Bengaluru: ಶೇ.100 ಟ್ರಾಫಿಕ್ ಇಳಿಕೆಗೆ ISEC ನೀಡಿದ ಸೂಕ್ತ ಶಿಫಾರಸುಗಳು, ವರದಿ

ಬೆಂಗಳೂರು, ಆಗಸ್ಟ್ 08: ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಸಂಚಾರ ದಟ್ಟಣೆಗೆ (Traffic) ಹೆಸರುವಾಸಿಯಾದ ಬೆಂಗಳೂರು (Bengaluru) ನಗರದಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ಪರಿಹಾರಗಳನ್ನು ಶಿಫಾರಸು ಮಾಡಲಾಗಿದೆ.

ಇತ್ತೀಚೆಗೆ ಬೆಂಗಳೂರು ಟ್ರಾಫಿಕ್ ಕುರಿತು ಅಧ್ಯಯನ ನಡೆಸಿರುವ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಇತ್ತೀಚಿನ ಅಧ್ಯಯನವು ವಾಹನ ದಟ್ಟಣೆ ಕಡಿಮೆ ಮಾಡಲು ದೀರ್ಘಾವಧಿ ಪರಿಹಾರಗಳನ್ನು ಶಿಫಾರಸು ಮಾಡಿದೆ. ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಗಳಲ್ಲಿ ಇದು ಸಹ ಒಂದಾಗಿದೆ. ಈ ಸಲಹೆಗಳು ಒಂದು ವೇಳೆ ಅನುಷ್ಠಾನಗೊಂಡರೆ ಶೇಕಡಾ 100ರಷ್ಟು ದಟ್ಟಣೆ ಕಡಿಮೆ ಆಗಲಿದೆ ಎಂದು ಐಎಸ್‌ಇಸಿ ತಿಳಿಸಿದೆ.

ISEC Study Suggestion Build Flyover-Underpass At 5 Junctions Reduce Traffic Congestion In Bengaluru

ಬೆಂಗಳೂರಿನಲ್ಲಿ 10 ಸಂಚಾರ ದಟ್ಟಣೆಯ ಜಂಕ್ಷನ್‌ಗಳಲ್ಲಿ ಒಟ್ಟು ಐದು ಜಂಕ್ಷನ್‌ಗಳಲ್ಲಿ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಶಿಫಾರಸು ಮಾಡಿದೆ ಎಂದು ಡಿಎಚ್‌ ವರದಿ ಮಾಡಿದೆ.

ಮೇಲ್ಸೇತುವೆ- ಅಂಡರ್‌ಪಾಸ್ ನಿರ್ಮಾಣಕ್ಕೆ ಸೂಚನೆ

ನಗರದ ಸಿಎಂಟಿಐ, ಇಬ್ಲೂರು, ಡೈರಿ ಸರ್ಕಲ್, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಗೊರಗುಂಟೆಪಾಳ್ಯ, ಕುಮಾರಸ್ವಾಮಿ ಲೇಔಟ್, ಟಿನ್ ಫ್ಯಾಕ್ಟರಿ, ಹೆಬ್ಬಾಳ ಹಾಗೂ ಸಾರಕ್ಕಿ ಜಂಕ್ಷನ್‌ ಗಳಲ್ಲಿನ ಸಂಚಾರ ದಟ್ಟಣೆ ಬಗ್ಗೆ ಈ ಸಂಸ್ಥೆ ಅಧ್ಯಯನ ನಡೆಸಿತ್ತು. ಈ ಪೈಕಿ ಐದರಲ್ಲಿ ಮೇಲ್ಸೇತುವೆ ಮತ್ತು ರಸ್ತೆ ಅಂಡರ್‌ಪಾಸ್ ನಿರ್ಮಿಸುವಂತೆ ವರದಿಯಲ್ಲಿ ಉಲ್ಲೇಖಿಸಿದೆ.

ವಾಲ್ಯೂಮ್-ಟು-ಕೆಪಾಸಿಟಿ (V/C) ಅನುಪಾತ ಅಧಿಕವಾಗಿರುವ ನಗರದ ಜಂಕ್ಷನ್‌ಗಳಲ್ಲಿ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಈ ಶಿಫಾರಸಿನ ವರದಿ ಮುಂದಿಡಲಾಗಿದೆ. ದಟ್ಟಣೆಯನ್ನು ಕಡಿಮೆ ಮಾಡಲು ವಾಹನಗಳನ್ನು ಬೇರೆಡೆಗೆ ತಿರುಗಿಸುವ ವಿಧಾನ ಕಾರ್ಯ ಸಾಧ್ಯವಾಗದಿದ್ದರೆ ಈ ಶಿಫಾರಸು ಪ್ರಮುಖ ಪರಿಹಾರವಾಗಿ ಎಂದು ಸಂಶೋಧಕರಾದ ಪ್ರೊ.ಕೃಷ್ಣ ರಾಜ್ ತಿಳಿಸಿದ್ದಾರೆ.

