ವಾಗತ ಕೋರುತ್ತದೆ. ಲುಫ್ತಾನ್ಸಾದ ಕ್ರಮ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಆದರ್ಶವಾಗಬಾರದೇಕೆ?

ಇನ್ಮುಂದೆ ಕನ್ನಡದಲ್ಲೇ ವಿಮಾನ ಹಾರಾಟ ಮಾಹಿತಿ ಲಭ್ಯ!ಇನ್ಮುಂದೆ ಕನ್ನಡದಲ್ಲೇ ವಿಮಾನ ಹಾರಾಟ ಮಾಹಿತಿ ಲಭ್ಯ!

2001 ರ ಜನಗಣತಿಯ ಪ್ರಕಾರ ಭಾರತದಲ್ಲಿ ಹಿಂದಿ ಮಾತೃಭಾಷೆಯಾಗಿರುವುದು ಕೇವಲ ಶೇ.25. ಜನರಿಗೆ ಮಾತ್ರ. ಉಳಿದಂತೆ ಗೂಗಲ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಶೇ.7 ರಷ್ಟು ಜನ ಮಾತ್ರ ಇಂಗ್ಲಿಷ್ ನಲ್ಲಿ ಸಂವಹನ ನಡೆಸಬಲ್ಲರು. ಅಂದರೆ ಭಾರತದ ಹೆಚ್ಚಿನ ಜನರು ಈ ಎರಡೂ ಭಾಷೆಗಳನ್ನೂ ಬಲ್ಲವರಲ್ಲ. ಹೀಗಿರುವಾಗ ಆಯಾ ರಾಜ್ಯದ ಜನರ ಹಿತದೃಷ್ಟಿಯಿಂದ ಮತ್ತು ಪ್ರಾದೇಶಿಕ ಭಾಷೆಯನ್ನು ಉಳಿಸುವ ದೃಷ್ಟಿಯಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಾದೇಶಿಕ ಭಾಷೆ ಬಳಸುವಂತಾಗಬೇಕು ಎಂಬ ಕಾಳಜಿ ಈ ಅಭಿಯಾನದಲ್ಲಿದೆ.

ಈ ಅಭಿಯಾನಕ್ಕೆ ನಿಮ್ಮ ಬೆಂಬಲವೂ ಇದ್ದರೆ, ನೀವೂ ಇಲ್ಲಿ ಸಹಿ ಮಾಡಬಹುದು.

English summary
An online campaign to demand using of state regional languages in airports in every state has started by Kannada Grahaka Vedike. It demands every service in Karnataka airports especially in Bengaluru Kempegowda international airport should be in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X