ನಟ ದಿಗಂತ್ ಕುತ್ತಿಗೆ, ಬೆನ್ನಿಗೆ ಗಂಭೀರ ಗಾಯ: ಬೆಂಗಳೂರಿನ ಆಸ್ಪತ್ರೆಗೆ ದಾಖಲು

ಬೆಂಗಳೂರು, ಜೂನ್ 21: ನಟ ದಿಂಗತ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮ್ಮರ್ ಸಾಲ್ಟ್ ಫ್ಲಿಪ್ ಮಾಡುವ ಯತ್ನದಲ್ಲಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯವಾಗಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ವೈದ್ಯರು ದಿಗಂತ್ರನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಅವಶ್ಯಕತೆಯಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಗೋವಾಕ್ಕೆ ಕುಟುಂಬದ ಜೊತೆ ತೆರಳಿದ್ದ ದಿಂಗತ್ ಸಮ್ಮರ್ ಸಾಲ್ಟ್ ಫ್ಲಿಂಪ್ (ಬ್ಯಾಕ್ ಫ್ಲಿಂಪ್) ಮಾಡುವ ಯತ್ನದಲ್ಲಿ ಎಡವಿದ್ದಾರೆ. ಹಿಮ್ಮುಖವಾಗಿ ತಲೆಗೆಳಗೆ ಮಾಡಿ ಎಗರುವಾಗ ತಲೆಯ ಭಾಗ ನೆಲಕ್ಕೆ ಬಡಿದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯವಾಗಿದೆ. ದಿಗಂತ್‌ಗೆ ಗಾಯವಾಗುತ್ತಿದ್ದಂತೆ ಕುಂಟುಂಬಸ್ಥರು ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಗೋವಾದಲ್ಲಿ ದಿಗಂತ್ ಚಿಕಿತ್ಸೆಯನ್ನು ಪಡೆದ ಬಳಿಕ ಗಾಯದ ಗಂಭೀರತೆಯನ್ನು ಅರಿತು ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ ಕರೆ ಮಾಡಿ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ಗೆ ಮನವಿಯನ್ನು ಮಾಡಿದ್ದಾರೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಒಪ್ಪಿಗೆಯ ಬಳಿಕ ಗೋವಾದಿಂದ ನಟ ದಿಗಂತ್‌ನನ್ನು ಏರ್ ಲಿಫ್ಟ್ ಮಾಡಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Kannada film Actor Diganth hospitalized in Bengaluru

ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳುವುದೇನು..?

ಗೋವಾದಿಂದ ಏರ್ ಲಿಫ್ಟ್‌ನಲ್ಲಿ ಬಂದ ದಿಗಂತ್‌ನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಮಣಿಪಾಲ್ ಆಸ್ಪತ್ರೆೆಗೆ ದಾಖಲು ಮಾಡಲಾಯಿತು. ಮಣಿಪಾಲ್ ಆಸ್ಪತ್ರೆಯ ವೈದ್ಯರು ಈಗಾಗಲೇ ದಿಗಂತ್‌ರನ್ನು ಪರೀಕ್ಷಿಸಿದ್ದಾರೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಶಸ್ತ್ರ ಚಿಕಿತ್ಸೆಯನ್ನು ಮಾಡುವುದು ಅನಿವಾರ್ಯವಾಗಬಹುದು ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ದಿಗಂತ್ ಬ್ಯಾಕ್ ಫ್ಲಿಪ್ ಆಟ ತಂದ ಆಪತ್ತು

ದಿಗಂತ್ ತನ್ನ ಇನ್ಸ್ಟಾದಲ್ಲಿ ಹಲವಾರು ವಿಡಿಯೋಗಳನ್ನು ಹಾಕಿದ್ದರೆ. ಈ ವಿಡಿಯೋಗಳಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋಗಳನ್ನು ಹಾಕಿಕೊಂಡಿದ್ದಾರೆ. ದಿಗಂತ್ ಆಗಿಂದಾಗ್ಗೆ ಬ್ಯಾಕ್ ಪ್ಲಿಂಪ್ ಮಾಡುವ ಅಭ್ಯಾಸವಿತ್ತು ಎನ್ನುವುದು ಈ ಮೂಲಕ ತಿಳಿಯುತ್ತಿದೆ.

Kannada film Actor Diganth hospitalized in Bengaluru

ಐಂದ್ರಿತಾ ತಾಯಿ ಹೇಳಿಕೆ

"ನಟ ದಿಗಂತ್ ತನ್ನ ಕುಟುಂಬಸ್ಥರ ಜೊತೆೆ ಗೋವಾಕ್ಕೆ ತೆರಳಿದ್ದ ವೇಳೆ ಘಟನೆಯಾಗಿದೆ. ಈ ಘಟನೆ ಹೇಗಾಯಿತು ತಿಳಿದಿಲ್ಲ ಕುತ್ತಿಗೆ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ.' ಎಂದು ಐಂದ್ರಿತಾ ತಾಯಿ ಸ್ಪಷ್ಟಪಡಿಸಿದ್ದಾರೆ.

Recommended Video

      ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+