ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ಸ್ಫೋಟ ವೃತ್ತಾಂತ ಬಗ್ಗೆ ಲಿಖಿತ ಹೇಳಿಕೆ ಮೂಲಕ ಸತ್ಯ ಬಿಚ್ಚಿಟ್ಟ ಕಲ್ಲಹಳ್ಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಸ್ಫೋಟ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ "ದೂರು ವೃತ್ತಾಂತ"ವನ್ನು ಎಸ್ಐಟಿಗೆ ನಾಲ್ಕು ಪುಟಗಳ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಕೆಲ ವರ್ಷಗಳಿಂದ ಪರಿಚಯವಿದ್ದ ಯುವಕ ಸಿಡಿ ಕೊಟ್ಟಿದ್ದು, ದೂರು ಕೊಡುವ ನೆಪದಲ್ಲಿ ಸಿಡಿ ಸ್ಫೋಟಿಸಿದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

Recommended Video

Dinesh Kallahalli ಯಾರೋ ಹೇಳಿದಕ್ಕೆ ನಾನು ಆ ಅಸಯ್ಯದ ಕೆಲಸ ಮಾಡಿಬಿಟ್ಟೆ | Oneindia Kannada

ಮಾ. 2 ರಂದು ದಿನೇಶ್ ಕಲ್ಲಹಳ್ಳಿ ಜನ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ನೀಡಿದ್ದರು. ದೂರು ದಾಖಲು ಮೊದಲೇ ಜಾರಕಿಹೊಳಿ ಯುವತಿ ಜತೆ ಏಕಾಂತವಾಗಿ ಕಳೆದಿದ್ದ ಕ್ಷಣಗಳ ಅಶ್ಲೀಲ ಸಿಡಿ ಸ್ಪೋಟಗೊಂಡಿತ್ತು. ರಾಜ್ಯ ರಾಜಕಾರಣದಲ್ಲಿ ಈ ಸಿಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ದೂರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ಕಲ್ಲಹಳ್ಳಿ, ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿಕೊಡಿ ಎಂದು ಕೋರಿದ್ದ. ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ "ಇದೊಂದು ರಾಜಕೀಯ ಷಡ್ಯಂತ್ರ" ಎಂದು ಆರೋಪಿಸಿದ್ದರು.

ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ: ಅಜ್ಞಾತ ಸ್ಥಳಕ್ಕೆ ಸಂತ್ರಸ್ತೆ ಪೋಷಕರು?ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ: ಅಜ್ಞಾತ ಸ್ಥಳಕ್ಕೆ ಸಂತ್ರಸ್ತೆ ಪೋಷಕರು?

ದಿನಗಳು ಕಳೆದಂತೆ ವಿಚಾರಣೆಗೂ ಹಾಜರಾಗದೇ ದಿನೇಶ್ ಕಲ್ಲಹಳ್ಳಿಯ ನಡೆ ಪೊಲೀಸರಲ್ಲಿ ಅನುಮಾನ ಹುಟ್ಟಿಹಾಕಿತು. ಜೀವ ಬೆದರಿಕೆ ಹಿನ್ನೆಲೆಯಲ್ಲಿ ನಾನು ಬರಲಾಗುತ್ತಿಲ್ಲ. ಆ ಯುವತಿ ಯಾರು ಅಂತ ನನಗೆ ಗೊತ್ತೇ ಇಲ್ಲ. ಅವರ ಕಡೆ ಪರಿಚಿತ ವ್ಯಕ್ತಿ ಸಿಡಿ ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಉರುಳಾಗುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ವಾಪಸು ಪಡೆದಿದ್ದರು.

Jarkiholi cd row: Dinesh kallahalli explains CD secrete in written statement

ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಆರಂಭಿಸುತ್ತಿದ್ದಂತೆ ಜಾರಕಿಹೊಳಿ ಪ್ರಕರಣ ಹೊಸ ಆಯಾಮ ಪಡೆದುಕೊಂಡಿತು. ಇದರಲ್ಲಿ ದಿನೇಶ್ ಕಲ್ಲಹಳ್ಳಿ ಕೂಡ ಸತ್ಯ ಮರೆಮಾಚಿ ಸುಳ್ಳು ಹೇಳಿರುವ ಅನುಮಾನ ಮೂಡಿಸಿತ್ತು. ಇದರ ಬೆನ್ನಲ್ಲೇ ದೂರು ನೀಡಿದ ಬಗ್ಗೆ ಹೇಳಿಕೆ ನೀಡುವಂತೆ ವಿಶೇಷ ತನಿಖಾ ತಂಡ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಿತ್ತು.

