ಸುಳ್ಳು ಸುದ್ದಿ ಮಾಡಬೇಡಿ, ಜಯಲಲಿತಾ ಆರೋಗ್ಯ ಸ್ಥಿರ
ಬೆಂಗಳೂರು,ಸೆ. 30 : ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕನ್ನಡದ ಸುದ್ದಿ ವಾಹಿನಿಯೊಂದು ಜಯಲಲಿತಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮಾಡಿರುವ ವರದಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ನೀಡಿದ್ದಾರೆ. ಜಯಲಲಿತಾ ಆರೋಗ್ಯವಾಗಿದ್ದಾರೆ. ಅವರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ.(ಜಯಲಲಿತಾ ಜೈಲು ಶಿಕ್ಷೆಯ ಹಿಂದೆ ಕರ್ನಾಟಕದ ಪಿತೂರಿ!)

ಜನರು ಇಂಥ ವದಂತಿಗಳಿಗೆ ಬೆಲೆ ನೀಡಬಾರದು. ನಿಯಮಿತವಾಗಿ ವೈದ್ಯರು ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿ ಪ್ರಕಟಮಾಡಿ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.(ಅಮ್ಮಾ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ)
ತಮ್ಮ ಮೇಲಿನ ಶಿಕ್ಷೆ ರದ್ದು ಮಾಡಲು ಒತ್ತಾಯಿಸಿ ಜಯಲಲಿತಾ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರಿ ಅಭಿಯೋಜಕರಿಲ್ಲದ ಕಾರಣ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ.
Some kannada news channels are showing that Kum. Jayalalithaa is unwell and having heart problem. THIS IS NOT CORRECT. (1/3)
— M N Reddi, IPS (@CPBlr) September 29, 2014 We usually write to couple of Govt hospitals routinely when there is a Z+ security person in city, to keep ward ready as a precaution (2/2)
— M N Reddi, IPS (@CPBlr) September 29, 2014 











Click it and Unblock the Notifications