ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್

ಬೆಂಗಳೂರು ಆಗಸ್ಟ್‌ 27: ಉತ್ತರ ಕರ್ನಾಟಕದದಲ್ಲಿ ನೆರೆಯಿಂದ ಜನರಿಗೆ ಆಗಿರುವ ಆರೋಗ್ಯ ಸಮಸ್ಯೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಕುಮಾರ ರಕ್ಷಾ ಆಂಬ್ಯುಲೆನ್ಸನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಎಚ್‌ ಡಿ ದೇವೇಗೌಡ ಅವರು ಚಾಲನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ಟಿಎ ಶರವಣ ಅವರ 49 ನೇ ಹುಟ್ಟುಹಬ್ಬದ ಪ್ರಯುಕ್ತ, ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ ಬಿ.ಎಂ ಉಮೇಶ್‌ ಕುಮಾರ್‌ "ಕುಮಾರ ರಕ್ಷಾ" ಎಂಬ ವೈದ್ಯಕೀಯ ಸೌಲಭ್ಯವುಳ್ಳ ವಾಹನವನ್ನು ಉತ್ತರ ಕರ್ನಾಟಕದ ಬೆಳವಾಗಿ ಹಾಗೂ ಸುತ್ತಮುತ್ತಲಿನ ಪ್ರವಾಹ ಪೀಡಿತರ ಅನುಕೂಲಕ್ಕಾಗಿ ಕಳುಹಿಸಿಕೊಡಲಾಯಿತು.

JDS launches Kumara Raksha Ambulance to help Flood hit areas

ನೆರವಿನ ವಾಹನಕ್ಕೆ ಮಾಜಿ ಪ್ರಧಾನಿ ಜೆ.ಡಿ.ಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿಗಳಾದ ಎಚ್. ಡಿ ದೇವೇಗೌಡ ಹಸಿರು ನಿಶಾನೆ ತೋರಿ ಮಾತನಾಡಿದರು, "ನೆರೆ ಸಂತ್ರಸ್ತರಿಗೆ ನೆರವಾಗುತ್ತಿರುವ ಕಾರ್ಯ ಶ್ಲಾಘನೀಯ. ಉತ್ತರ ಕರ್ನಾಟಕದ ನೆರೆ ಪೀಡಿತ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಸೇವಾ ಕಾರ್ಯ ನಿರಂತರವಾಗಿರಲಿ ಉನ್ನತ ಸ್ಥಾನಕ್ಕೇರಲಿ" ಎಂದು ದೇವೇಗೌಡರು ಆಶಿಸಿದರು.

JDS launches Kumara Raksha Ambulance to help Flood hit areas

ಸದರಿ ಕುಮಾರ ರಕ್ಷಾ ವಾಹನದಲ್ಲಿ ನೆರೆಯಲ್ಲಿ ಕಂಗಾಲಾಗಿರುವ ಕುಟುಂಬಗಳಿಗೆ ಔಷಧಿ ಅಗತ್ಯವಿರುವಂತಹ ಹೊದಿಗೆ, ಛತ್ರಿ, ಬ್ರೆಡ್ಡು, ಬಿಸ್ಕತ್ತು, ಊಟ ತಿಂಡಿ, ಕುಡಿಯುವ ನೀರು, ಟಾರ್ಚು, ಚಪಾತಿ ಹಾಗೂ ಇನ್ನಿತರೆ ಅವಶ್ಯ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ. ಈ ವಾಹನಗಳ ಜೊತೆ ಸುಮಾರು 15 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರನ್ನು ಸೂಕ್ತವಾದ ಮಾರ್ಗದರ್ಶನ ನೀಡಿ ಸೇವೆಯನ್ನು ಮಾಡಲು ಕಳುಹಿಸಿಕೊಡಲಾಗಿದೆ ಈ ಕಾರ್ಯವನ್ನು ಉಮೇಶ್ ರವರು ತಮ್ಮ ಸ್ವಂತ ವೆಚ್ಚದಿಂದ ವಿನಿಯೋಗಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+