ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ಗರ್ಲ್ ಮನೆಯಲ್ಲಿ ಸಿಕ್ಕಿದ ಲಕ್ಷ ಲಕ್ಷ ಹಣ ; ಯಾರು ಕೊಟ್ಟಿದ್ದು?

|
Google Oneindia Kannada News

ಬೆಂಗಳೂರು, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಗರ್ಲ್ ಆರ್‌.ಟಿ ನಗರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ಮಹತ್ವದ ಸಾಕ್ಷಾಧಾರಗಳು ಎಸ್ಐಟಿ ಕೈ ಸೇರಿವೆ. ಅದಕ್ಕಿಂತಲೂ ಮಿಗಿಲಾಗಿ ಆಕೆಯ ಮನೆಯಲ್ಲಿ 23 ಲಕ್ಷ ರೂ. ನಗದು ಹಣ ಸಿಕ್ಕಿದೆ ಎನ್ನಲಾಗಿದೆ. ಕೆಲಸ ಕೊಡಿಸುವುದಾಗಿ ರಮೇಶ ಜಾರಕಿಹೊಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದ ಯುವತಿ ತಂಗಿದ್ದ ಆರ್‌.ಟಿ ನಗರದ ಬಾಡಿಗೆ ಮನೆಯಲ್ಲಿ ಕೆಲವು ಮಹತ್ವದ ದಾಖಲೆಗಳ ಜತೆಗೆ ಹಣವೂ ಸಿಕ್ಕಿದೆ. ಈ ಹಣದ ಮೂಲ ಹುಡುಕಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಬಳಿಕ ಕಣ್ಮರೆಯಾಗಿರುವ ಸಿಡಿ ಗರ್ಲ್ ಕೆಲ ದಿನಗಳ ಹಿಂದೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ಸಿಡಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ರಚನೆಯಾಗಿ ರಮೇಶ್ ಜಾರಕಿಹೊಳಿ ದೂರು ನೀಡುತ್ತಿದ್ದಂತೆ ಈ ಬೆಳವಣಿಗೆ ನಡೆದಿತ್ತು.

 ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ! ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ!

ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಜಾರಕಿಹೊಳಿ ಮೋಸ ಮಾಡಿದ್ದರು. ಅವರೇ ನನ್ನ ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದಾರೆ. ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಕುಟುಂಬಕ್ಕೆ ಅವಮಾನವಾಗಿದೆ. ನನ್ನ ತಂದೆ ತಾಯಿ ಎರಡು ಸಲ ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದಾರೆ.ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಹೇಳಿದ್ದ ಯುವತಿ ವಿಡಿಯೋ ವೈರಲ್ ಆಗಿತ್ತು.

Jarkiholi CD row: SIT team found 23 lakhs cash in CD girl R.T. Nagar house !

ಇದಾದ ನಂತರ ಪ್ರಕರಣ ಹೊಸ ಆಯಾಮ ಪಡೆದುಕೊಂಡಿತ್ತು. ಯುವತಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಲಿಲ್ಲ. ಇಮೇಲ್ ಮಾಡಿದರೂ ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಯುವತಿಯ ನಡೆಯೇ ಅನುಮಾನ ಮೂಡಿಸಿತ್ತು. ಇದರ ನಡುವೆ ರಮೇಶ್ ಜಾರಕಿಹೊಳಿಯನ್ನು ಖೆಡ್ಡಾಗೆ ಬೀಳಿಸಿ ವಿಡಿಯೋ ಮಾಡಲಾಗಿದೆ ಎಂಬ ಆರೋಪಕ್ಕೆ ಕುರಿತ ಪೂರಕ ಸಾಕ್ಷಾಧಾರಗಳನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕಿದ್ದರು.

