ಟ್ವೀಟ್ː ಗೌರಿ ಹತ್ಯೆ, ಇಂದಲ್ಲ ನಾಳೆ ಸತ್ಯ ಹೊರಬರಲಿದೆ
Recommended Video

ಬೆಂಗಳೂರು, ಸೆ. 05: ಲಂಕೇಶ್ ಪತ್ರಿಕೆ ಸಂಪಾದಕಿ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶಗಳು ಹರಿದು ಬಂದಿವೆ. ಟ್ವಿಟ್ಟರ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ಅತ್ಯಂತ ಆಘಾತಕಾರಿ ಹತ್ಯೆಗೆ ಬೆಂಗಳೂರು ಸಾಕ್ಷಿಯಾಗಿದೆ.
ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಗೌರಿ ಅವರು ಸಮಾಜ ಸುಧಾರಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಶ್ರಮಿಸಿದ್ದರು. ಸಮಾಜಮುಖಿ ಗೌರಿ ಅವರ ಹತ್ಯೆಯನ್ನು ಎಲ್ಲರೂ ಖಂಡಿಸಿದ್ದಾರೆ.
ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇದೆಲ್ಲವೂ ಹಿಂದೂ ಪರ, ಬಲಪಂಥೀಯ ಕಾರ್ಯಕರ್ತರದ್ದೇ ಕೃತ್ಯ ಎಂದು ಅನೇಕರು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ವಿಶೇಷ ತಂಡದಿಂದ ತನಿಖೆ
ಸಮಾಜ ಮುಖಿಯಾಗಿ ಅವರು ಯಾವಾಗಲೂ ಕೆಲ್ಸ ಮಾಡುತ್ತಿದ್ದರು. ಮೂಲ ಭೂತ, ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದರು. ಪೊಲೀಸರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ. 3 ವಿಶೇಷ ತಂಡ ರಚನೆ ಮಾಡಿ, ದುಷ್ಕರ್ಮಿಗಳನ್ನು ಬಂಧಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
|
ಕಾಂಗ್ರೆಸ್ ಸರ್ಕಾರವನ್ನು ದೂಷಿಸಬೇಡಿ
ಕಾಂಗ್ರೆಸ್ ಸರ್ಕಾರವನ್ನು ದೂಷಿಸಬೇಡಿ, ಗೌರಿ ಅವರ ಸಮಾಜ ಮುಖಿ ಕಾರ್ಯಗಳಿಗೆ ಸರ್ಕಾರ ಸ್ಪಂದಿಸುತ್ತಾ ಬಂದಿತ್ತು. ಹಿಂದೂ ಬ್ರಿಗೇಡ್, ಹಿಂದೂತ್ವವಾದಿಗಳ ಕೃತ್ಯವಿದು.
|
ಇದೆಲ್ಲವೂ ಅವರದ್ದೇ ಕೃತ್ಯ
ಯು. ಆರ್ ಅನಂತಮೂರ್ತಿ ಅವರ ಸಾವನ್ನು ಕಂಡು ಸಂಭ್ರಮಿಸಿದ್ದರು. ಕಲಬುರ್ಗಿ ಅವರನ್ನು ಬಲಿ ಪಡೆದರು. ಈಗ ಗೌರಿ ಅವರನ್ನು ಹತ್ಯೆ ಮಾಡಿದ್ದಾರೆ. ಇದೆಲ್ಲವೂ ಅವರದ್ದೇ ಕೃತ್ಯ.
|
ಸಿಬಿಐ ತನಿಖೆಗೆ ಆಗ್ರಹ
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಮೋದಿ ಅವರು ಸಿಬಿಐ ತನಿಖೆಗೆ ವಹಿಸಬೇಕು.
|
ಸತ್ಯ ಇಂದಲ್ಲ ನಾಳೆ ತಿಳಿಯಬೇಕು
ಗೌರಿ ಲಂಕೇಶ್ ಅವರ ಸಾವಿನ ಸತ್ಯ ಇಂದಲ್ಲ ನಾಳೆ ತಿಳಿಯಲೇ ಬೇಕಿದೆ. ಅವರ ಕುಟುಂಬಕ್ಕೆ ಸಾವಿನ ದುಃಖ ಭರಿಸುವ ಶಕ್ತಿ ಸಿಗಲಿ.-ರಾಹುಲ್ ಗಾಂಧಿ, ಎಐಸಿಸಿ ಉಪಾಧ್ಯಕ್ಷ












Click it and Unblock the Notifications