ತಪ್ಪಿತಸ್ಥ ಎಂದು ಸಾಬಿತಾದರೆ ನೇಣು ಹಾಕಿಕೊಳ್ತೀನಿ - ಕುಮಾರಸ್ವಾಮಿ
ಬೆಂಗಳೂರು, ಜೂನ್ 23: 'ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪ ಸಾಬೀತಾದರೆ ನಾನು ನೇಣು ಹಾಕಿಕೊಳ್ತೀನಿ' ಅಂತ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಮಾಧ್ಯಮದವರ ಜತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನನ್ನ ಜತೆ ಹುಡುಗಾಟ ಆಡ್ತಾ ಇದ್ದೀರಾ? ಚೆಲ್ಲಾಟ ಆಡ್ತಾ ಇದ್ದೀರಾ? ಪೆನ್ ಡ್ರೈವ್, ಸಿಡಿ ತೋರಿಸಿ ನನ್ನನ್ನು ಹೆದರಿಸ್ತೀರಾ? "ಎಂದು ಕುಮಾರಸ್ವಾಮಿ ಅಬ್ಬರಿಸಿದ್ದಾರೆ.

ರಾಜ್ಯವೇ ಸಾಲ ಮನ್ನಾ ಮಾಡಲಿ
"ಕೇಂದ್ರ ಸರಕಾರ ಈಗಾಗಲೇ ಸಾಲ ಮನ್ನಾ ಮಾಡಲ್ಲ ಎಂದಿದೆ. ಎಷ್ಟು ಸಲ ಕೇಂದ್ರ ಸರಕಾರದ ಮುಂದೆ ಹಲ್ಲು ಕಿರಿದು ನಿಲ್ಲುತ್ತೀರಿ? ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನೂ ರಾಜ್ಯ ಸರಕಾರವೇ ಮನ್ನಾ ಮಾಡಬೇಕು," ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.












Click it and Unblock the Notifications