ಈ ಸಿಡಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಜಿ ಪತ್ರಕರ್ತರನ್ನು ವಿಚಾರಣೆ ನಡೆಸಿದ ಬಳಿಕ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಿದರು. ರಮೇಶ್ ಜಾರಕಿಹೊಳಿ ಸಿಡಿ ಸ್ಪೋಟಿಸಲು ಬ್ಲಾಕ್ ಮೇಲ್ ಅಥವಾ ಎದುರಾಳಿಗಳಿಗೆ ಸಿಡಿ ನೀಡಿ ಹಣ ಪಡೆದಿರುವ ಬಗ್ಗೆ ಸಂಶಯಗಳು ಹುಟ್ಟಿಕೊಂಡವು. ಇದರ ಬೆನ್ನಲ್ಲೇ ಎಸ್ಐಟಿ ಶಂಕಿತ ಆರೋಪಿಗಳ ಸಂಪರ್ಕಿತ ವ್ಯಕ್ತಿಗಳ ವಿಚಾರಣೆ ನಡೆಸಿತ್ತು. "ಇದೊಂದು ಹನಿ ಟ್ರ್ಯಾಪ್" ಎಂಬ ತೀರ್ಮಾನಕ್ಕೆ ಬಂದಿರುವ ಎಸ್ಐಟಿ ಇದೀಗ ಪ್ರಮುಖ ಆರೋಪಿಗಳ ಹಣದ ಮೂಲ ಜಾಲಾಡಲು ಮುಂದಾಗಿದೆ.

ಪ್ರಮುಖ ಆರೋಪಿ ಎನ್ನಲಾದ ಮಾಜಿ ಪತ್ರಕರ್ತನ ಎರಡು ಮನೆ, ಸಿಡಿ ಗರ್ಲ್ ಆರ್‌.ಟಿ.ನಗರದ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ನಡೆಸಿದ್ದಾರೆ. ಆರ್‌.ಟಿ.ನಗರದ ಮನೆ ಮೇಲೆ ದಾಳಿ ನಡೆಸಿದಾಗ 23 ಲಕ್ಷ ರೂ. ನಗದು ಹಣ ಸಿಕ್ಕಿದೆ. ಜತೆಗೆ ವೈನ್ ಬಾಟಲಿ, ಬಿಯರ್ ಬಾಟಲಿ ಸಿಕ್ಕಿದೆ. ನನಗೆ ಕೆಲಸ ಬೇಕು ಎಂದು ಸಚಿವರ ಮೊರೆ ಹೊಗಿದ್ದ ಯುವತಿಗೆ ಈ ಪರಿಯ ಹಣ ಎಲ್ಲಿಂದ ಬಂತು? ಕೊಟ್ಟವರು ಯಾರು ? ಎಂದು ಸಿಡಿ ಗರ್ಲ್ ಹಣದ ಮೂಲ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Recommended Video

ಸಿಡಿ ಪ್ರಕರಣದ ಯುವತಿ ವಾಸವಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಎಸ್‌ಐಟಿ | Oneindia Kannada

ಇನ್ನು ಸಿಡಿ ಗರ್ಲ್ ಬ್ಯಾಂಕ್ ಖಾತೆಗಳ ವಿವರ ಪಡೆಯುವ ಕಾರ್ಯದಲ್ಲಿ ಎಸ್ಐಟಿ ಪೊಲೀಸರು ತೊಡಗಿಸಿಕೊಂಡಿದ್ದಾರೆ. ಇನ್ನೊಂದಡೆ ಶಂಕಿತ ಆರೋಪಿ ಎನ್ನಲಾದ ಮಾಜಿ ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಿದಾಗಲೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಇದಕ್ಕೂ ಎರಡು ದಿನ ಮುನ್ನ ಎಸ್ಐಟಿ ಅಧಿಕಾರಿಗಳು ವಿಜಯಪುರದಲ್ಲಿರುವ ಶಂಕಿತ ಹ್ಯಾಕರ್ ಆರೋಪಿ ಮನೆ ಮೇಲೆ ಶೋಧ ನಡೆಸಿದಾಗ 40 ಲಕ್ಷ ರೂ.ಮೌಲ್ಯದ ಡಿಡಿ ಹಾಗೂ ಚೆಕ್ ಗಳು ಸಿಕ್ಕಿದ್ದವು. ಇದೆಲ್ಲವನ್ನು ನೋಡಿದರೆ, ಸಿಡಿ ಸ್ಪೋಟದ ಹಿಂದೆ ಬಹುದೊಡ್ಡ ಹಣಕಾಸಿನ ವಹಿವಾಟು ನಡೆದಿರುವ ಗುಮಾನಿ ಎದ್ದಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಆರೋಪಿಗಳ ಬ್ಯಾಂಕ್ ವಿವರ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

English summary
SIT officials raided CD girl's house in connection with Ramesh jarkiholi CD case and found Cash and some documents were seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X