ಬಿರಿಯಾನಿ, ಸಿಗರೇಟ್‌ ಜೊತೆಗೆ ಇದಕ್ಕೂ ಬೇಡಿಕೆ ಇಟ್ಟಿದ್ದ ದರ್ಶನ್

ಕನ್ನಡ ಚಿತ್ರ ರಂಗದ ನಟ ದರ್ಶನ್ ಗೆ ಆರು ದಿನಗಳ ಪೊಲೀಸ್‌ ಕಸ್ಟಡಿ ನೀಡಿ ಮಂಗಳವಾರ ಬೆಂಗಳೂರು ಮ್ಯಾಜೆಸ್ಟ್ರೇಟ್‌ ಕೋರ್ಟ್‌ ಆದೇಶ ನೀಡಿದೆ. ದರ್ಶನ್ ಪೊಲೀಸ್‌ ಕಸ್ಟಡಿಯಲ್ಲಿ ಒಂದು ರಾತ್ರಿ ಹೇಗೆ ಕಳೆದರು ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇವೆಕ್ಕೆಲ್ಲಾ ಉತ್ತರ ಸಿಕ್ಕಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ. 24ನೇ ಎಸಿಎಂಎಂ ಕೋರ್ಟ್ ಜಡ್ಜ್ ವಿಶ್ವನಾಥ್ ಸಿ. ಗೌಡರ್ ಆದೇಶ ನೀಡಿದ್ದಾರೆ. ಈ ಬಳಿಕ ದರ್ಶನ್ ‌ ಹಾಗೂ ಉಳಿದ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ.

Kannada Actor Darshan Arrested In murder case Spends Night with Biryani Dolo and a Mat in Prison

ಯಾವುದಕ್ಕೆ ಬೇಡಿಕೆ ಇಟ್ಟಿದ್ದ ದರ್ಶನ್ ?

ನಟ ದರ್ಶನ್ ಮಧ್ಯಾಹ್ನದಿಂದ ಏನು ತಿಂದಿರಲಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ಅವರು ಊಟಕ್ಕೆ ಬಿರಿಯಾನಿ ಕೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಸಿಗರೇಟ್‌ಗೆ ಸಹ ನಟ ದರ್ಶನ್ ಬೇಡಿಕೆ ಇಟ್ಟಿದ್ದಾನೆಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಇಷ್ಟೇ ಅಲ್ಲದೆ ದರ್ಶನ್ ‌ ಇದೇ ವೇಳೆ ಇನ್ನೊಂದು ವಸ್ತುವಿಗೂ ಬೇಡಿಕೆ ಇಟ್ಟಿದ್ದಾನೆ.

ರಾತ್ರಿ ಬಿರಿಯಾನಿ ಹಾಗೂ ಸಿಗರೇಟ್‌ ಜೊತೆಗೆ ಡೊಲೊ 650 ಮಾತ್ರೆಯನ್ನು ಕೇಳಿದ್ದನೇಂದು ವರದಿಯಾಗಿದೆ. ದರ್ಶನ್ ರಾತ್ರಿ ಮ್ಯಾಟ್ ಮೇಲೆ ಮಲಗಿದ್ದರು ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?

ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ, ಮಂಗಳವಾರ ಮೈಸೂರಿನಲ್ಲಿ ನಟ ದರ್ಶನ್ ವನ್ನು ಪೊಲೀಸರು ಬಂಧಿಸಿದ್ದರು. ಬಂಧಿಸಿದ ಬಳಿಕ ದರ್ಶನ್ ‌ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದಕೊಂಡು ಬರಲಾಗಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಒಟ್ಟು 13 ಜನರನ್ನು ಬಂಧಿಸಿ, ವಿಚಾರಣೆ ಒಳ ಪಡಿಸಲಾಗಿದೆ.

Kannada Actor Darshan Arrested In murder case Spends Night with Biryani Dolo and a Mat in Prison

ವಿಚಾರಣೆಯ ವೇಳೆ ದರ್ಶನ್ ನಾನು ನನ್ನ ರೇಣುಕಾಸ್ವಾಮಿರನ್ನು ಹೆದರಿಸಲು ಅಷ್ಟೇ ಹೇಳಿದ್ದೇ. ಆದರೆ ಕೊಲೆಯನ್ನೇ ಮಾಡಲಾಗಿದೆ. ಇದರಲ್ಲಿ ನನ್ನ ಕೈವಾಡ ಇಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಅವರನ್ನು ಆರೋಗ್ಯ ತಪಾಸಣೆಗೆ ನಗರದ ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ ಬಳಿಕವೇ ಅವರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿದೆ.

ನ್ಯಾಯಾಲಯದಲ್ಲಿ ಆಗಿದ್ದೇನು?

ಕೋರ್ಟ್‌ಗೆ ಈ ಪ್ರಕರಣಕ್ಕೆ ಸಂಬಂಧಿಸಿದ 13 ಜನರನ್ನು ನ್ಯಾಯಾಧಿಶರ ಮುಂದೆ ಹಾಜರು ಪಡಿಸಲಾಯಿತು. ಇದೇ ವೇಳೆ ಜಡ್ಜ್‌ ಮುಂದೆ ನಟ ದರ್ಶನ್ ‌ ಹಾಗೂ ಪ್ರೇಯಸಿ ಪವಿತ್ರಾ ಗೌಡ್ ಕಣ್ಣಿರು ಇಟ್ಟಿದ್ದಾರೆ. ಅಲ್ಲದೆ ಜಡ್ಜ್‌ ಇವರಿಗೆಲ್ಲಾ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ವಕೀಲರನ್ನು ನೇಮಕ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು 13 ಜನರನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ. ವಿನಯ್‌ಗೆ ಸೇರಿದ ಶೆಡ್‌ಗೆ ಮಧ್ಯಾಹ್ನ ಬಿಗಿ ಪೊಲೀಸ್‌ ಭದ್ರತೆಯಲ್ಲಿ ದರ್ಶನ್‌ ಸಹಚರರನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನಟ ಸ್ಥಳದಲ್ಲಿ ಕೈ ಕಟ್ಟಿ ನಿಂತು ಕೊಂಡಿದ್ದಾರೆ.

ರೇಣುಕಸ್ವಾಮಿ ಕೊಲೆ ಕೇಸ್‌ ದಿನ ಕಳೆದಂತೆ ಹೆಚ್ಚು ಆಳಕ್ಕೆ ಹೋಗುತ್ತಿದೆ. ಈ ಪ್ರಕರಣದಲ್ಲಿ ಪ್ರಭಾವಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ದರ್ಶನ್‌ ಅವರನ್ನು ಪ್ರಕರಣದಿಂದ ಬಚಾವ್ ಮಾಡಲು ಏನೆಲ್ಲಾ ಪ್ಲ್ಯಾನ್ ಮಾಡಬೇಕೋ ಅದನ್ನೆಲ್ಲಾ ಮಾಡಿ ಆಗಿತ್ತು. ಆದರೆ ವಿಧಿಯ ಆಟವೇ ಬೇರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+