ಪೊಲೀಸನ ಪತ್ನಿಯನ್ನೇ ಎಗರಿಸಿಕೊಂಡು ಬಂದಿದ್ದ ಜಮ್ಮು ಕಾಶ್ಮೀರದ ಉಗ್ರ..!

ಬೆಂಗಳೂರು, ಜೂನ್ 07: ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರದ ಉಗ್ರ ತಾಲಿಬ್ ಹುಸೇನ್‌ನನ್ನು ಬಂಧಿಲಾಗಿದೆ. ಜಮ್ಮು ಕಾಶ್ಮೀರದಿಂದ ಬಂದಿದ್ದ ಉಗ್ರ ಬೆಂಗಳೂರಿನ ಶ್ರೀರಾಮಪುರದಲ್ಲಿ ಏನೇನು ಮಾಡುತ್ತಿದ್ದ. ಜಮ್ಮು ಕಾಶ್ಮೀರದಿಂದ ಯಾರೊಂದಿಗೆ ಬಂದಿದ್ದ ಅನ್ನೋದು ಬಹಳ ರೋಚಕ ಸಂಗತಿಯಾಗಿದ್ದು. ಇವನೊಬ್ಬ ಉಗ್ರಗಾಮಿ ಅನ್ನೋದು ಪೊಲೀಸರು ಬಂಧಿಸುವವರೆಗೂ ಸ್ಥಳೀಯರಿಗೆ ತಿಳಿದಿರಲಿಲ್ಲ.

ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದ ತಾಲಿಬ್ ಹುಸೇನ್ ಜಮ್ಮು ಕಾಶ್ಮೀರದಿಂದ ಬಂದು ಬೆಂಗಳೂರಿನ ಶ್ರೀರಾಂಪುರದಲ್ಲಿ ವಾಸವಾಗಿದ್ದ. ಆತನ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ. ""ತಾಲಿಬ್ ಹುಸೇನ್ ಬಳಿಯಲ್ಲಿ ಆಧಾರ್ ಕಾರ್ಡ್ ಇತ್ತು, ಅದನ್ನ ನೋಡಿ ರೂಂ ಕೊಡಲಾಗಿತ್ತು.ಇಬ್ಬರು ಪತ್ನಿಯರು, ಜಮ್ಮುನಲ್ಲಿ ಒಂದು ಮದುವೆಯಾಗಿದ್ದ. ನಂತರ ಇಲ್ಲಿ ಒಂದು ಮದುವೆಯಾಗಿದ್ದ.ಇಲ್ಲಿ ಇಬ್ಬರು ಮಕ್ಕಳು ಸಹ ಇದ್ದರು. ಒಂಭತ್ತು ತಿಂಗಳಿಂದ ಮಸೀದಿಗೆ ಹೊಂದಿಕೊಂಡ ಮನೆಯಲ್ಲಿ ವಾಸವಾಗಿದ್ದ. ರೈಲು ನಿಲ್ದಾಣದಲ್ಲಿ ಲೋಡಿಂಗ್, ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದ. ಅವನ ಪೂರ್ವಾಪರ ಬಗ್ಗೆ ಅಷ್ಟೇನು ಗೊತ್ತಿಲ್ಲ‌ ಜಮ್ಮುನಲ್ಲಿ ಮೊದಲ ಹೆಂಡತಿ ತೀರಿ ಹೋಗಿದ್ದಾಳೆ. ಅಲ್ಲಿ ಆತನಿಗೆ ಮಕ್ಕಳು ಇದ್ದಾರೆ, ಹೆಬಿಯಸ್ ಕಾರ್ಪಸ್ ಇದೆ ಅಂತ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.ಅದು ಬಿಟ್ಟು ಬೇರೆ ವಿಚಾರ ನಮಗೆ ಗೊತ್ತಿಲ್ಲ'' ಎಂದು ಸ್ಥಳೀಯ ನಿವಾಸಿ ಅನ್ವರ್ ಮಾವಾಡ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂದು ಶ್ರೀರಾಮಪುರ ಪೊಲೀಸರ ಸಹಕಾರದಿಂದ ಆರೋಪಿ ಅರೆಸ್ಟ್ ತಾಲಿಬ್ ಹುಸೇನ್ (38) ರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಜಮ್ಮು ಕಾಶ್ಮೀರದಿಂದ ಪೊಲೀಸ್ ಪತ್ನಿಯನ್ನೇ ಕರೆತಂದಿದ್ದ

ಜಮ್ಮು ಕಾಶ್ಮೀರದಿಂದ ಪೊಲೀಸ್ ಪತ್ನಿಯನ್ನೇ ಕರೆತಂದಿದ್ದ

ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಪತ್ನಿಯನ್ನೇ ಕರೆದುಕೊಂಡು ಬಂದಿದ್ದ ಉಗ್ರ ತಾಲಿಬ್ ಹುಸೇನ್. ಈತ ಪತ್ನಿ ಮತ್ತು 3 ಜನ ಮಕ್ಕಳ ಜೊತೆಗೆ ವಾಸವಾಗಿದ್ದ. ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಆಶ್ರಯ ಈತನಿಗೆ ಆಶ್ರಯವನ್ನು ನೀಡಿದ್ದ.

ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಅನ್ನೋ ಶಂಕೆ ಉಂಟಾಗಿದೆ. ತಾಲೀಬ್ ಹುಸೇನ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಎನ್ನಲಾಗಿದೆ. ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಾ ಅಲ್ಲೆ ಮಲಗುತ್ತಿದ್ದ. ಓಕಳಿಪುರಂ ಬಳಿ ಪಾರ್ಸೆಲ್ ಹಾಕುವ ಕೆಲಸ ಮಾಡುತ್ತಿದ್ದ. ಆಗ ಸುತ್ತಮುತ್ತಲಿನ ಜನ ಪರಿಚಯವಾಗಿದ್ದರು. ಆ ನಂತರ ಜಮ್ಮುವಿಗೆ ಹೋಗಿ ಮದುವೆಯಾಗಿ ವಾಪಸ್ ಬಂದಿದ್ದ. ಓಕಳಿಪುರದ ನಾಲ್ಕನೇ ಕ್ರಾಸ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಮಕ್ಕಳ ಜೊತೆ ವಾಸ‌ವಾಗಿ ಯಾರಿಗೂ ತಾನೊಬ್ಬ ನಟೋರಿಯಸ್ ಎಂಬದನ್ನು ತಿಳಿಯದಂತೆ ಬದುಕುತ್ತಿದ್ದ.

ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದ ತಾಲಿಬ್ ಹುಸೇನ್

ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದ ತಾಲಿಬ್ ಹುಸೇನ್

ತಾಲೀಬ್ ಹುಸೇನ್ ಮೂಲತಃ ಜಮ್ಮು ಕಾಶ್ಮೀರದವನಾಗಿದ್ದ. ಕಳೆದ ಎರಡು ವರ್ಷದಿಂದ ಶ್ರೀರಾಮಪುರದಲ್ಲಿ ವಾಸವಾಗಿದ್ದ ತಾಲೀಬ್ ಹುಸೇನ್ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ 17 ನೇ ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧನ ಉಗ್ರನನ್ನು ಬಂಧಿಸಿದ್ದಾರೆ. ಇವರಿಗೆ ಶ್ರೀರಾಮಪುರ ಪೊಲೀಸರು ಸಹಕಾರವನ್ನು ನೀಡಿದ್ದಾರೆ. ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದ ತಾಲಿಬ್ ಹುಸೇನ್ ಕರೆದೊಯ್ದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮೇ 29 ರ ರಾತ್ರಿ 10.50ಕ್ಕೆ ತಾಲಿಬ್ ಹುಸೇನ್‌ನನ್ನು ಪೊಲೀಸರು ಕೆರೆದುಕೊಂಡು ಹೋಗಿದ್ದಾರೆ.

ಉಗ್ರನ ಚಟುವಟಿಗೆಗಳ ಕುರಿತು ತನಿಖೆ

ಉಗ್ರನ ಚಟುವಟಿಗೆಗಳ ಕುರಿತು ತನಿಖೆ

ಉಗ್ರಗಾಮಿ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದಲ್ಲಿ ವಶಕ್ಕೆ ಪಡೆದಿರೋ ಜಮ್ಮು ಕಾಶ್ಮೀರ ಪೊಲೀಸರು. ಭಾರಿ ಬಂದೋಬಸ್ತ್ ನಲ್ಲಿ ತಾಲಿಬ್ ಹುಸೇನ್ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ನಿಜಕ್ಕೂ ಬೆಂಗಳೂರಿನಲ್ಲಿ ತಾಲಿಬ್ ಹುಸೇನ್ ಅಲಿಯಾಸ್ ತಾಲಿಕ್ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದನೇ ಅಥವಾ ಸ್ಲೀಪರ್ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದನೇ. ಉಗ್ರಗಾಮಿ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗಿಯಾಗಿದ್ದನೇ ಎಂಬುದೆಲ್ಲಾ ತನಿಖೆಯಿಂದ ಬಹಿರಂಗವಾಗಬೇಕಿದೆ.

ಯಾವ ಕಾರಣಕ್ಕೆ ಅಂತ ನಮಗೆ ಮಾಹಿತಿ ನೀಡಿಲ್ಲ

ಯಾವ ಕಾರಣಕ್ಕೆ ಅಂತ ನಮಗೆ ಮಾಹಿತಿ ನೀಡಿಲ್ಲ,ಬೆಂಗಳೂರು ಪೊಲೀಸರು ಸಾಕಷ್ಟು ಬಾರಿ ಉಗ್ರರನ್ನ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.ಇಲ್ಲಿ ಎಲ್ಲಿ ಉಳಿದುಕೊಂಡಿದ್ದ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರ ಬಗ್ಗೆ ತನಿಖೆ ಮಾಡ್ತೀವಿ ಎಂದು ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+