KIMA ಪ್ರಶಸ್ತಿ ವಿಜೇತರು: ರಾಜೇಶ್, ಅರ್ಜುನ್ ಜನ್ಯ, ಸುನಿ

ಬೆಂಗಳೂರು, ಆಗಸ್ಟ್ 03: ಸಂಗೀತ ಸಂಯೋಜಕರು, ಹಿನ್ನೆಲೆ ಗಾಯಕರು, ಸಾಹಿತಿಗಳು, ಬ್ಯಾಂಡ್ ಹಾಗೂ ಡಿಜೆ ಹೀಗೆ ವೈವಿಧ್ಯಮಯ ವಿಭಾಗಗಳ ಸಾಧಕರಿಗೆ ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್ (KiMA) ಸಂಸ್ಥೆಯ 2015ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಟಾರಿಯನ್ ಆಯೋಜನೆಯ ಸಮಾರಂಭದಲ್ಲಿ ನಾಲ್ವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ವಿಜಯ್ ರಾಘವೇಂದ್ರ, ಸಂಚಾರಿ ವಿಜಯ್, ನಿರ್ದೇಶಕ ಗುರುಪ್ರಸಾದ್, ಐಎಎಸ್ ಅಧಿಕಾರಿ ನಾಗಾಂಬಿಕ ದೇವಿ, ಐಪಿಎಸ್ ಅಧಿಕಾರಿ ಡಾ. ಸಲೀಂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸಂಗೀತಗಾರ ವಿ ಮನೋಹರ್, ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್, ಮ್ಯಾಂಡೋಲಿನ್ ವಾದಕ ಎನ್ ಎಸ್ ಪ್ರಸಾದ್, ಸೌಂಡ್ ಇಂಜಿನಿಯರ್ ಬಿಆರ್ ನವೀನ್ ಕುಮಾರ್, ಡಿಜೆ ಗೋಯಪು, ಸಾಟ್ಚಿ ನೆಟ್ವರ್ಕ್ ನ ಗೌತಮ್ ಶೆಣೈ ಅವರು ಜ್ಯೂರಿ ಸದಸ್ಯರಾಗಿದ್ದರು.

ಅಂತರ್ಜಾಲ ಹಾಗೂ ಎಸ್‍ಎಂಎಸ್ ಮೂಲಕ ಮತದಾನದಿಂದ ನೇರವಾಗಿ ಆಯ್ಕೆ ಮಾಡಲಾಯಿತು. ಮೂರನೇ KIMA ಪ್ರಶಸ್ತಿ ಸಮಾರಂಭದಲ್ಲಿ 4 ವಿಶೇಷ ಪ್ರಶಸ್ತಿ ಸೇರಿದಂತೆ ಸುಮಾರು 29 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ಸಿನಿಮಾ: ಪ್ರಶಸ್ತಿ ವಿಜೇತರು:
* ಸಂಗೀತ ಪರಿಕರಗಳ ಸಂಯೋಜನೆ: ಡೇನಿಯಲ್ ಜೆ ಕಿರಣ್, ಕ ಚಿತ್ರ
* ಶ್ರೇಷ್ಠ ಹಿನ್ನೆಲೆ ಸಂಗೀತ: ರವಿ ಬಸ್ರೂರು, ಉಗ್ರಂ
* ಶ್ರೇಷ್ಠ ಮಿಕ್ಸಿಂಗ್: ಸಜಯಕುಮಾರ್ ಎಂಪಿ, ಕಣ್ಣಲ್ಲಿ ನೀನು, ಪಾರು ವೈಫ್ ಆಫ್ ದೇವದಾಸ್.

ಕಿರುಚಿತ್ರ

* ಆರ್ ಎಸ್ ಗಣೇಶ್ ನಾರಾಯಣ್, ಸ್ಸಾರಿ.
ಕಿರುತೆರೆ
* ಸಂಗೀತ: ಪ್ರವೀಣ್ ಡಿ ರಾವ್, ಯಶೋದೆ.
* ಗಾಯನ: ವಾರಿಜಾ ಶ್ರೀ ವೇಣು ಗೋಪಾಲ್, ಕುಲವಧು

ರಿಕ್ಕಿ ಕೇಜ್ ಸೇರಿ ನಾಲ್ವರಿಗೆ ವಿಶೇಷ ಪ್ರಶಸ್ತಿ

ರಿಕ್ಕಿ ಕೇಜ್ ಸೇರಿ ನಾಲ್ವರಿಗೆ ವಿಶೇಷ ಪ್ರಶಸ್ತಿ

* ಜೀವಮಾನ ಸಾಧನೆ ಪ್ರಶಸ್ತಿ; ಶ್ಯಾಮಲಾ ಜಿ ಭಾವೆ
* ಶಹನಾಯಿ ಪಂಡಿತ್ ಎಸ್ ಬಲ್ಲೇಶ್
* ಸಂಗೀತಾಗರ ಟಿಎಎಸ್ ಮಣಿ ಹಾಗೂ ಗಾಯಕಿ ಆರ್ ಎ ರಮಾಮಣಿ,
* ರಿಕ್ಕಿ ಕೇಶ್ ವಿಶೇಷ ಪ್ರಶಸ್ತಿ

