ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವುದೇ ಕಾರಣಕ್ಕೂ ಪರೀಕ್ಷೆಗೆ ಗೈರು ಹಾಜರಾಗಬೇಡಿ; ನಜ್ಮಾ ನಜೀರ್

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು​​ ವಿವಾದ ಹೊತ್ತಿ ಉರಿಯುತ್ತಿರುವ ಸಮಯದಲ್ಲೇ ರಾಜಕೀಯ ನಾಯಕರ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿವೆ. ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ಅರ್ಜಿ ವಿಚಾರಣೆ ನಡೆಯುತ್ತಿದೆ.

ಇಂದು ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಸೋಮವಾರ ಬೆಳಿಗ್ಗೆ ಶಾಲೆಯ ಆವರಣಕ್ಕೆ ಪ್ರವೇಶಿಸುವ ಮೊದಲು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಹಿಜಾಬ್ ತೆಗೆದು ಹಾಕಿ ಶಾಲೆ ಪ್ರವೇಶಿಸಿದರೆ, ಇನ್ನು ಕೆಲವು ಹಿಜಾಬ್ ತೆಗೆಯಲು ನಿರಾಕರಿಸಿದವರನ್ನು ಶಾಲೆಯಿಂದ ವಾಪಸ್ ಕಳುಹಿಸಲಾಗಿದೆ.

ಹಿಜಾಬ್ ವಿವಾದ: ನಾನೇಕೆ ಕ್ಷಮೆ ಕೇಳಬೇಕು?; ಡಿಕೆಶಿಗೆ ಜಮೀರ್​ ಅಹ್ಮದ್ ಡಿಚ್ಚಿಹಿಜಾಬ್ ವಿವಾದ: ನಾನೇಕೆ ಕ್ಷಮೆ ಕೇಳಬೇಕು?; ಡಿಕೆಶಿಗೆ ಜಮೀರ್​ ಅಹ್ಮದ್ ಡಿಚ್ಚಿ

ಈ ಕುರಿತು ಟ್ವೀಟ್ ಮಾಡಿರುವ ಮುಸ್ಲಿಂ ಸಮುದಾಯದ ನಾಯಕಿ ಹಾಗೂ ಜೆಡಿಎಸ್ ಮುಖಂಡೆ ನಜ್ಮಾ ನಜೀರ್, ಪ್ರೀತಿಯ ಮಕ್ಕಳೇ, ನೆನಪಿರಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸಹ ಶಾಲೆಯಿಂದ ಅಂದು ಹೊರಹಾಕಿದ್ದರು. ಅದರ ಪ್ರತಿಕಾರವಾಗಿ ಸಂವಿಧಾನ ರಚಿಸಿ, ಅದರ ಶಿಲ್ಪಿಯೇ ಅವರಾದರು. ನಾವಿಂದು ಅವರ ಮಾರ್ಗದರ್ಶನದ ಗುಲಾಮರಷ್ಟೇ ಎಂದು ಬರೆದಕೊಂಡಿದ್ದಾರೆ.

JDS Woman Leader Najma Nazeer Tweeted On Karnataka Hijab Controversy

ವಿರೋಧಿಗಳ ಷಡ್ಯಂತ್ರವು ನಿಮ್ಮನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರವೇ ಆಗಿದೆ, ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಹಿಜಾಬ್, ಕೇಸರಿ ವಿವಾದ ಬೆಳೆಯಲು ಸರ್ಕಾರವೇ ಕಾರಣ; ಡಿಕೆಶಿ ಆರೋಪಹಿಜಾಬ್, ಕೇಸರಿ ವಿವಾದ ಬೆಳೆಯಲು ಸರ್ಕಾರವೇ ಕಾರಣ; ಡಿಕೆಶಿ ಆರೋಪ

ನಿಮ್ಮ ಹೋರಾಟದ ಪ್ರತಿಫಲ, ಪ್ರತಿಕಾರ, ಸ್ವಲ್ಪ ತಡವಾದರೂ ಪರವಾಗಿಲ್ಲ. ಪರಿಣಾಮಕಾರಿಯಾದ ಶಾಶ್ವತ ಪರಿಹಾರವಾಗಬೇಕಾದರೆ ನಮ್ಮ ಶಿಕ್ಷಣ ಮುಂದುವರೆಯಲೇಬೇಕು, ಮುಂದುವರಿಸಲೇಬೇಕು. ಸದ್ಯ ಈ ವ್ಯಾಜ್ಯಾವು ಘನ ನ್ಯಾಯಲಯದಲ್ಲಿರುವುದರಿಂದ ಸರ್ಕಾರದ ಆದೇಶವನ್ನು ಪಾಲಿಸೋಣ, ಶಿಕ್ಷಿತರಾಗೋಣ ಎಂದು ಕರೆ ನೀಡಿದ್ದಾರೆ.

