ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ಪುಟ್ಬಾಲ್ ಆಟಗಾರ !

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಸ್ಯಾಂಡಲ್ ವುಡ್ ಸಿನಿ ರಂಗವನ್ನೇ ಬೆಚ್ಚಿ ಬೀಳಿಸಿದ್ದ ಡ್ರಗ್ ಜಾಲ ರಾಜಧಾನಿಯಲ್ಲಿ ಇನ್ನೂ ಸಕ್ರಿಯವಾಗಿದೆ. ಐಶರಾಮಿ ಹೋಟೆಲ್ ಗಳಲ್ಲಿ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದ ವಿದೇಶಿ ಪುಟ್ಬಾಲ್ ಆಟಗಾರ ಸೇರಿದಂತೆ ನಾಲ್ವರು ಡ್ರಗ್ ಪೆಡ್ಲರ್ಸ್ ಜೆ.ಪಿ.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದರಲ್ಲಿ ಬಿಡಿಎ ಬ್ರೋಕರ್ ರವಿ ಅಲಿಯಾಸ್ ಬಿಡಿಎ ರವಿ ಕೂಡ ಸಿಕ್ಕಿಬಿದ್ದಿದ್ದಾನೆ.

ಐವರಿ ಕೋಸ್ಟಾ ದೇಶದ ಪುಟ್ಬಾಲ್ ಆಟಗಾರ ಡೊಸ್ಸೋ ಖಲಿಫಾ, ಬಿಡಿಎ ರವಿ, ಮಹಮದ್ ಮುಜಮಿಲ್, ಸಯ್ಯದ್ ಶೋಯಬುದ್ದೀನ್ ಬಂಧಿತ ಪೆಡ್ಲರ್ಸ್. ಇವರು ನೀಡಿದ ಮಾಹಿತಿ ಮೇರೆಗೆ ಡ್ರಗ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಶ್ರೀಮಂತ ಮನೆತನದ ಮಾದಕ ವ್ಯಸನಿಗಳ ಜಾಡು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಹೈಟೆಕ್ ಪಾರ್ಟಿ

ಹೈಟೆಕ್ ಪಾರ್ಟಿ

ಜೆ.ಪಿ.ನಗರ, ಕುಮಾರಸ್ವಾಮಿ ಬಡಾವಣೆಯಲ್ಲಿ ಈ ಪೆಡ್ಲರ್ಸ್ ಐಶರಾಮಿ ಹೋಟೆಲ್ಸ್ ಬುಕ್ ಮಾಡ್ತಿದ್ದರು. ಆನಂತರ ಶ್ರೀಮಂತರು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಆಹ್ವಾನಿಸಿ ನಶೆಯ ಮತ್ತಿನಲ್ಲಿ ತೆಲಾಡುತ್ತಿದ್ದರು. ಗ್ರಾಹಕರಿಗೆ ಪ್ರತ್ಯೇಕ ಕೊಠಡಿ ನೀಡಿ, ಅಲ್ಲಿ ಮಾದಕ ವಸ್ತು ಪೂರೈಸುತ್ತಿದ್ದರು. ಪ್ರತಿ ಶುಕ್ರವಾರ ಹೋಟೆಲ್ ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದರು. ಜೆಪಿನಗರದ ಹರಿಕ್ ಬೋಟಿಕ್ ಹೋಟೆಲ್ ನಲ್ಲಿ ಪಾರ್ಟಿ ಆಯೋಜನೆ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಜೆಪಿನಗರ ಪೊಲೀಸರು ಏಕ ಕಾಲಕ್ಕೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪುಟ್ಬಾಲ್ ಆಟಗಾರನ ಮಾದಕ ಜಾಲ

ಪುಟ್ಬಾಲ್ ಆಟಗಾರನ ಮಾದಕ ಜಾಲ

ಐವರಿ ಕೋಸ್ಟಾ ದೇಶದ ಡೊಸ್ಸೋ ಖಲಿಫಾ 2015 ರಲ್ಲಿ ಕ್ರೀಡಾ ವೀಸಾದ ಮೇಲೆ ಭಾರತಕ್ಕೆ ಬಂಧಿದ್ದ. ದೆಹಲಿ ಮತ್ತು ಕೋಲ್ಕತಾದಲ್ಲಿ ವಾಸವಾಗಿದ್ದ ಈತ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ಬಿಡಿಎ ರವಿ ಹಾಗೂ ಶೋಹೆಬುದ್ದೀನ್ ಸಂಪರ್ಕ ಸಿಕ್ಕಿದ ನಂತರ ಇಲ್ಲಿ ಡ್ರಗ್ ಜಾಲದಲ್ಲಿ ಸಕ್ರಿಯನಾಗಿದ್ದ. ವಿಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸ ಮಾಡಿ ಅಕ್ರಮ ಜಾಲದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಸೀನೋ ಲಿಂಕ್

