ಬೆಂಗಳೂರಿನ ಕಲ್ಯಾಣಿ ಡೆವಲಪರ್ಸ್ ಮೇಲೆ ಐಟಿ ದಾಳಿ
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು ಮೂಲದ ಕಲ್ಯಾಣಿ ಡೆವಲಪರ್ಸ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 8 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಇನ್ನು 21 ಕಡೆಗಳಲ್ಲಿ ಕಲ್ಯಾಣಿ ಡೆವಲಪರ್ಸ್ ಗೆ ಸೇರಿದ ಪ್ರದೇಶಗಳಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ.

ಕಲ್ಯಾಣಿ ಡೆವಲಪರ್ಸ್ ಎ ಮೋಹನ್ ರಾಜು ಎಂಬವರಿಗೆ ಸೇರಿದ ಕಂಪನಿಯಾಗಿದ್ದು, 1991ರಿಂದ ಕಾರ್ಯ ನಿರ್ವಹಿಸುತ್ತಿದೆ. ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಹಾಗೂ ರಿಂಗ್ ರೋಡ್ ನಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್ ಸೇರಿದಂತೆ ಅಪಾರ ಆಸ್ತಿಪಾಸ್ತಿಗಳು ಕಲ್ಯಾಣಿ ಡೆವಲಪರ್ಸ್ ಸಂಸ್ಥೆ ಬಳಿಯಲ್ಲಿವೆ.
ಇಷ್ಟೇ ಅಲ್ಲದೆ ಕಲ್ಯಾಣಿ ಮೋಟರ್ಸ್ ಸೇರಿದಂತೆ ಹಲವು ಕಂಪೆನಿಗಳಿಗೆ ಮೋಹನ್ ರಾಜು ನಿರ್ದೇಶಕರಾಗಿದ್ದಾರೆ.












Click it and Unblock the Notifications