ಭಕ್ತಿ ಸಂಗೀತ ಸಂಯೋಜನೆ

ಭಕ್ತಿ ಸಂಗೀತ ಸಂಯೋಜನೆ

ವಿಜೇತರು: ಸ್ವಾಮಿ, ಸುರಲೋಕ, ಶ್ರೀಸ್ವರ್ಣಗೌರಿ (ಕೊನೆ ಚಿತ್ರ)
* ಪ್ರವೀಣ್ ಡಿ ರಾವ್, ನಮಿಸಿ ಬೇಡುವೆ, ಗುರು ಗುಣಗಾನ ಆಲ್ಬಂ
* ಸುನೀತಾ ಚಂದ್ರಕುಮಾರ್, ನವರಾತ್ರಿ ನವರೂಪಿಣಿ ಹಾಡು, ಜ್ಞಾನಮುದ್ರೆ ಆಲ್ಬಂ
* ಎಂ ಆರ್ ಕೃಷ್ಣ, ಸದಾ ಎನ್ನ ಹೃದಯದಲ್ಲಿ, ಹರಿದಾಸಾಮೃತಧಾರೆ

ಭಕ್ತಿ: ಆತ್ಯುತ್ತಮ ಗಾಯಕ/ಕಿ

ಭಕ್ತಿ: ಆತ್ಯುತ್ತಮ ಗಾಯಕ/ಕಿ

ವಿಜೇತರು: ರಾಜೇಶ್ ಕೃಷ್ಣನ್, ಸುರಲೋಕ, ಶ್ರೀಸ್ವರ್ಣಗೌರಿ (ಮೂರನೇ ಚಿತ್ರ)
* ವಾರಿಜಾಶ್ರೀ ವೇಣುಗೋಪಾಲ್, ನಾನ್ಯಾಕೆ ಚಿಂತಿಸಲಿ, ಗುರು ಗುಣಗಾನ
* ನಂದಿತಾ, ಕಂಡೆ ಕಂಡೆ, ದಾಸರ ವಾಣಿ
* ಸುವರ್ಣ ರಾಥೋಡ್, ಬಂದದ್ದೆಲ್ಲ ಬರಲಿ, ಗುರು ಗುಣಗಾನ
* ಅಜಯ ವಾರಿಯರ್, ಭೋಯತಿವರಧೇಂದ್ರ, ಗುರು ಗುಣಗಾನ

ಚಲನಚಿತ್ರ ಸಂಗೀತ : ಅತ್ಯುತ್ತಮ ಸಂಯೋಜಕ

ಚಲನಚಿತ್ರ ಸಂಗೀತ : ಅತ್ಯುತ್ತಮ ಸಂಯೋಜಕ

ವಿಜೇತರು: ಅರ್ಜುನ್ ಜನ್ಯಾ, ಜೀವಾ ಜೀವಾ, ಮಾಣಿಕ್ಯ (ಎರಡನೇ ಚಿತ್ರ)
* ಭರತ್ ಬಿಜೆ, ನಾನಾರೆಂಬುದು ನಾನಲ್ಲ, ಬಹುಪರಾಕ್
* ರವಿ ಬಸ್ರೂರ್, ಚನ್ನ ಚನ್ನ, ಉಗ್ರಂ
* ಆರ್ ಎಸ್ ಗಣೇಶ್ ನಾರಾಯಣ್, ಶುರುವಾಯಿತು, ಕ
* ಶ್ರೀಧರ್ ವಿ ಸಂಭ್ರಮ್, ದಿಲ್ಗೆ ದಿಲ್ಗೆ, ಜೈ ಲಲಿತಾ

ಸಿನಿಮಾ: ಗೀತ ಸಾಹಿತ್ಯ

ಸಿನಿಮಾ: ಗೀತ ಸಾಹಿತ್ಯ

ವಿಜೇತರು: ಸುನಿ, ಉಸಿರಾಗುವೆ, ಬಹುಪರಾಕ್
* ಶಿವನಂಜೇಗೌಡ, ಮರುಭೂಮಿ ಎದೆಯಲಿ, ಅಯೋಧ್ಯಪುರಂ
* ಎಸ್ ಸರ್ವೇಶ್, ಚಿತ್ತಾರ ಮೂಡೋ, ಉಗ್ರಂ
* ರೇಖಾ ಮೋಹನ್(ರೆಮೋ), ಅನೀರೀಕ್ಷಿತ ಲೈಫಲ್ಲಿ, ಫೇರ್ ಅಂಡ್ ಲವ್ಲೀ