ISEC Study Suggestion Build Flyover-Underpass At 5 Junctions Reduce Traffic Congestion In Bengaluru

ದೀರ್ಘಾವಧಿ ಪರಿಹಾರ ವರದಿ ಸಲ್ಲಿಕೆ

ಸಂಚಾರ ದಟ್ಟಣೆ ನಿಯಂತ್ರಣ, ಇಳಿಕೆ ಕುರಿತು ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ವಿವಿಧ ವರದಿಗಳಲ್ಲಿ ಇದು ಸಹ ಒಂದು. ಆದರೆ ISEC ತಿಳಿಸಿರುವ ಪರಿಹಾರಗಳು ತಾಂತ್ರಿಕವಾಗಿ ಹಾಗೂ ದೀರ್ಘಾವಧಿಯ ಪರಿಹಾರವಾಗಿದೆ ಎಂದು ಸಂಶೋಧಕರ ಅಭಿಪ್ರಾಯವಾಗಿದೆ. ಸದ್ಯ ಈ ಪ್ರಸ್ತಾವನೆಯ ಕಾರ್ಯಗತಕ್ಕೆ KMEAಯ ಎಲ್ಲ ಮಧ್ಯಸ್ಥಗಾರರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಉದ್ದೇಶಿತ ಐದು ಜಂಕ್ಷನ್‌ಗಳಲ್ಲಿ ವರದಿಯಲ್ಲಿ ಸೂಚಿಸಿದಂತೆ ಸುಧಾರಿತ ಫುಟ್‌ಪಾತ್‌ಗಳು, ಎತ್ತರದ ಸ್ಕೈವಾಕ್‌ಗಳು ಹಾಗೂ ಬಸ್ ಫ್ಲೀಟ್‌ ಗಳು ಬರಲಿವೆ. ಜೊತೆಗೆ ಮೆಟ್ರೋ ಪ್ರಯಾಣ ದರ ಕಡಿಮೆ ಗೊಳಿಸಬೇಕು ಎಂದು ತಿಳಿಸಲಾಗಿದೆ.

ಟ್ರಾಫಿಕ್ ನಿಯಂತ್ರಕ್ಕೆ ಇವು ಅಲ್ಪಾವಧಿ ಸಲಹೆಗಳು

ಸಂಚಾರ ದಟ್ಟಣೆ ಕಡಿಮೆ ಮಾಡಲು ಜಂಕ್ಷನ್‌ಗಳ ಸಮೀಪವಿರುವ ಬಸ್ ನಿಲ್ದಾಣಗಳನ್ನು ಸ್ವಲ್ಪದಿಂದ ಸ್ವಲ್ಪ ಹಿಂದೆ ಅಥವಾ ಮುಂದಿನ ಸ್ಥಳಗಳಿಗೆ ವರ್ಗಾಯಿಸಬೇಕು. ಇದರಿಂದ ಬಸ್ ನಿಂತಾಗ ಜನ ಹತ್ತುವುದು, ಇಳಿಯುವುದು ಇದರಿಂದ ವಾಹನ ಸಂಚಾರ ನಿಧಾನವಾಗಿ ಟ್ರಾಫಿಕ್ ಸೃಷ್ಟಿ ಸಾಧ್ಯತೆ ಇರುತ್ತದೆ.

ಇನ್ನೂ ಟ್ರಾಫಿಕ್ ಅನುಗುಣವಾಗಿ ಸಿಗ್ನಲ್ ಸಮಯವನ್ನು ಸಿಂಕ್ರೊನೈಸ್ ಮಾಡಬೇಕು. ಅಗತ್ಯವಿದ್ದ ಕಡೆಗಳಲ್ಲಿ ಟ್ರಾಫಿಕ್ ಲೊಡ್ ಕಡಿಮೆ ಮಾಡಬೇಕು. ಈ ಮೇಲಿನ ಅಲ್ಪಾವಧಿಯ ಪ್ರಸ್ತಾವನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಶೇಕಡಾ 20-25 ರಷ್ಟು ನಗರದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+