ಸಿಡಿ ಗರ್ಲ್ ಪೋಷಕರ ಕಿಡ್ನಾಪ್ ದೂರು: ಸಂತ್ರಸ್ತ ಯುವತಿಯ ಆತ್ಮಹತ್ಯೆ ಮಾತಿನ ಮರ್ಮವೇನು?ಸಿಡಿ ಗರ್ಲ್ ಪೋಷಕರ ಕಿಡ್ನಾಪ್ ದೂರು: ಸಂತ್ರಸ್ತ ಯುವತಿಯ ಆತ್ಮಹತ್ಯೆ ಮಾತಿನ ಮರ್ಮವೇನು?

ನೋಟಿಸ್‌ಗೆ ಮೂರು ಪುಟಗಳ ಉತ್ತರ ನೀಡಿರುವ ದಿನೇಶ್ ಕಲ್ಲಹಳ್ಳಿ, ಎಸ್ಐಟಿ ವಶದಲ್ಲಿರುವ ಪತ್ರಕರ್ತ ನನಗೆ ಮೊದಲಿನಿಂದಲೂ ಪರಿಚಯವಿದ್ದ. ಆತನ ಗೆಳತಿಯೂ ನನಗೆ ಮೊದಲಿನಿಂದಲೂ ಗೊತ್ತಿರುವರೇ. ಹೀಗಾಗಿ ದೂರು ಕೊಡುವ ಬಗ್ಗೆ ಹೇಳಿದರು. ಯುವತಿಗೆ ಜೀವ ಭಯವಿದೆ. ನೀವು ಸಾಮಾಜಿಕ ಜೀವನದಲ್ಲಿರುವರು. ನೀವು ದೂರು ಕೊಟ್ಟರೆ ಯುವತಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು. ಇದನ್ನು ನಂಬಿ ನಾನು ದೂರು ಕೊಟ್ಟಿದ್ದು ನಿಜ. ಆದರೆ ಆ ಯುವತಿಯಾಗಲೀ ನನಗಾಗಲೀ ಯಾವ ಸಂಪರ್ಕವೂ ಇಲ್ಲ. ಈ ಪ್ರಕರಣದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ.

Jarkiholi cd row: Dinesh kallahalli explains CD secrete in written statement

ರಾಜ್ಯದ ಜನರು ನನ್ನನ್ನು ಅನುಮಾನದಿಂದ ನೋಡುವಂತಾಗಿದೆ. ಹೀಗಾಗಿ ನಾನು ದೂರು ವಾಪಸು ಪಡೆದಿದ್ದೇನೆ. ಆದರೆ, ಇದರ ಹಿಂದೆ ಷಡ್ಯಂತ್ರ, ಹನಿಟ್ರ್ಯಾಪ್ ಕುರಿತ ಯಾವ ವಿವರಗಳು ನನಗೆ ಲಭ್ಯ ಇರಲಿಲ್ಲ. ಸಿಡಿ ಸ್ಪೋಟಿಸುವ ಕುರಿತ ಪರಿಚಿತ ಯುವಕ ಎರಡು ದಿನ ಪದೇ ಪದೇ ಪೋನ್ ಕರೆ ಮಾಡುತ್ತಿದ್ದ. ರಿಲೀಸ್ ಆದ ಬಳಿಕವೂ ನನ್ನ ಜತೆ ಸಹಜವಾಗಿ ಎರಡು ದಿನ ಮಾತನಾಡಿದ್ದ ಎಂದು ಕಲ್ಲಹಳ್ಳಿ ಎಸ್ಐಟಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರೆಗೂ ಎಳೆದಾಡಿದ್ದ ದಿನೇಶ್ ಕಲ್ಲಹಳ್ಳಿ ಸಾಮಾಜಿಕ ಕಾರ್ಯಕರ್ತ ಎಂದೇ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರು. ಆದರೆ ಸಿಡಿ ಸ್ಫೋಟಿಸುವ ಯೋಜನೆಯಲ್ಲಿ ದೂರು ಕೊಡಲು ಹೋಗಿ ದುರಂತ ಮಾಡಿಕೊಂಡಿದ್ದು ವಿಪರ್ಯಾಸ.

English summary
SIT officials have obtained a four-page written statement from Dinesh Kallahalli about the withdrawal of a complaint against former minister Jarkiholi CD blast case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X