ಹೊಸ ಬ್ರಿಕ್ ಪ್ಯಾಕ್ ನಲ್ಲಿ ಒರಿಜಿನಲ್ ಚಾಯ್ಸ್ ವಿಸ್ಕಿ

ಬೆಂಗಳೂರು, ಜು.12: ಆಲ್ಕೊ-ಮದ್ಯ ತಯಾರಿಕೆಯ ವಲಯದಲ್ಲಿ ಅಗ್ರಮಾನ್ಯವಾಗಿರುವ ಜಾನ್ ಡಿಸ್ಟಿಲರಿಯು, ಗ್ರಾಹಕರ ಅಭಿರುಚಿ - ಅಭಿಲಾಷೆ ಆಧರಿಸಿ ವಿಶೇಷವಾಗಿ ಕರ್ನಾಟಕದಲ್ಲಿ 90 ಎಂಎಲ್ ಪ್ರಮಾಣದ ಒರಿಜಿನಲ್ ಚಾಯ್ಸ್ ವಿಸ್ಕಿಯನ್ನು ಅಸೆಪ್ಟಿಕ್ ಬ್ರಿಕ್ ಪ್ಯಾಕ್ (ಟೆಟ್ರಾ ಪ್ಯಾಕ್) ನಲ್ಲಿ ಬಿಡುಗಡೆಗೊಳಿಸಿದೆ.

ತೊಂಬತ್ತು ಎಂಎಲ್ ಅಸೆಪ್ಟಿಕ್ ಬ್ರಿಕ್ ಪ್ಯಾಕ್ ವಿಶಿಷ್ಟ ಸ್ವಾದದ ಈ ಒರಿಜಿನಲ್ ಚಾಯ್ಸ್ ವಿಸ್ಕಿ ಅಲ್ಪ ಸಮಯದಲ್ಲೇ ಗ್ರಾಹಕರ ಮನ ಸೆಳೆದಿದ್ದು, ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಜನರಂತೂ ಈ 90 ಎಂಎಲ್ ಒರಿಜಿನಲ್ ಚಾಯ್ಸ್ ಪ್ಯಾಕ್ ತುಂಬಾ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಪ್ಯಾಕ್ ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

Original Choice Whisky in 90ml Brick Pack
ತೊಂಬತ್ತು ಎಂಎಲ್ ಅಸೆಪ್ಟಿಕ್ ಬ್ರಿಕ್ ಪ್ಯಾಕ್ ಬಿಡುಗಡೆಯ ಬಗ್ಗೆ ಮಾತನಾಡಿದ ಜಾನ್ ಡಿಸ್ಟಿಲರಿಯ ಚೇರ್ ಮೆನ್ ಪೌಲ್ ಪಿ ಜಾನ್, "ಉಳಿತಾಯ ಮನೋಭಾವದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಒರಿಜಿನಲ್ ಚಾಯ್ಸ್ 90 ಎಂಎಲ್ ವಿಸ್ಕಿಯ ಬ್ರಿಕ್ ಪ್ಯಾಕ್ ಬಿಡುಗಡೆಗೊಳಿಸಲಾಗಿದೆ.

ಈ ಬ್ರಿಕ್ ಪ್ಯಾಕ್ ಆವಿಷ್ಕಾರ ಆಲ್ಕೋಹಾಲ್ ವಲಯದಲ್ಲಿ ತನ್ನದೇ ಛಾಪು ಮೂಡಿಸಿದೆ. ಗಾಜಿನ ಮದ್ಯದ ಬಾಟಲ್ ಗೆ ಹೋಲಿಸಿದರೆ ಈ ಪ್ಯಾಕೆಟ್ ನಲ್ಲಿ ಹಲವಾರು ಉಪಯೋಗಗಳಿವೆ. ಈ ಪ್ಯಾಕ್ ಕೂಡಾ ಗಾಜಿನ ಬಾಟಲ್‍ನಂತೆ ವಿಸ್ಕಿಯ ರುಚಿ ಮತ್ತು ಬಣ್ಣವನ್ನು ಪ್ಯಾಕ್ ಮಾಡಿದ ಸಮಯದಿಂದ ಗ್ರಾಹಕರು ಉಪಯೋಗಿಸುವವರೆಗೆ ಉತ್ತಮವಾಗಿ ಕಾಪಾಡುತ್ತದೆ ಎಂದರು.

ದೀರ್ಘ ಬಾಳಿಕೆ ದೃಷ್ಟಿಯಿಂದಲೂ ಮತ್ತು ಸುಲಭ ವಹಿವಾಟಿಗೂ ಈ ಅಸೆಪ್ಟಿಕ್ ಬ್ರಿಕ್ ಪ್ಯಾಕ್ ಗಳು ಉಪಯುಕ್ತವಾಗಿವೆ. ಸಾಂಪ್ರದಾಯಿಕವಾದ ಸೀಸೆಗಳಲ್ಲಿ ಬಿರುಕು ಬಿಡುವುದು ಇಲ್ಲವೇ ಸಾಗಾಣಿಕೆ ಸಂದರ್ಭದಲ್ಲಿ ಒಡೆದು ಹೋಗುವುದು ಸಾಮಾನ್ಯವಾಗಿತ್ತು. ಇಂತಹ ಸಮಸ್ಯೆಗಳು ಈಗಿಲ್ಲ. ಪ್ರತಿ ಬ್ರಿಕ್ ಪ್ಯಾಕ್ ಸಹ ತೆಗೆದುಕೊಂಡು ಹೋಗಲು ಸುಲಭ ಮತ್ತು ಯಾವುದೇ ತೊಂದರೆ ಇಲ್ಲದಂತೆ ಸ್ಟೋರ್ ಗಳಲ್ಲಿ ಸಂಗ್ರಹಿಸಿಡಬಹುದು.

ಈ ಎಲ್ಲ ಲಾಭದಾಯಕ ಅಂಶಗಳ ಬಗ್ಗೆ ಗ್ರಾಹಕರು ನೀಡಿದ ಸಲಹೆ - ಬೇಡಿಕೆ ಆಧರಿಸಿ 90 ಎಂಎಲ್ ಪ್ರಮಾಣದ ಒರಿಜಿನಲ್ ಚಾಯ್ಸ್ ವಿಸ್ಕಿಯನ್ನು ಅಸೆಷ್ಟಿಕ್ ಬ್ರಿಕ್ ಪ್ಯಾಕ್ ನಲ್ಲಿ ಒದಗಿಸಲಾಗಿತ್ತಿದೆ. ಒರಿಜಿನಲ್ ಚಾಯ್ಸ್ ವಿಸ್ಕಿಯ ಪ್ರಮುಖ ಗುರಿಯು ಗ್ರಾಹಕರ ಬಜೆಟ್ ಆಧರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಸುಮಾರು 10 ದಶಲಕ್ಷ ವಿಧಗಳ ಪೈಕಿ ಒರಿಜಿನಲ್ ಚಾಯ್ಸ್ ವಿಸ್ಕಿಯು ಇಂದು ತನ್ನ ಸ್ಫೂರ್ತಿದಾಯಕ ಗುಣದಿಂದ 7ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+