ಕ್ಯಾಸೀನೋ ಲಿಂಕ್

ರಿಯಲ್ ಎಸ್ಟೇಟ್ ಹಾಗೂ ಬಿಡಿಎ ಬ್ರೋಕರ್ ಆಗಿದ್ದ ಬಿಡಿಎ ರವಿ ಕೂಡ ಈ ಡ್ರಗ್ ಜಾಲದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಮಹಮದ್ ಮುಜಾಮಿಲ್ ಡ್ರಗ್ ರಾಕೆಟ್ ನ ಸೂತ್ರದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಶ್ರೀಲಂಕಾದ ಕ್ಯಾಸೀನೋ ಲಿಂಕ್ ಹೊಂದಿದ್ದ ಮುಜಾಮಿಲ್, ಕೋವಿಡ್ ಬಳಿಕ ಬೆಂಗಳೂರಿಗೆ ಬಂದಿದ್ದ. ಕ್ಯಾಸೀನೋ ಡ್ರಗ್ ಲಿಂಕ್ ನಿಂದ ಡ್ರಗ್ ತರಿಸಿ ಬೆಂಗಳೂರಿನಲ್ಲಿ ಶ್ರೀಮಂತ ಉದ್ಯಮಿಗಳಿಗೆ ಪಾರ್ಟಿ ಆಯೋಜಿಸುತ್ತಿದ್ದ. ಇದಕ್ಕಾಗಿ ಬಿಡಿಎ ರವಿ ಸಂಪರ್ಕ ಪಡೆದಿದ್ದ.

Recommended Video

ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada
ಬಿಡಿಎ ರವಿ ಡ್ರಗ್ ಜಾಲದಲ್ಲಿ ಸೆರೆ

ಬಿಡಿಎ ರವಿ ಡ್ರಗ್ ಜಾಲದಲ್ಲಿ ಸೆರೆ

ಬಿಡಿಎ ರವಿ ಎಂದೇ ಖ್ಯಾತಿ ಪಡೆದಿರುವ ಬಿಡಿಎ ಬ್ರೋಕರ್ , ರಿಯಲ್ ಎಸ್ಟೇಟ್ ಉದ್ಯಮಿ ರವಿಕುಮಾರ್ ಕೂಡ ಈ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಪ್ರಭಾವಿಗಳ ಸಂಪರ್ಕ ಗಳಿಸಿದ್ದ. ಅಲ್ಲದೇ ಬಿಡಿಎ ಕೆಲಸ ಮಾಡುವ ಮೂಲಕ ಬ್ರೋಕರ್ ಆಗಿ ಹಣ ಸಂಪಾದನೆ ಮಾಡಿದ್ದ. ಪ್ರಭಾವಿಗಳ ಜತೆ ಸೇರಿ ವಿಲಾಸಿ ಜೀವನ ನಡೆಸುತ್ತಿದ್ದ ಈತ ಕೊಲೊಂಬೋದಲ್ಲಿರುವ ಕ್ಯಾಸೀನೋಗೆ ಹೋಗುತ್ತಿದ್ದ. ಅಲ್ಲಿ ಮುಜಾಮಿಲ್ ಪರಿಚಯವಾಗಿದ್ದ. ನಂತರ ಯೋಜನೆ ರೂಪಿಸಿ ಬೆಂಗಳೂರಿನಲ್ಲಿ ಡ್ರಗ್ ಜಾಲ ವಿಸ್ತರಿಸಿದ್ದರು.

ಐವರಿ ಕೋಸ್ಟಾ ಪುಟ್ಬಾಲ್ ಆಟಗಾರನನ್ನು ಬಳಿಸಿ ವಿದೇಶದಿಂದ ನಾನಾ ರೀತಿಯ ಮಾದಕ ವಸ್ತು ತರಿಸುತ್ತಿದ್ದರು. ಶ್ರೀಮಂತರಿಗೆ ಕೊಟ್ಟು ದುಬಾರಿ ಹಣ ಪಡೆದು ಐಶರಾಮಿ ಜೀವನ ಸಾಗಿಸುತ್ತಿದ್ದರು. ಇದೀಗ ಪೊಲೀಸರಿಗೆ ಬಲೆಗೆ ಬಿದ್ದಿದ್ದು, ಈ ಜಾಲದಲ್ಲಿ ತೊಡಗಿರುವ ಮತ್ತಷ್ಟು ಅರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

English summary
Bengaluru: JP nagara police arrests 4 drug Peddlers including BDA Broker Ravi and football player Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X