ದರ್ಶನ್ ಬಂಧನ: ನಟನಿಂದ ಅಂತರವನ್ನು ಕಾಯ್ದುಕೊಂಡ ತಾಯಿ
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಆರೋಪದಡಿ, ಮಂಗಳವಾರ ಮೈಸೂರಿನಲ್ಲಿ ಪೊಲೀಸರು ದರ್ಶನರನ್ನು ಬಂಧಿಸಿದ್ದಾರೆ. ರೇಣುಕಾಸ್ವಾಮಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡ್ ಗೆ ಅಶ್ಲಿಲ ಮೆಸೇಜ್ ಮಾಡಿ ಕಾಟ ನೀಡಿದ ಎಂದು ಆರೋಪವಿದೆ. ಈ ಮೆಸೇಜ್ ವಿಚಾರಕ್ಕೆ ರೇಣುಕಾಸ್ವಾಮಿ ಅವರನ್ನು ದರ್ಶನ ಸೂಚನೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಂಧಿತರು ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ ಕೊಲೆಯಲ್ಲಿ ದರ್ಶನ ಕೈವಾಡವಿರುವ ಆರೋಪವಿದ್ಧು, ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ.
ಬೆಂಗಳೂರಿನ ಮೇಜೆಸ್ಟ್ರೆಟ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, 13 ಜನರನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಸ್ಟಾರ್ ನಟ ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಸುದ್ದಿ ಕೇಳೆ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ದರ್ಶನ್ ಪರ ಹಾಗೂ ವಿರೋಧ ಚರ್ಚೆಗಳು ಸಾಮಾಜಿಕ ತಾಣದಲ್ಲಿ ಆರಂಭವಾಗಿವೆ. ಈ ಬೆನ್ನಲ್ಲೆ ಚಿತ್ರ ರಂಗದ ಕೆಲವರು ತುಟಿ ಬಿಚ್ಚಿದ್ದು ಬಿಟ್ಟರೆ, ಉಳಿದವರೆಲ್ಲಾ, ಮೌನಕ್ಕೆ ಶರಣಾಗಿದ್ದಾರೆ.

ದರ್ಶನ್ ತಾಯಿ ಹೇಳಿದ್ದೇನು?
ದರ್ಶನ್ ಪ್ರಕರಣ ದೊಡ್ಡದಾಗುತ್ತಿದ್ದಂತೆ ಪತ್ನಿ ವಿಜಯ್ ಲಕ್ಷ್ಮೀ, ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ರನ್ನು ಅನ್‌ಫಾಲೋ ಮಾಡಿದ್ದಾರೆ. ಇನ್ನು ದರ್ಶನ್ ತಾಯಿ ಹಾಗೂ ತಮ್ಮ ಈ ಸುದ್ದಿಯಿಂದ ದೂರವಿದ್ದು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ತಾಯಿ ಈ ಪ್ರಕರಣಕ್ಕೆ ಸಂಬಂಧಿಸಿದ ರಿಯಾಕ್ಷನ್ ನೀಡಲು ನಿರಾಕರಿಸಿದ್ದಾರೆ.
ದರ್ಶನ್ ತಾಯಿ ಮೀನಾ ತೂಗುದೀಪ್ ಮತ್ತು ಸಹೋದರ ದಿನಕತ್ ತೂಗದೀಪ್ ಜೊತೆಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿರುವ ಮನೆಗೆ ದರ್ಶನ ಇತ್ತೀಚಿನ ದಿನಗಳಲ್ಲಿ ಒಮ್ಮೆಯೂ ಬಂದಿಲ್ಲ ಎಂದು ಹೇಳಲಾಗಿದೆ. ದರ್ಶನ ಅವರ ಸುತ್ತ ಬೆಳೆದಿರುವ ವಿವಾದಗಳಿಂದ ಅವರ ಕುಟುಂಬ ಬೇಸತ್ತಿದೆ.
ಪ್ರಕರಣ ಏನು?
ರೇಣುಕಾಸ್ವಾಮಿ ಅವರು ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ್ ಅವರಿಗೆ ಕೆಟ್ಟದಾಗಿ ಮೆಸೇಜ್‌ಗಳನ್ನು ಮಾಡಿದ್ದರು. ಇದರಿಂದ ಬೇಸತ್ತು ದರ್ಶನ್ ತನ್ನ ಅಭಿಮಾನಿಗಳ ಮುಖಾಂತರದ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅವರನ್ನು ಹುಡಕಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಬರಲಾಗಿದ್ದು, ಅವರಿಗೆ ಬೆಂಗಳೂರಿನ ಹೊರ ವಲಯದಲ್ಲಿ ಚಿತ್ರ ಹಿಂಸೆ ನೀಡಲಾಗಿದೆ.
ರೇಣುಕಾಸ್ವಾಮಿ ಅವರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪವಿದೆ. ಇನ್ನು ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಶವವನ್ನು ದರ್ಶನ್ ಸಹಚರರು ಸೋಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಮೋರಿಯಲ್ಲಿ ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications