ಬಿಬಿಎಂಪಿ ಸಿವಿಲ್ ಕಾಮಗಾರಿಯಲ್ಲಿ ಅಕ್ರಮ: ನ್ಯಾ.ದಾಸ್ ಸಮಿತಿ ವರದಿ
ಬೆಂಗಳೂರು, ಅಕ್ಟೋಬರ್ 25: ಬಿಬಿಎಂಪಿ ಸಿವಿಲ್ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಯಿಂದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರಿಗೆ ವರದಿ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಪರಮೇಶ್ವರ ಅವರನ್ನು ಭೇಟಿ ಮಾಡಿದ ಸಮಿತಿ ಬಿಬಿಎಂಪಿ ಸಿವಿಲ್ ಕಾಮಗಾರಿಯಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮವಾಗಿರುವುದು ಸತ್ಯ, ಈ ಅಕ್ರಮದ ಕುರಿತು ಸಂಪೂರ್ಣವಾಗಿ ವರದಿಯಲ್ಲಿ ಹೇಳಲಾಗಿದೆ, ಕ್ರಿಮಿನಲ್ ಮತ್ತು ಸಿವಿಲ್ ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡಿದ್ದೇವೆ ಎಂದರು.

ಎರಡು ವರ್ಷ ಸಮಿತಿ ಕೆಲಸ ಮಾಡಿ ವರದಿ ನೀಡಿದೆ, ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು 2008 ಹಾಗೂ 2012ರ ಅವಧಿಯಲ್ಲಿ ಬಿಬಿಎಂಪಿ ಸಿವಿಲ್ ವರ್ಕ್ ನಲ್ಲಿ ನಡೆದ ಹಗರಣ ಕುರಿತು ವರದಿಯನ್ನು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಬಿಬಿಎಂಪಿಯಲ್ಲಿ ಸಿವಿಲ್ ಕಾಮಗಾರಿ ವೇಳೆ ನೂರಾರು ಕೋಟಿ ಅಕ್ರಮ ನಡೆದಿರುವುದು ಸತ್ಯ ಎಂದು ವರದಿ ತಿಳಿಸಿದೆ.












Click it and Unblock the Notifications