ಬೆಂಗಳೂರು; ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸದಸ್ಯನ ಬಂಧನ
ಬೆಂಗಳೂರು, ಆಗಸ್ಟ್ 18 : ಬೆಂಗಳೂರು ನಗರದಲ್ಲಿ ಅಡಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸದಸ್ಯನನ್ನು ಎನ್‌ಐಎ ಬಂಧಿಸಿದೆ. ಐಎಸ್‌ಕೆಪಿ ಜೊತೆ ಕಾಶ್ಮೀರದ ದಂಪತಿಗಳ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಐಎ ಅವರ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಬೆಂಗಳೂರಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹ ಮಾಡಿತ್ತು.
ಸಿಎಎ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸಹೋದರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ ಸಂಚು ರೂಪಿಸಿತ್ತು. ಈ ಸಂಚನ್ನು ಎನ್ಐಎ ಬಯಲು ಮಾಡಿದ್ದು ತನಿಖೆ ಕೈಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ದಂಪತಿಗಳು ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ. ಇವರ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಅಡಗಿದ್ದ. ಸೋಮವಾರ ಎನ್‌ಐಎ ನಗರದಲ್ಲಿ ದಾಳಿ ನಡೆಸಿ, ಆತನನ್ನು ಬಂಧಿಸಿದೆ.

ಎನ್‌ಐಎ ಅಧಿಕಾರಿಗಳು ಅಜ್ಞಾನ ಸ್ಥಳದಲ್ಲಿ ಬಂಧಿತನ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಬಂಧಿತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಬಂಧಿತ ವ್ಯಕ್ತಿ ನಗರದಲ್ಲಿ ಹಲವು ಜನರ ಜೊತ ಸಂಪರ್ಕದಲ್ಲಿರುವ ಮಾಹಿತಿ ಇದ್ದು, ಅವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿಯೂ ದಾಳಿಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತೇ? ಎಂಬುದು ಇನ್ನೂ ತಿಳಿದುಬರಬೇಕಿದೆ.











Click it and Unblock the Notifications