ದರ್ಶನ್‌ಗೆ ಹೆಚ್ಚಾದ ಸಂಕಷ್ಟ: ನಟನ ಕೊರಳಿಗೆ ಸುತ್ತಿಕೊಂಡ ಮತ್ತೊಂದು ಪ್ರಕರಣ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನರಿಗೆ ಸಂಕಷ್ಟಗಳು ಬಿಡುವಂತೆ ಕಾಣುತ್ತಿಲ್ಲ. ಈಗ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ದರ್ಶನ ಫ್ಯಾನ್ ರೇಣುಕಾಸ್ವಾಮಿ ಅವರ ದರ್ಶನ, ಪ್ರೇಯಸಿ ಪವಿತ್ರಾ ಗೌಡ್ ಅವರಿಗೆ ಕೆಟ್ಟ ಮೆಸೇಜ್ ಮಾಡಿದ್ದರಿಂದ, ಸಿಟ್ಟದಾ ದರ್ಶನ್ ರೇಣುಕಾಸ್ವಾಮಿ ರನ್ನು ಬೆಂಗಳೂರಿಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಈ ವೇಳೆ ರೇಣುಕಾಸ್ವಾಮಿ ಕೊಲೆ ಆಗಿದ್ದಾನೆ. ಈ ಪ್ರಕರಣ ಈಗ ರಾಜ್ಯವಾಪಿ ಸದ್ದು ಮಾಡುತ್ತಿರುವಾಗಲೇ, ದರ್ಶನ ಸುತ್ತ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ದರ್ಶನ್ ವಿರುದ್ಧ ಇದ್ದ ಹಳೇಯ ಪ್ರಕರಣವೊಂದು ಈಗ ಮರು ಜೀವ ಪಡೆದುಕೊಂಡಿದೆ. ಮೈಸೂರಿನ ಟಿ ನರಸೀಪುರದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ವಿಶಿಷ್ಟ ಬಾತುಕೋಳಿಯನ್ನು ಸಾಕಿದ್ದ ಹಿನ್ನಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಗತ್ಯವಿರುವ ಸೆಕ್ಷನ್‌ಗಳ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ತನಿಖಾಧಿಕಾರಿಗಳ ಎದುರು ಯಾರೂ ಹಾಜರಾಗಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅಂದಹಾಗೆ ಈ ಕೇಸ್‌ನಲ್ಲಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಇನ್ನೊಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದಿ 1972 ಪಟ್ಟಿ-1 ರ ಅಡಿಯಲ್ಲಿ ವಿಶೇಷ ಪ್ರಭೇದದ ಬಾತುಕೋಳಿಗಳನ್ನು ಸಾಕುವುದು ನಿಷೇಧ. ಈ ಪ್ರಕರಣ ಜಾಮೀನು ರಹಿತ ಅಪರಾಧವಾಗಿದೆ. ಇನ್ನು ಹುಲಿ ಉಗುರು ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಅಲ್ಲದೆ ಪೊಲೀಸರು ಮನೆಯನ್ನು ಪರಿಶೀಲಿಸಿದ್ದರು.












Click it and Unblock the Notifications