ಸಿಲಿಕಾನ್ ಸಿಟಿಯಲ್ಲಿ ಉಬರ್ ಕೊಟ್ಟ ಶಾಕ್ ಗೆ ನೆಟ್ಟಿಗರು ಶೇಕ್
ಬಹುಷಃ ಇದರ ಅನುಭವ ಉಬರ್ ಸರ್ವೀಸ್ ಅನ್ನು ಅವಲಂಬಿತರಾಗಿರುವವರಿಗೆ ಆಗಿದೆಯೋ ಏನೋ? ಯುವತಿಯೊಬ್ಬಳು ಉಬರ್ ರೇಟ್ ಕಾರ್ಡಿನ ಸ್ಕ್ರೀನ್ ಶಾಟ್ ಹಾಕಿ ಮಾಡಿರುವ ಟ್ವೀಟಿಗೆ ವ್ಯಾಪಕ ಪರವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೇವಲ ಆರೇ ಆರು ರೂಪಾಯಿಗೆ ಬೆಂಗಳೂರಿನಲ್ಲಿ ರೈಡ್ ತೋರಿಸಿದ ಉಬರ್ ಎನ್ನುವ ಶೀರ್ಷಿಕೆಯಡಿ ಯುವತಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ನೆಟ್ಟಿಗರ ಜೊತೆ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಯುವತಿ, ಆಟೋ ಕ್ಯಾಬ್ ಅವರು ಸುಲಿಗೆ ಮಾಡುತ್ತಾರೆ, ಒನ್ ಟು ಡಬಲ್ ರೇಟ್ ತಗೋತಾರೆ ಅನ್ನುವುದಕ್ಕೆ ವಿರುದ್ದವಾದ ಟ್ವೀಟ್ ಇದು ಎಂದಿದ್ದಾಳೆ.

46 ರೂಪಾಯಿ ತೋರಿಸಬೇಕಿದ್ದ ರೈಡ್ ಅಲ್ಲಿ 40 ರೂಪಾಯಿ ಸ್ಕ್ರಾಚ್ ಮಾಡಿ 6 ರೂಪಾಯಿ ರೇಟ್ ಕಾರ್ಡ್ ನಲ್ಲಿ ತೋರಿಸಿತ್ತು. ಇದನ್ನು ಯುವತಿ ಟ್ವೀಟ್ ಮಾಡಿದ್ದರು. ಇದರಲ್ಲಿ ಏನೋ ತಪ್ಪು ಉಂಟಾಗಿದೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದರೆ, ಇದು ಅನಿರೀಕ್ಷಿತ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡು, ನನಗೆ ನಿನ್ನೆಯಷ್ಟೇ ಶೇ 35 ರಿಯಾಯತಿ ಇಂದಾಗಿ ರೂ. 0 ಎಂದು ತೋರಿಸಿತ್ತು. ಆದರೆ, ಯಾವ ಡ್ರೈವರ್ ಕೂಡ ರೈಡ್ ಸ್ವೀಕರಿಸಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ತರಹ ರೈಡ್ ತೋರಿಸುತ್ತೆ ಆದರೆ, ರೈಡ್ ಬುಕ್ ಮಾಡಿದಾಗ ಯಾವ ಆಟೋ ಡ್ರೈವರ್ ಕೂಡ ಇದನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಮಹಿಮಾ ಚಂದಕ್ ಎನ್ನುವವರು ಇದೊಂದು ಬಗ್ (ದೋಷ) ಇರಬಹುದು ಎಂದಿದ್ದಾರೆ.
ಪ್ರಮೋ ಅಪ್ಲೈ ಮಾಡಿದರೆ ಡಿಸ್ಕೌಂಟ್ ಎನ್ನುವ ಆಫರ್ ಅನ್ನು ಉಬರ್ ನೀಡುತ್ತಿದೆ. ಆದರೆ, ಈ ಆಫರ್ ಬಂದಾಗಿನಿಂದ ಒಂದು ದಿನವೂ ನನಗೆ ರೈಡ್ ಸಿಗಲಿಲ್ಲ ಎಂದು ಬರ್ಟಿ ಥಾಮಸ್ ಎನ್ನುವವರು ಲೇವಡಿ ಮಾಡಿದ್ದಾರೆ.
ಒಂದು ವೇಳೆ ನಲವತ್ತು ರೂಪಾಯಿಗಿಂತ ಕಮ್ಮಿ ರೈಡ್ ಇದ್ದರೆ ಏನಾಗಬಹುದು ಎಂದು ಶ್ರೇಯ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇದನ್ನು ನಿನ್ನೆಯೇ ಗಮನಿಸಿದೆ, ರೈಡ್ ದರ ಝೀರೋ ಆಗಿತ್ತು, ಆದರೆ ಯಾವ ಡ್ರೈವರ್ ಕೂಡಾ ರೈಡ್ ಅನ್ನು ಸ್ವೀಕರಿಸಲಿಲ್ಲ ಎಂದು ವಿನೀತ್ ಎನ್ನುವವರು ಬರೆದುಕೊಂಡಿದ್ದಾರೆ. ಈ ಹಿಂದೆಯೂ ಕೂಪನ್ ಉಪಯೋಗಿಸಿ ಡಿಸ್ಕೌಂಟ್ ಪಡೆದುಕೊಂಡಿದ್ದೆ ಎಂದು ಅನಿರುದ್ದ್ ಎನ್ನುವವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications