ಬೆಂಗಳೂರಿನ 'ಟ್ವಿಟ್ಟರ್' ಉಗ್ರನ ರಹಸ್ಯ ಬಯಲು!
ಬೆಂಗಳೂರು, ಡಿ. 12 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆಯನ್ನು ಬೆಂಬಲಿಸಿ ಪುಂಖಾನುಪುಂಖವಾಗಿ ಆತಂಕಕಾರಿ ಟ್ವೀಟ್ ಮಾಡುತ್ತ, ಅಮೆರಿಕದ ನಾಗರಿಕರ ರುಂಡ ಕತ್ತರಿಸಿದ ವಿಡಿಯೋಗಳನ್ನು ಟ್ವಿಟ್ಟರಲ್ಲಿ ನಿರಂತರವಾಗಿ ಬಿತ್ತರಿಸಿದ @shamiwitness ಎಂಬ ಟ್ವಿಟ್ಟರ್ ಖಾತೆ ಬಳಸುತ್ತಿದ್ದ ವ್ಯಕ್ತಿಯ ರಹಸ್ಯ ಬಯಲಾಗಿದೆ.
ಆತನ ಹೆಸರು ಮೆಹದಿ ಮರಸೂರ್ ಎಂಬು ಬಹಿರಂಗವಾಗಿದ್ದು, ಆತ ಟ್ವೀಟ್ ಮಾಡುತ್ತಿದ್ದುದು ಎಲ್ಲಿಂದ ಗೊತ್ತೆ? ಬೆಂಗಳೂರಿನಿಂದ! ಭಾರತದಲ್ಲಿದ್ದುಕೊಂಡೇ ಭಾರತದ ವಿರುದ್ಧ ಉಗ್ರ ಸಂದೇಶಗಳನ್ನು ಬಿತ್ತರಿಸುತ್ತಿದ್ದುದು ಬಹಿರಂಗವಾಗುತ್ತಿದ್ದಂತೆ, 18 ಸಾವಿರದಷ್ಟು ಫಾಲೋವರ್ಸ್ ಇದ್ದ ಆ ಟ್ವಿಟ್ಟರ್ ಅಕೌಂಟನ್ನು ಬಂದ್ ಮಾಡಲಾಗಿತ್ತು. ಆದರೆ, ಅದೇ ಹ್ಯಾಂಡಲ್ ನಿಂದ ಮತ್ತೆ ಅದು ತೆರೆದುಕೊಂಡಿದೆ. [ಪೊಲೀಸರ ಕೈಗೆ ಮೆಹದಿ ಸಿಕ್ಕಿದ್ದು ಹೇಗೆ?]
ಮೆಹದಿ ಎಂದು ಗುರುತಿಸಿಕೊಂಡಿರುವ ಆ ಯುವಕ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಜಾಗತಿಕವಾಗಿ ತನ್ನ ಕಬಂಧ ಬಾಹುಗಳನ್ನು ಪಸರಿಸುತ್ತಿರುವ ಐಎಸ್ಐಎಸ್ ಸಂಘಟನೆ ಬೆಂಗಳೂರನ್ನೂ ಮುಟ್ಟಿರುವುದು ಇದರಿಂದ ಸಾಬೀತಾಗಿದೆ. ಈ ಉಗ್ರ ಸಂಘಟನೆಯ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಸಾಮಾಜಿಕ ತಾಣಗಳಲ್ಲಿ ಅಸ್ತಿತ್ವವನ್ನು ಪಸರಿಸುವ ಕೆಲಸ ವಹಿಸಲಾಗಿದೆ. [ಹಿಂದಿರುಗಿದ ಉಗ್ರ ಬಾಯ್ಬಿಟ್ಟ ಸ್ಫೋಟಕ ಮಾಹಿತಿ]

ಯಾರು ಈ ಮೆಹದಿ?
ಟ್ವಿಟ್ಟರಿಗಾಗಿ ಹುಟ್ಟಿಸಲಾಗಿರುವ ಹೆಸರು ಇದು. 2013ರಿಂದ ಟ್ವಿಟ್ಟರಲ್ಲಿ ಮತ್ತು Shami Witness ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದಾನೆ. ವೈವಿಧ್ಯಮಯ ವಿಷಯಗಳ ಬಗ್ಗೆ ಬ್ಲಾಗಲ್ಲಿ ಬರೆಯುವ ಮೆಹದಿ ಭಾರೀ ಇಂಟರೆಸ್ಟಿಂಗ್ ಮನುಷ್ಯ. ಸಿರಿಯಾದ ಬಿಲಾದ್-ಅಲ್-ಶಾಮ್, ಜಿಹಾದಿ, ಆರ್ಥಿಕ ಬಿಕ್ಕಟ್ಟು, ತಂತ್ರಜ್ಞಾನ, ಇತಿಹಾಸಗಳ ಬಗ್ಗೆ ಬರೆದಿದ್ದಾನೆ. ತನಿಖೆಯ ದೃಷ್ಟಿಯಿಂದ ಆತನ ಇರುವನ್ನು ಗುಟ್ಟಾಗಿಡಲಾಗಿದೆ. ಆದರೆ, ಬೆಂಗಳೂರಿನ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಎಂಬುದು ಬಹಿರಂಗವಾಗಿದೆ.
ಐಎಸ್ಐಎಸ್ ಸೇರಿದ್ದರೂ ಬೆಂಗಳೂರಲ್ಲೇ ಉಳಿದ
ಉಗ್ರ ಸಂಘಟನೆಯ ಚಿಂತನೆಯಿಂದ ಪ್ರಭಾವಿತನಾಗಿದ್ದ ಮೆಹದಿ ಸಂಘಟನೆ ಸೇರಿದ್ದ. ಆದರೆ, ಕುಟುಂಬದ ಏಕಮಾತ್ರ ಗಳಿಕೆದಾರನಾದ್ದರಿಂದ ಬೆಂಗಳೂರಿನಲ್ಲಿಯೇ ಉಳಿದ. ಐಎಸ್ಐಎಸ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಚಟುವಟಿಕೆ ಆರಂಭಿಸಿದ್ದ. 2013ರ ಮೇನಿಂದ ಆರಂಭಿಸಿದ್ದ ಟ್ವಿಟ್ಟರ್ ಖಾತೆ ಸಾಕಷ್ಟು ಯಶಸ್ಸೂ ಗಳಿಸಿತ್ತು. ಪ್ರತಿ ತಿಂಗಳು 25 ಲಕ್ಷ ಹಿಟ್ಸ್ ಸಿಗುತ್ತಿತ್ತು.
"ಇಸ್ಲಾಮಿಕ್ ಸ್ಟೇಟನ್ನು ಅಲ್ಲಾಹು ರಕ್ಷಿಸಲು, ಬಲಿಷ್ಠಗೊಳಿಸಲಿ ಮತ್ತು ವಿಸ್ತರಿಸಲಿ. ಇಸ್ಲಾಮಿಕ್ ಸ್ಟೇಟ್ ವಿರುದ್ಧ ಯುದ್ಧ ಸಾರಿರುವವರನ್ನು ಅಲ್ಲಾಹು ಧ್ವಂಸಗೊಳಿಸಲಿ" ಎಂದು ಟ್ವಟ್ಟರ್ ಖಾತೆ ಮುಚ್ಚುವ ಮುನ್ನ ಬರೆದಿದ್ದ. ದೇಶದ ವಿರುದ್ಧವೇ ನಡೆಸುತ್ತಿರುವ ಹುನ್ನಾರ ಬಯಲಾಗುತ್ತಿದ್ದಂತೆ ಟ್ವಿಟ್ಟರ್ ಖಾತೆ ಮುಚ್ಚಿಕೊಂಡಿದೆ.
ಆತನ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ವಾಷಿಂಗ್ಟನ್ ಮೂಲದ ಕಂಪನಿಯಲ್ಲಿ ಸೀನಿಯರ್ ಪ್ರೋಗ್ರಾಂ ಅಸೋಸಿಯೇಟ್ ಆಗಿರುವ ಮೈಕಲ್ ಕುಗೆಲ್‌ಮನ್ ಅವರು ಒನ್ಇಂಡಿಯಾಗೆ ತಿಳಿಸಿದ ಪ್ರಕಾರ, ಆತ ಬೆಂಗಳೂರಿನ ಕಂಪನಿಯಲ್ಲಿ ಉನ್ನತ ಹುದ್ದಿಯೆನ್ನು ಅಲಂಕರಿಸಿದ್ದಾನೆ. ಆದರೂ ರಹಸ್ಯವಾಗಿ ಇಸ್ಲಾಮಿಕ್ ಸ್ಟೇಟ್ ಪರ ಕೆಲಸ ಮಾಡುತ್ತಿದ್ದಾನೆ. ಆತ ಭಾರತದ ನಿವಾಸಿ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನವೂ ಇತ್ತು. ಲಕ್ಷಾಂತರ ಪ್ರತಿಭಾವಂತ ಟೆಕ್ಕಿಗಳಿಗೆ ಜಾಗ ನೀಡಿರುವ ಬೆಂಗಳೂರಿನ ಯುವಕರನ್ನೇ ಐಎಸ್ಐಎಸ್ ಸೆಳೆಯುತ್ತಿದೆ.
-
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ











Click it and Unblock the Notifications