ಸಿನಿಮಾ: ಜನಪ್ರಿಯ ಹಾಡು

ಸಿನಿಮಾ: ಜನಪ್ರಿಯ ಹಾಡು

ವಿಜೇತರು: ಭರತ್ ಬಿಜೆ, ಗೆದ್ದೆ ಗೆಲ್ತಾನಂತ, ಬಹುಪರಾಕ್
* ಆರ್ ಎಸ್ ಗಣೇಶ್ ನಾರಾಯಣ್, ಕೊಕನಕ್ಕಾ ಮಕಾಕ, ಕ
* ಅರ್ಜುನ್ ಜನ್ಯಾ, ಅಧ್ಯಕ್ಷ, ಅಧ್ಯಕ್ಷ
* ಶ್ರೀಧರ್ ವಿ ಸಂಭ್ರಮ್, ಧೂಮ್ ಧಮಾಕಾ, ಬೆಳ್ಳಿ

ಸಿನಿಮಾ: ಗಾಯಕಿ

ಸಿನಿಮಾ: ಗಾಯಕಿ

ವಿಜೇತರು: ಮೇಘನಾ ಜೋಶಿ, ಮೆತ್ತಗೆ ಮೆತ್ತಗೆ, ಪಂಗನಾಮ
* ಸಂಗೀತಾ ರವೀಂದ್ರನಾಥ್, ಪಕ್ಕ ಲೋಕಲ್ ನಾನು, ನಮಸ್ತೆ ಮೇಡಂ
* ಅರ್ಚನಾರವಿ, ಕೈ ಚಾಚು, ಡಾರ್ಲಿಂಗ್
* ಅನನ್ಯ ಭಟ್, ಶಿವನಂಜಪ್ಪಂಗು, ಚತುರ್ಭುಜ

ಸಿನಿಮಾ: ಗಾಯಕ

ಸಿನಿಮಾ: ಗಾಯಕ

ವಿಜೇತರು: ರಾಜೇಶ್ ಕೃಷ್ಣನ್, ಉಸಿರಾಗುವೆ, ಬಹುಪರಾಕ್
* ನವೀನ್ ಸಜ್ಜು, ಗೆದ್ದೆ ಗೆಲ್ತಾನಂತ ನಾನು ಮುಂಚೆ, ಬಹುಪರಾಕ್
* ಶಶಾಂಕ್ ಶೇಷಗಿರಿ, ಕನ್ನಡ ಸವಿಗನ್ನಡ, ಜೈ ಲಲಿತಾ
* ಅಜಯ್ ವಾರಿಯರ್, ಮಧುಮಾಸ, ಸಡಗರ
* ಅರ್ಜುನ್ ಜನ್ಯ, ಅರ್ಲಿ ಮಾರ್ನಿಂಗ್, ದಿಲ್ ರಂಗೀಲ

ಸುಗಮ ಸಂಗೀತ: ವಿಜೇತರು

ಸುಗಮ ಸಂಗೀತ: ವಿಜೇತರು

* ಗಾಯಕ: ಮೃತ್ಯುಂಜಯ್ ದೊಡ್ಡವಾಡ್, ಭಾವ ಗೀತೆಯಾಗುವ ಆಲ್ಬಂ
* ಗೀತೆ ರಚನೆ: ಪ್ರೊ ನಾರಾಯಣ ಘಟ್ಟ, ಒಲವು ಯಾವುದು, ಭಾವ ಸನ್ನಿಧಿ.
* ಗಾಯಕಿ: ಸುಪ್ರಿಯಾ ರಘುನಂದನ್, ಏಕೆ ಬಾರದಿರುವೆ, ಚಂದ್ರಸ್ಮಿತ

ರಂಗಭೂಮಿ & ನ್ಯೂ ಏಜ್ ಸಂಗೀತ

ರಂಗಭೂಮಿ & ನ್ಯೂ ಏಜ್ ಸಂಗೀತ

ರಂಗಭೂಮಿ
* ಶ್ರೇಷ್ಠ ಸಂಯೋಜನೆ: ಪ್ರವೀಣ್ ಪ್ರದೀಪ್, ಆರಂಭ, ಅಬಚೂರಿನ ಪೋಸ್ಟಾಫೀಸ್
* ಸಾಹಿತ್ಯ್ಯ: ಡಾ.ವೈದೇಹಿ, ಅಕ್ಕು ನಾಟಕದ ಕಿಟಕಿಯಾಚೆಯ ಕಾಲ.
* ಗಾಯನ: ವರ್ಷಾ ಬಿ ಸುರೇಶ್, ಅಕ್ಕು ನಾಟಕ.

ನ್ಯೂ ಏಜ್ ಸಂಗೀತ :
* ಅಲೋಕ್ ಬಾಬು (ಆಲ್ ಓಕೆ) ಯಂಗ್ ಎಂಗೋ
* ಬಿಜ್ಜಲ ನಟರಾಜ್, ದುಬಾಕ್ ಜೀವನ
* ಬ್ಯಾಂಡ್ ಮ್ಯೂಸಿಕ್: ಅಜಯ್ ಕುಮಾರ್, ಹಿಪ್ ಹಾಪ್
* ಮಿಕ್ಸಿಂಗ್: ಪ್ರಮತ್ ಕಿರಣ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+