JDS Woman Leader Najma Nazeer Tweeted On Karnataka Hijab Controversy

ನನ್ನ ಉಡುಪು ನನ್ನ ಇಷ್ಟ
ಇನ್ನು ಹಿಜಾಬ್ ವಿವಾದಕ್ಕೆ ಕುರಿತು ನಿನ್ನೆಯೂ ಟ್ವೀಟ್ ಮಾಡಿದ್ದ ನಜ್ಮಾ ನಜೀರ್, ನೀನು ಈ ಮುಂಚೆ ಹಿಜಾಬ್ ಧರಿಸುತ್ತಿರಲಿಲ್ಲ, ಕಳೆದ ಎರಡ್ಮೂರು ವರ್ಷದಿಂದಷ್ಟೇ ಧರಿಸುತ್ತಿದ್ದೀಯಾ ಎನ್ನುವವರಿಗೆ ನಾನು ಕೇಳಲು ಇಷ್ಟ ಪಡುವುದಿಷ್ಟೆ, ನಿಮ್ಮಂತಹ ದೊಣ್ಣೆ ನಾಯಕರನ್ನು ಕೇಳಿ ನನ್ನ ದೇಹದಲ್ಲಿ ಬದಲಾವಣೆಗಳು ಆಗಿಲ್ಲ. ಜೊತೆಗೆ ನಾನು ಯಾವ ಉಡುಪು ಧರಿಸಬೇಕು ಎಂದು ನಿರ್ಧರಿಸುವುದಕ್ಕೆ ನೀವ್ಯಾರು ಅಲ್ಲ, ನನ್ನ ಉಡುಪು ನನ್ನ ಇಷ್ಟ ಎಂದು ಹೇಳಿದ್ದಾರೆ.

JDS Woman Leader Najma Nazeer Tweeted On Karnataka Hijab Controversy

ಆ ಹೆಣ್ಣುಮಕ್ಕಳನ್ನು ನಾನು ಗೌರವಿಸುವುದು ಯಾಕೆಂದರೆ "ನಮ್ಮ ಆಯ್ಕೆಗೆ ಮನ್ನಣೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಶಾಲೆ ಎಂಬ ದೇಗುಲಕ್ಕೆ ಆ ಹೆಣ್ಣು ಮಕ್ಕಳು ಕಲ್ಲು ಹೊಡೆಯಲಿಲ್ಲ, ನಮ್ಮ‌ ದೇಶದ- ನಮ್ಮ ನಾಡಿನ ಧ್ವಜಗಳನ್ನು ಹಾರಿಸುವ ಧ್ವಜಸ್ತಂಭದಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸಲಿಲ್ಲ, ಕಿತ್ತಾಡಿಕೊಂಡು ಯಾರಿಗು ಚಾಕುವಿನಿಂದ ಇರಿಯಲೂ ಇಲ್ಲ. ಬದಲಾಗಿ ದೇಶದ ನ್ಯಾಯಾಂಗದ ಮೊರೆ ಹೋಗಿದ್ದಾರೆ, ಇದೇ ನಿಜವಾದ ದೇಶಪ್ರೇಮ. ದೇಶ ಮತ್ತು ಧರ್ಮ‌ ಎರಡನ್ನು ಗೌರವಿಸುವವರು, ರಕ್ಷಿಸುವವರು ಹೆಣ್ಣು ಮಕ್ಕಳೇ ಎಂದು ಟ್ವೀಟ್ ಮಾಡಿದ್ದರು.

Recommended Video

ಹಿಜಾಬ್ ಧಾರಿಣಿ ಮುಂದಿನ ಪ್ರಧಾನಿಯಾಗೋದು ಗ್ಯಾರೆಂಟಿ ಎಂದ ಓವೈಸಿ | Oneindia Kannada

English summary
JDS Woman Leader Najma Nazeer Tweeted On students boycott classes/ exams & decide to go back home after they were refused entry into campus wearing Hijab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X